ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಕಾರ್, ಬೈಕ್, ಮನೆ ಹಾಗೂ ಬ್ಯಾಟರಿ ಕಳ್ಳತನ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದ ಕುಖ್ಯಾತ ಅಂತರ್ಜಿಲ್ಲಾ ಕಳ್ಳರನ್ನು ಕೇವಲ 48 ಗಂಟೆಗಳಲ್ಲಿ ಬಂಧಿಸುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಕ್ಟೋಬರ್ 8ರಂದು ಮಧ್ಯರಾತ್ರಿ, ಕುಮಟಾ ಗಿಬ್ ಸರ್ಕಲ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಮ್ರಾನ್ ಬ್ಯಾಟರಿ ಅಂಗಡಿಯಲ್ಲಿ ಕಳ್ಳರು ಸೆಟ್ರಸ್ ಮುರಿದು,96,000 ಮೌಲ್ಯದ 12 ಅಮರಾನ್ ಬ್ಯಾಟರಿಗಳನ್ನು ಕದ್ದೊಯ್ದಿದ್ದರು. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧಿಸಿದ ಆರೋಪಿತರು ಪೌಜಾನ್ ಅಹಮದ್ ಆಟೋ ಚಾಲಕ, ಭಟ್ಕಳದ ತಗ್ಗರಗೋಡ್ ಜಾಲಿ ನಿವಾಸಿ, ಮೊಹಮ್ಮದ್ ಸುಪಿಯಾನ್ ಟೈಲ್ಸ್ ಕಾರ್ಮಿಕ, ಗುಳ್ಮೆ ಭಟ್ಕಳ ನಿವಾಸಿ ಎಂದು ಗುರುತಿಸಲಾಗಿದೆ.
ಆರೋಪಿತರಿಂದ ಲಕ್ಷ ಮೌಲ್ಯದ ಮಾರುತಿ ರಿಟ್ಜ್ ಕಾರು (ಕೆಎ 18 ಎನ್ 4510) ಹಾಗೂ 96,000 ಮೌಲ್ಯದ 12 ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ.ತನಿಖೆಯ ವೇಳೆ ಪತ್ತೆಯಾದಂತೆಯಾದ ಕಾರು ಹಾಸನ ಜಿಲ್ಲೆಯ ಬೇಲೂರು ಪೊಲೀಸ್ ಠಾಣೆಯಲ್ಲಿ ಕಳ್ಳತನವಾಗಿದ್ದ ವಾಹನ ಆಗಿದ್ದು, ಆರೋಪಿ ಪೌಜಾನ್ ಅಹಮದ್ ಅದನ್ನು ಕದ್ದೊಯ್ದಿದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿತರು ಭಟ್ಕಳ ನಗರ, ಭಟ್ಕಳ ಗ್ರಾಮೀಣ, ಬೈಂದೂರು, ಗಂಗೊಳ್ಳಿ ಹಾಗೂ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.ಬಂಧಿತರಿಂದ ಕಳುವಾದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಕುಮಟಾ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕ ಯೋಗೇಶ್ ಕೆ.ಎಂ. ಹಾಗೂ ತನಿಖಾಧಿಕಾರಿ ಮಯೂರ ಪಟ್ಟಣಶೆಟ್ಟಿ ನೇತೃತ್ವದಲ್ಲಿ, ಸಿಬ್ಬಂದಿಗಳಾದ ಗಣೇಶ್ ನಾಯ್ಕ, ದಯಾನಂದ ನಾಯ್ಕ, ಚಿದಾನಂದ ನಾಯ್ಕ, ಕಿರಣ ನಾಯ್ಕ, ಪ್ರದೀಪ ನಾಯ್ಕ ಹಾಗೂ ಸಿ.ಡಿ.ಆರ್. ಸೆಲ್ನ ಉದಯ ಗುನಗಾ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿತರ ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ : ಮದುವೆ ರಿಸೆಪ್ಷನ್ನಲ್ಲಿ ಪಾರ್ಕಿಂಗ್ ವಿವಾದ: ಭಟ್ಕಳದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ,