ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ:ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೇಕೇರಿ ಸಮುದ್ರ ವ್ಯಾಪ್ತಿಯಲ್ಲಿ ಭೂ ತಾಯಿ ಮೀನಿನ ಶಿಖಾರಿ ನಡೆದಿದ್ದು, ಮೀನುಗಾರಲ್ಲಿ ಸಂಭ್ರಮ‌ ಮನೆ ಮಾಡಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಕಳೆದ ಎರಡು ವಾರಗಳಿಂದ ಹವಾಮಾನ ವೈಪರೀತ್ಯದಿಂದಾಗಿ ಸಮುದ್ರಕ್ಕೆ ತೆರಳಲು ಸಾಧ್ಯವಾಗದೆ ಬೇಸರಗೊಂಡಿದ್ದ ಮೀನುಗಾರರು ಇಂದು ಭೂ ತಾಯಿ ಮೀನಿನ ದೊಡ್ಡ ಶಿಖಾರಿ ನಡೆಸಿದ್ದಾರೆ. ಬಲೆಗಳಲ್ಲಿ ರಾಶಿ ರಾಶಿ ಭೂ ತಾಯಿ ಮೀನುಗಳು ಸಿಕ್ಕಿದ್ದು, ಮೀನುಗಾರರಲ್ಲಿ  ಸಂತಸದ ವಾತಾವರಣ ಉಂಟಾಗುವಂತೆ ಮಾಡಿದೆ.

“ಹವಾಮಾನ ಶಾಂತಗೊಂಡಿದ್ದು, ಇಂದು ಸಮುದ್ರ ತುಂಬಾ ಒಳ್ಳೆಯ ಶಿಖಾರಿಯನ್ನು ಕೊಟ್ಟಿದೆ. ನಮ್ಮ ಕುಟುಂಬಗಳಿಗೆ ಇದು ಹೊಸ ಆಶಾದಾಯಕ ಶುಭಾರಂಭ” ಎಂದು ಮೀನುಗಾರು ತಿಳಿಸಿದ್ದಾರೆ. ಇದರಿಂದಾಗಿ ಕರಾವಳಿಯ ಮೀನುಗಾರಿಕಾ ಚಟುವಟಿಕೆಗಳು ಮತ್ತೆ ಚುರುಕುಗೊಂಡಿದ್ದು, ಈ ಅದ್ಭುತ ಶಿಖಾರಿ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

Massive “Bhoo Thaayi” Fish Catch in the Arabian Sea – Fishermen Rejoice

Ankola: In the Belikeri coastal region of Ankola taluk in Uttara Kannada district, fishermen have made a massive catch of Bhoo Thaayi fish, creating an atmosphere of celebration among the local fishing community. The video of this remarkable catch has now gone viral on social media.

For the past two weeks, fishermen were unable to venture into the sea due to unfavorable weather conditions. However, with the weather now calm, they managed an incredible haul today — their nets were filled with large quantities of Bhoo Thaayi fish, bringing smiles and joy to the coastal community.

“The sea has finally calmed, and today’s catch has been truly rewarding. This feels like a hopeful new beginning for our families,” said the fishermen. With this, fishing activities along the coast have regained momentum, and visuals of the spectacular catch are spreading rapidly across social media platforms.

ಇದನ್ನೂ ಓದಿ/ಭತ್ತದ ಕೊಯ್ಲಿನ ವೇಳೆ ಬೃಹತ್ ಹೆಬ್ಬಾವು ಪತ್ತೆ