ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಸಹಕಾರ ಬ್ಯಾಂಕ್ (KDCC) ಚುನಾವಣೆಯು ತೀರಾ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಮಾಜಿ ಸಚಿವ ಹಾಗೂ ಹಾಲಿ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಇವರ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆಯುತ್ತಿದೆ.

ಚುನಾವಣೆಯ ಹಿನ್ನಲೆಯಲ್ಲಿ ಇಬ್ಬರು ನಾಯಕರೂ ತಮ್ಮ ತಮ್ಮ ಬಣದ ಬೆಂಬಲಿಗರನ್ನು ಒಗ್ಗೂಡಿಸಿಕೊಂಡು ತೀವ್ರ ರಣತಂತ್ರ ರೂಪಿಸುವ ಮೂಲಕ ಪೈಪೋಟಿ ನಡೆಸುತ್ತಿದ್ದಾರೆ. ಮತದಾನಕ್ಕೂ ಮೊದಲು ಮಾರಿಕಾಂಬಾ ದೇವಿ ದೇವಾಲಯಕ್ಕೆ ಪೂಜೆ ಸಲ್ಲಿಸಿ ಬಂದ ಸಚಿವ ಮಂಕಾಳ ವೈದ್ಯ ಅವರು ಮತದಾನದಲ್ಲಿ ಭಾಗವಹಿಸಿದರು.

ಇನ್ನೊಂದೆಡೆ ಶಿವರಾಮ ಹೆಬ್ಬಾರ್ ಮತದಾನ ಸ್ಥಳದಲ್ಲೇ ಬೀಡು ಬಿಟ್ಟು, ತಮ್ಮ ಬೆಂಬಲಿಗರೊಂದಿಗೆ ಮತದಾನ ಪ್ರಕ್ರಿಯೆಯನ್ನು ನಿಕಟವಾಗಿ ಅವಲೋಕಿಸುತ್ತಿದ್ದಾರೆ. ಮತದಾನವು ತುರುಸಿನಿಂದ ನಡೆಯುತ್ತಿದ್ದು, ಇಬ್ಬರ ಬಣಗಳೂ ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಿವೆ. ಚುನಾವಣಾ ಫಲಿತಾಂಶದಿಂದ ಉತ್ತರ ಕನ್ನಡ ರಾಜಕೀಯ ವಲಯದಲ್ಲಿ ಹೊಸ ಸಮೀಕರಣಗಳು ಮೂಡುವ ಸಾಧ್ಯತೆಯಿದೆ.

ಇದನ್ನೂ ಓದಿ/ಉತ್ತರ ಕನ್ನಡದಲ್ಲಿ ನಿರಂತರ ಮಳೆ : ಶಾಲೆಗಳಿಗೆ ಇಂದು ರಜೆ