ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಬಿಹಾರದಲ್ಲಿ ಕಳೆದ ಎರಡು ದಶಕಗಳಿಂದಲ್ಲೂ ನಿತೀಶ್‌ಕುಮಾರ ಮೈತ್ರಿಕೂಟ ಆಡಳಿತ ನಡೆಸುತ್ತಾ ಬರುತ್ತಿದೆ. ಹಾಗೆ ನೋಡುವುದಾದರೆ ಕರ್ನಾಟಕ ಕೂಡ ಹೊರತಾಗಿಲ್ಲ. ಇಲ್ಲಿಯೂ ಕೂಡ ಎಚ್‌ಡಿ ಕುಮಾರಸ್ವಾಮಿ ಅವರ ಮ್ಯಾಜಿಕ್ ವರ್ಕೌಟ್ ಆಗಿದೆ. ಅದಕ್ಕೆ ಕೇಂದ್ರದಲ್ಲಿ ಕೂಡ ಮೈತ್ರಿಕೂಟ ಮುಂದುವರೆದಿದೆ..ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಬಿಜೆಪಿಯಲ್ಲಿ ಅಂತಹ ಮಾಸ್ ಲೀಡರ್ ಕೂಡ ಇಲ್ಲದೆ ಇರುವುದರಿಂದ ಬಿಜೆಪಿಯ ದೆಹಲಿ ನಾಯಕರು ಎಚ್‌ಡಿ ಕುಮಾರಸ್ವಾಮಿ ಅವರ ಹೆಗಲಿಗೆ ಪಕ್ಷ ಸಂಘಟನೆ ಜವಾಬ್ದಾರಿ ನೀಡಲು ಸಿದ್ದರಾಗಿದ್ದು, ರಾಜ್ಯದಲ್ಲಿ ಕುಮಾರಸ್ವಾಮಿ ಅವರೆ ಸುಪ್ರಿಂ ಆಗಲಿದ್ದಾರೆ.
ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದ ಉದಾರಣೆ ಇಲ್ಲ. ಇನ್ನೂ ಒಮ್ಮೆ ಬಿಜೆಪಿ ಹಾಗೂ ಕಾಂಗ್ರೇಸ್ ಕೂಡ ಕುಮಾರಸ್ವಾಮಿ ಅವರ ಬೆಂಬಲದಿಂದಲ್ಲೇ ಅಧಿಕಾರಕ್ಕೇರಿತ್ತು..2006ರಲ್ಲಿ ಬಿಜೆಪಿ ಜೆಡಿಎಸ್ ಬೆಂಬಲ ಪಡೆದು ಅಧಿಕಾರ ಹಿಡಿತ್ತು. ಮೊದಲ ಅವಧಿಗೆ ಸಿಎಂ ಆದ ಎಚ್‌ಡಿಕೆ ಕುಮಾರಸ್ವಾಮಿ ಎರಡನೇ ಅವಧಿಗೆ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದೆ ದೋಸ್ತಿಯಿಂದ ಮುರಿದುಕೊಂಡರು. ಅದಾದ ಬಳಿಕ ಮತ್ತೆ ಯಾವತ್ತು ಬಿಜೆಪಿ ಜೆಡಿಎಸ್ ದೋಸ್ತಿ ಮಾಡಲ್ಲ ಎಂದು ಎಲ್ಲರೂ ಅಂದು ಕೊಂಡಿದ್ದರು. ಆದರೆ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಅನಿರ್ವಾಯವಾಗಿ ಮೋದಿ ನೇತೃತ್ವ ಬಿಜೆಪಿ ಜೆಡಿಎಸ್ ಜೊತೆ ದೋಸ್ತಿ ಮಾಡಿಕೊಂಡು ಕೇಂದ್ರದಲ್ಲಿ ಅಧಿಕಾರ ಹಿಡಿದುಕೊಂಡಿದೆ..
ಈ ಅನುಭವದ ಆಧಾರದಲ್ಲಿ ಬಿಜೆಪಿ ಕೇಂದ್ರ ನಾಯಕರು ಈಗ ಒಂದು ನಿರ್ಣಯಕ್ಕೆ ಬಂದಿದ್ದಾರೆ. ಅದೇನೆಂದರೆ, ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಸಾರಥ್ಯದಲ್ಲಿ ಪಕ್ಷ ಸಂಘಟನೆ ಮಾಡಿದರೆ 2028ರಲ್ಲಿ ಕರ್ನಾಟಕದಲ್ಲೂ ಅಧಿಕಾರ ಹಿಡಿಯಬಹುದು ಎನ್ನುವುದು ಕೇಂದ್ರ ಬಿಜೆಪಿ ಕೇಂದ್ರ ಬಿಜೆಪಿ ನಾಯಕರಿಗೆ ಮನವರಿಕೆಯಾಗಿದೆ. ಈ ಮೈತ್ರಿಗೆ ಸಮನ್ವಯ ಸಮಿತಿ ರಚಿಸಲು ತೀರ್ಮಾನವಾಗಿದೆ. ಕುಮಾರಸ್ವಾು ಅವರಿಗೆ ಬಿಜೆಪಿ ವರಿಷ್ಠರ ಪೂರ್ಣ ಬೆಂಬಲ ಕೂಡ ಇದೆ. ಹಾಗೇನಾದರೂ ಆದರೆ ರಾಜ್ಯದಲ್ಲಿ ಜೆಡಿಎಸ್ ಹಿಡಿತ ಇರುವ ಕ್ಷೇತ್ರದಲ್ಲಿ ಕುಮಾರಸ್ವಾಮಿ ಭಯಸಿದ ಅಭ್ಯರ್ಥಿಗಳನ್ನೆ ಕಣಕ್ಕಿಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ…
ಮುಂದುವರೆಯುವುದು…….


