ಸುದ್ದಿಬಿಂದು ಬ್ಯೂರೋ ವರದಿ
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದು ಮಹಿಳೆ ಆತನಿಗೆ ಕಪಾಳಮೋಕ್ಷ ಮಾಡಿದ್ದಾಳೆ.ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇದು ಕೇರಳದಲ್ಲಿ ನಡೆದಿದೆ.
ಮಹಿಳೆ ಬಸ್‌ನಲ್ಲಿ ಕುಳಿತಿದ್ದ ವೇಳೆ, ಪಕ್ಕದಲ್ಲಿ ಕುಳಿತ್ತಿದ್ದ ವ್ಯಕ್ತಿ ಮಹಿಳೆಯ ದೇಹವನ್ನ ಕೈಯಿಂದ ಕೈ ಮುಟ್ಟಲು ಯತ್ನಿಸಿದ್ದಾನೆ. ಈ ವೇಳೆ ಕೋಪಗೊಂಡ ಮಹಿಳೆ ವ್ಯಕ್ತಿಯ ಕೆನ್ನೆಗೆ ಬಾರಿಸಿದ್ದಾಳೆ. ಆತನ ಅಭ್ಯ ಕೃತ್ಯವನ್ನ ಅಲ್ಲೆ ಪಕ್ಕದಲ್ಲಿದ್ದ ವ್ಯಕ್ತಿ ಓರ್ವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಈ ಸಂದರ್ಭದಲ್ಲಿ ಬಸ್ ಕಂಡಕ್ಟರ್ ಸ್ಥಳಕ್ಕೆ ಬಂದು ಆರೋಪಿಯನ್ನು ಪ್ರಶ್ನಿಸುವ ದೃಶ್ಯವೂ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಆದರೆ, ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಈ ಘಟನೆಯಲ್ಲಿ ಮಧ್ಯ ಪ್ರವೇಶಿಸದೆ ಮೌನವಾಗಿದ್ದದ್ದು ಅನೇಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ವಿಡಿಯೋ ವೈರಲ್ ಆದ ಬಳಿಕ, ನೆಟ್ಟಿಗರು ಮಹಿಳೆಯ ಧೈರ್ಯವನ್ನು ಮೆಚ್ಚಿ, “ಇಂತಹ ಸಂದರ್ಭಗಳಲ್ಲಿ ಮೌನವಾಗಬೇಡಿ. ತಕ್ಷಣವಾಗಿ ಪ್ರತಿರೋಧಿಸಿ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
A woman traveling on a bus was harassed by a man seated next to her, following which she slapped him in anger. The video of the incident has gone viral on social media. The incident took place in neighboring Kerala.
While the woman was seated on the bus, the man beside her allegedly attempted to touch her inappropriately. Enraged, the woman immediately slapped him on the cheek. The entire incident was recorded by a fellow passenger on their mobile phone.
In the video, the bus conductor is also seen arriving at the spot and questioning the accused. However, the fact that other passengers on the bus remained silent and did not intervene has led to widespread dissatisfaction and criticism.
After the video went viral, netizens praised the woman’s courage, saying, “Do not remain silent in such situations. Take immediate action and resist.”
ಇದನ್ನೂ ಓದಿ/ ಲೋಕಾಯುಕ್ತಕ್ಕೆ ಆಸ್ತಿ ವಿವರ ನೀಡದ ಶಾಸಕ ದಿನಕರ ಶೆಟ್ಟಿ-ಸತೀಶ ಸೈಲ್


