ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ; ದೀಪಾವಳಿ ಹಬ್ಬದ ಪ್ರಯುಕ್ತ ಹೊಂಡೆ, ಅಂದರ್ ಬಾಹರ್, Colour Choice, ಸೋಲಕಾಯಿ, ಕುಟುಕುಟೆ ಮೊದಲಾದ ಸಾಂಪ್ರದಾಯಿಕ ಆಟಗಳನ್ನು ಆಡಲು ಅನುಮತಿ ನೀಡುವಂತೆ ಕೋರಿ ಉತ್ತರಕನ್ನಡ ಜಿಲ್ಲಾಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಹಾಗೂ ಅಸಂಘಟಿತ ಕಾರ್ಮಿಕರ ಸಂಘದಿಂದ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅನಾದಿಕಾಲದಿಂದಲೂ ನಡೆದು ಬಂದಿರುವ ಸಂಪ್ರದಾಯದ ಭಾಗವಾಗಿ ಈ ಆಟಗಳು ಹಬ್ಬದ ಮನೋರಂಜನೆಯ ಒಂದು ಅಂಗವಾಗಿವೆ. ಆದ್ದರಿಂದ ಅಕ್ಟೋಬರ್ 19 ರಿಂದ ಅಕ್ಟೋಬರ್ 22ವರೆಗೆ ಈ ಆಟಗಳಿಗೆ ಅನುಮತಿ ನೀಡಬೇಕು. ಒಂದು ವೇಳೆ ಈ ಆಟಗಳಿಗೆ ಅನುಮತಿ ನೀಡದೇ ಇದ್ದರೆ, ಕುಮಟಾ ತಾಲೂಕಿನಲ್ಲಿ ನಡೆಯುವ ಹಬ್ಬ, ಜಾತ್ರೆ ಹಾಗೂ ಉತ್ಸವಗಳ ಮನೋರಂಜನಾ ಕಾರ್ಯಕ್ರಮಗಳಿಗೆ ಸಹ ಅನುಮತಿ ನೀಡಬಾರದು. ಈ ಆಟಗಳಿಗೆ ಪರವಾನಗಿ ನೀಡದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ” ಎಂದು ಮನವಿ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಕೊಟ್ಟಿಗೆಯೊಳಗೆ ನುಗ್ಗಿದ ಚಿರತೆ : ರಕ್ತದ ಮಡಿಲಲ್ಲಿ ಎರಡು ಕರುಗಳ ಸಾವು