ಡಿಂಪಲ್ ಕ್ವೀನ್, ಕನ್ನಡ ಚಿತ್ರರಂಗದ ಖ್ಯಾತ ನಟಿ ರಚಿತಾ ರಾಮ್ ಹೊಸ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅವರು ಇದೀಗ ಆಟೋ ಚಾಲಕರ ಸಂಘದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ಈ ಕುರಿತು ರಚಿತಾ ರಾಮ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸಂತೋಷ ಹಂಚಿಕೊಂಡಿದ್ದಾರೆ, “ಅತಿರಥ ಮಹರಥ ಸಾರಥಿಗಳಿಗೆ ನನ್ನ ವಂದನೆಗಳು. ಆಟೋ ಚಾಲಕರ ಸಂಘದ ಬ್ರಾಂಡ್ ಅಂಬಾಸಡರ್ ಆಗಿ ನನ್ನನ್ನು ಆಯ್ಕೆ ಮಾಡಿದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಇದು ನನ್ನ ಜೀವನದ ಅತ್ಯಂತ ಗೌರವದ ಕ್ಷಣ,” ಎಂದು ಹೇಳಿದ್ದಾರೆ.
ರಚಿತಾ ರಾಮ್ ಅವರ ಈ ಹೊಸ ಜವಾಬ್ದಾರಿಯು ಅಭಿಮಾನಿಗಳಲ್ಲಿ ಸಂತೋಷ ಮೂಡಿಸಿದೆ.

 
							
 
			 
			 
			 
			
