ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ನಿತ್ಯವೂ ಅಂಗಡಿಗಳು ಓಪನ್ ಆದಂತೆ ಅನಂತಮೂರ್ತಿ ಹೆಗಡೆ ಅವರ ಹೋರಾಟದ ಅಂಗಡಿ‌ ಸಹ ತೆರದುಕೊಳ್ಳುತ್ತಿದ್ದವು, ಹೋರಾಟದ ಬಿಸಿಯೊಂದಿಗೆ ಜನರನ್ನ ಸಂಘಟಿಸಿ ವಿವಿಧ ಹೋರಾಟದ ಬಗ್ಗೆ ಧ್ವನಿ ಎತ್ತುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿಂದ ಮೌನವಾಗಿದ್ದು, ಅವರು ಈಗ ತಮ್ಮ ಹೋರಾಟದ ಅಂಗಡಿ ಮುಚ್ಚಿದ್ದರೆ ಎನ್ನುವ ಪ್ರಶ್ನೆ ಜನರನ್ನ ಕಾಡಲಾರಂಭಿದೆ..

ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಹೋರಾಟಕ್ಕೆ ಇಳಿದ ಅನಂತಮೂರ್ತಿ ಹೆಗಡೆ ವಿವಿಧ ಹೋರಾಟಗಳನ್ನ ನಡೆಸುತ್ತಾ ಬಂದಿದ್ದಾರೆ. ಪ್ರಮುಖವಾಗಿ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಾಗಿ ಶಿರಸಿಯಿಂದ ಕಾರವಾರದ ತನಕ‌ ಪಾದಯಾತ್ರೆ ಮಾಡಿದ್ದಾರೆ. ಬಳಿಕ ಶಿರಸಿ ಆಸ್ಪತ್ರೆಗಳಿಲ್ಲ. ರಸ್ತೆ ದುರಸ್ತಿಯಾಗಿಲ್ಲ. ಭೃಷ್ಟಾಚಾರ, 25ವರ್ಷದಲ್ಲಿ ಆಗದ ಶಿರಸಿ ಗ್ರಾಮೀಣ ಭಾಗದ ಎರಡು ವರ್ಷದಲ್ಲಿ ಆಗಿಲ್ಲ. ಸ್ಥಳೀಯ ಶಾಸಕರು ಅಭಿವೃದ್ಧಿ ಮಾಡಿಲ್ಲ. ಒಂದರ ಹಿಂದೆ  ಒಂದರಂತೆ ಹತ್ತಾರು ಹೋರಾಟ, ಮಾಧ್ಯಮ ಹೇಳಿಕೆಗಳು ಕಾಣಸಿಗತ್ತಾ ಇತ್ತು ಆದರೆ ಇಷ್ಟೆಲ್ಲಾ ಹೋರಾಟ ಮಾಡಿದ ಅನಂತಮೂರ್ತಿ ಹೆಗಡೆ ಇದೀಗ ಕಳೆದ ಎರಡು ತಿಂಗಳಿಂದ ತಮ್ಮ‌ ಹೋರಾಟ ಬಂದ್ ಮಾಡಿದ್ದಾರೆ.

ಕೆಲ ವರ್ಷಗಳ ಹಿಂದೆ ಚುನಾವಣಾ ಹೋರಾಟಕ್ಕೆ ಇಳಿದ  ಗಣಿಧಣಿಗಳಾಗಿದ್ದ ಚಲನಚಿತ್ರೋದ್ಯಮಿ ಯಲ್ಲಾಪುರದ ಡಿ ಅನೀಲ್‌ಕುಮಾರ ಹಾಗೂ ಡಿ ರವಿಕುಮಾರ ಭಾರೀ ಹುಮ್ಮಸಿನೊಂದಿಗೆ ವಿಧಾನಪರಿಷತ್‌ಚುನಾವಣೆಗೆ ಇಳಿದಿದು ಛಲದಂಖ ಮಲ್ಲನಂತೆ ಭಾರೀ ಪ್ರಚಾರದೊಂದಿಗೆ ರಾಷ್ಟ್ರೀಯ ಪಕ್ಷವನ್ನೆ ಹಿಂದಿಕ್ಕಿದ್ದರು. ನಂತರದಲ್ಲಿ ಬಂದ ಸಹೋದರ ಡಿ ರವಿಕುಮಾರ ಕೂಡ ತಾನ  ಯಾವ ರಾಜಕಾರಣಿಗೂ ಕಡಿಮೆ ಇಲ್ಲದಂತೆ “ಅತ್ಯಾತ್ಸುಹದೊಂದೊಂದಿಗೆ ಬಂದು ಜಿಲ್ಲಾದ್ಯಂತ ಮಿಂಚಿದ್ದರು. ಆದರ ತದನಂತರ  ಇವರಿಬ್ಬರೂ ಹೋರಾಟ,ರಾಜಕೀಯ ಇವೆಲ್ಲದರ ಬಾಗಿಲು ಮುಚ್ಚಿ ಜಿಲ್ಲೆಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಇತಂಹ ಅನೇಕ ಹೋರಾಟಗಾರರನ್ನು ಜಿಲ್ಲೆ ಕಂಡಿದೆ. ಅನಂತಮೂರ್ತಿ ಹೆಗಡೆ ಕೂಡ ಈ ಹಾದಿಯಲ್ಲೆ ಸಾಗುತ್ತಿದ್ದಾರ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರಲಾರಂಭಿಸಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ