ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಸದ್ಯ ಕುಮಟಾ ಪಟ್ಟಣದ ಎಲ್ಲೆಡೆ  ಪುರಸಭೆಯ ಮುಖ್ಯಾಧಿಕಾರಿ ಲಂಚದ ಚರ್ಚೆ ಕೇಳಿಬರುತ್ತಿದ್ದು, ಲಂಚದ ಆಸೆಗಾಗಿ‌ ಮುಖ್ಯಾಧಿಕಾರಿ ರೆವಿನ್ಯೂ ಅಧಿಕಾರಿಗೆ ಕಿರುಕುಳ ನೀಡಿರುವುದೇ ಸಾಕ್ಷಿಯಾಗಿದೆ.ಇನ್ನೂ ಮುಖ್ಯಾಧಿಕಾರಿ ಪಡೆಯುತ್ತಿದ್ದ ಲಂಚದಲ್ಲಿ ಯಾರಿಗೆಲ್ಲಾ ಎಷ್ಟು ಪಾಲು ಹಂಚಿಕೆ ಮಾಡುತ್ತಿದ್ದರೆಂಬ ಚರ್ಚೆಗಳು ಸಹ ಜೋರಾಗಿದೆ.

ಪುರಸಭೆಯ ಮುಖ್ಯಾಧಿಕಾರಿಯಾಗಿರುವ ಎಂ.ಆರ್. ಸ್ವಾಮಿ, ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅನಧಿಕೃತ ಕಟ್ಟಡಕ್ಕೆ ಒಂದಕ್ಕೆ  ಅನುಮತಿ ನೀಡಿದರೆ ನಾಲ್ಕು ಲಕ್ಷ ರೂಪಾಯಿ ಸಿಗುತ್ತದೆ ಎಂದು ಹೇಳಿದ್ದಾರೆಯೆಂಬುದು ಈಗ ರೆವಿನ್ಯೂ ಅಧಿಕಾರಿ ನಾಪತ್ತೆ ಆಗುವ ಪೂರ್ವದಲ್ಲಿ ಬರೆದ ಪತ್ರದಲ್ಲಿ ಬಹಿರಂಗವಾಗಿದೆ. ಇದನ್ನ ಹೊರತುಪಡಿಸಿ, ಈ ಮುಖ್ಯಾಧಿಕಾರಿ ಎಷ್ಟು ಲಂಚ ಪಡೆದು ಯಾವ್ಯಾವ ಅಕ್ರಮಗಳಿಗೆ ಕೈ ಜೋಡಿಸಿದ್ದಾರೋ ಎಂಬುದರ ಸುಳಿವು ಈ ಘಟನೆಯಿಂದಲೇ ಸಿಗುತ್ತಿದೆ. ಲಂಚ ಕೊಟ್ಟರೆ ಯಾವ ಕೆಲಸವೂ ಆಗುತ್ತದೆ ಎನ್ನುವುದಕ್ಕೆ ಈ ಒಂದು ಘಟನೆ ತಾಜಾ ಉದಾರಣೆ

ಈತ ಲಂಚ ಪಡೆಯುತ್ತಿರುವ ಬಗ್ಗೆ ಕುಮಟಾದ ಹಲವರಿಗೆ ಗೊತ್ತಿತ್ತು ಎನ್ನಲಾಗಿದ್ದು, ಅನೇಕ ಬಾರಿ ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದರು ಸಹ  ಯಾವುದೇ ಕೈಗೊಳ್ಳಲಾಗಿಲ್ಲ ಎಂದು ಅನೇಕರು ಈಗ ಆರೋಪಿಸುತ್ತಿದ್ದಾರೆ. ಅಧಿಕಾರಿಯ ಲಂಚಾವತಾರ ಎಲ್ಲರಿಗೂ ಗೊತ್ತಿದ್ದರೂ ಕ್ರಮ ಕೈಗೊಳ್ಳಬೇಕಾದವರು ಮೌನವಾಗಿದ್ದೇಕೆ ಅನೇಕರು ಅನೇಕ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿದ್ದಾರೆ.

ನಾಲ್ಕು ಲಕ್ಷದ ಡೀಲ್‌ ಆಧರಿಸಿ ಸರಿಯಾಗಿ ತನಿಖೆ ನಡೆಸಿದರೆ ಇನ್ನೂ ಅನೇಕ ಡೀಲ್‌ ಪ್ರಕರಣಗಳು ಹೊರಬರುವ ಸಾಧ್ಯತೆ ಇದೆ. ಮುಖ್ಯಾಧಿಕಾರಿ ಲಂಚ ತಿನ್ನುವುದಕ್ಕಾಗಿ ಜನಪ್ರತಿನಿಧಿಗಳ ಹೆಸರನ್ನು ಬಳಸಿಕೊಂಡು ಸಿಬ್ಬಂದಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆಯೋ ಅಥವಾ ನಿಜವಾಗಿಯೂ ಜನಪ್ರತಿನಿಧಿಗಳೂ ಈ ಡೀಲ್‌ನಲ್ಲಿ ಭಾಗಿಯಾಗಿದ್ದಾರೆಯೋ ಎಂಬ ಪ್ರಶ್ನೆ ಜನರಲ್ಲಿ ಹುಟ್ಟಿಕೊಂಡಿದೆ.

ಇವರು ಹಿಂದೆ ಕೆಲಸ ಮಾಡಿದ ಕಚೇರಿಯಲ್ಲಿಯೂ ಸಹ ಅವ್ಯವಹಾರ ನಡೆಸಿದ ಕಾರಣಕ್ಕಾಗಿ ವರ್ಗಾವಣೆಗೊಳಗಾಗಿದ್ದಾರೆ ಎನ್ನಲಾಗಿದೆ. ಈಗಲಾದರೂ ಲೋಕಾಯುಕ್ತ ಅಧಿಕಾರಿಗಳು ಯಾರಾದರೂ ದೂರು ನೀಡುವುದನ್ನು ಕಾಯದೇ ಸ್ವಯಂ ಪ್ರೇರಿತವಾಗಿ ತನಿಖೆ ಕೈಗೊಂಡರೆ, ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಅವರ ಭ್ರಷ್ಟಾಚಾರ ಇನ್ನಷ್ಟು ಬಯಲಾಗುವ ಸಾಧ್ಯತೆ ಇದೆ.

“ಮುಖ್ಯಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ
ರೆವಿನ್ಯೂ ಅಧಿಕಾರಿ ವೆಂಕಟೇಶ ಅವರಿಗೆ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಕಿರುಕುಳ ನೀಡಿರುವುದು ಅಕ್ಷಮ್ಯ ಅಪರಾಧ. ಇವರು ಸಿಬ್ಬಂದಿಗಳಿಗೆ ಗೌರವ ಕೊಡುವುದನ್ನ ಮಾಡತ್ತಿರಲಿಲ್ಲ. ಸಾಕಷ್ಟು ಸಲ ಕರೆದು ಎಚ್ಚರಿಸಿದ್ದೇವೆ. ಘಟನೆ ಕುರಿತು ನಾಳೆ ಸಭೆ ಕರೆದಿದ್ದೇವೆ. ಎಲ್ಲರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ತಪ್ಪು ಯಾರೆ ಮಾಡಿದರೂ ತಪ್ಪೆ. ಸಭೆಯ ಬಳಿಕ ತೀರ್ಮಾನ ತೆಗದುಕೊಳ್ಳಲಾಗುವುದು. ಇಂತಹ ಅಧಿಕಾರಿ ಇಟ್ಟಕೊಂಡರೆ ಮುಂದಿನ ದಿನ ನಮ್ಮಗೂ ಕೆಟ್ಟ ಹೆಸರು ಬರಬಹುದು.
— ಸುಮತಿ ಭಟ್, ಕುಮಟಾ ಪುರಸಭೆ ಅಧ್ಯಕ್ಷರು

ಭ್ರಷ್ಟ ಅಧಿಕಾರಿ ಎಂ.ಆರ್. ಸ್ವಾಮಿ ವಿರುದ್ಧ ಲೋಕಾಯುಕ್ತ, ಸಿಬಿಐ ತನಿಖೆ ಆಗಲಿ”
ಅಕ್ರಮ ಕಟ್ಟಡಕ್ಕೆ ಅನುಮತಿ ನೀಡಲು ರೆವಿನ್ಯೂ ಅಧಿಕಾರಿ ವೆಂಕಟೇಶ ಎಂ.ಅವರಿಗೆ ಕಿರುಕುಳ ನೀಡಿರುವುದಲ್ಲದೆ, ತನ್ನ ಲಂಚಕ್ಕಾಗಿ ಪ್ರಾಮಾಣಿಕ ಅಧಿಕಾರಿಯಾಗಿದ್ದ ವೆಂಕಟೇಶ ಅವರ ಮೇಲೆ ಒತ್ತಡ ಹೇರಿರುವ ಮುಖ್ಯಾಧಿಕಾರಿ ವಿರುದ್ಧ ತಕ್ಷಣದಿಂದಲೇ ಲೋಕಾಯುಕ್ತ ಅಥವಾ ಸಿಬಿಐ ತನಿಖೆ ನಡೆಯಬೇಕು. ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದಿದ್ದರೆ ಈ ವಿಷಯವನ್ನು ಮುಖ್ಯಮಂತ್ರಿ ಅವರ ಗಮನಕ್ಕೂ ತರಲಾಗುವುದು.
ಭಾಸ್ಕರ್ ಪಟಗಾರ, ಕೆಪಿಸಿಸಿ ಸಂಯೋಜಕರು

ಇದನ್ನೂ ಓದಿ : ಬಂದರಲ್ಲಿ‌ ಲಂಗರು ಹಾಕಿದ್ದ ಬೋಟ್ ಮುಳುಗಡೆ