ನನ್ನ ಪ್ರೀತಿಯ ಅಮ್ಮ, ನಾನು ನಿಮ್ಮಿಂದ ದೂರ ಹೋಗುತ್ತಿರುವುದಕ್ಕೆ ನನಗೆ ತುಂಬಾ ದುಃಖ ತರುತ್ತಿದೆ. ಆದರೆ ಈ ಸಂದರ್ಭದಲ್ಲಿ ನಾನು ನಾನಾಗಿ ಇಲ್ಲ. ಒಂದು ಕಡೆ ಕೆಲಸದ ಒತ್ತಡ ಆದರೂ ನಿನ್ನೊಂದಿಗೆ ಇದ್ದು ನನ್ನ ಮಾನಸಿಕ ಒತ್ತಡವನ್ನು ಕಳೆಯುತ್ತಿದ್ದೆ. ಇಂದು ನನ್ನ ಜೀವನದಲ್ಲೇ ಮರೆಯಲಾಗದ ಸಂಗತಿ ನಡೆಯಿತು.
ನಾನು ನನ್ನ ಪ್ರೀತಿಯ ತಂದೆಯ ಆಶಯದಂತೆ ಅನುಕಂಪದ ಆಧಾರದ ಮೇಲೆ ಕುಮಟಾ ಪುರಸಭೆಯಲ್ಲಿ ತುಂಬಾ ಸಂತೋಷದಿಂದ ಕೆಲಸ ಮಾಡುತ್ತಿದ್ದೆ. ಈ ಹಿಂದಿನ ಒಂದೆರಡು ತಿಂಗಳಿಂದ ಮಾನಸಿಕವಾಗಿ ಅಸ್ವಸ್ಥನಾಗಿದ್ದೇನೆ ಎನಿಸುತ್ತಿದೆ. ನಮ್ಮ ಕಚೇರಿಯ ಮುಖ್ಯಾಧಿಕಾರಿಗಳು `ಎಂ.ಆರ್.ಸ್ವಾಮಿ’ ಎಂಬುವರು ನನಗೆ ಹಲವಾರು ದಿನಗಳಿಂದ ದೈಹಿಕವಾಗಿ ಹೀಯಾಳಿಸುವುದು ಹಾಗು ಮಾನಸಿಕವಾಗಿ ಕುಗ್ಗಿಸುವಂತೆ ಮಾತನಾಡುತ್ತಿದ್ದರು.
ಕೆಲಸದಲ್ಲಿ ಇದೆಲ್ಲ ಸಹಜ ಎಂದು ಮುಂದುವರಿಸಿಕೊಂಡು ಹೋದೆ.
ನನ್ನೊಂದಿಗೆ ನನ್ನ ಸಹೋದ್ಯೋಗಿಗಳಿಗೂ ಅವಾಚ್ಯ ಶಬ್ದಗಳಿಂದ ಬಯ್ಯುವುದು ಹಾಗು ಹೀಯಾಳಿಸುವುದು ಮಾಡುತ್ತಿದ್ದರು. ಒಂದು ದಿನಾಂಕ ೭/೧೦.೨೦೨೫ ರ ಸಂಜೆ ಕಚೇರಿಯಲ್ಲಿ ಎಲ್ಲರ ಮುಂದೆ ಸಭೆಯಲ್ಲಿ ಕಾನೂನು ಬಾಹಿರ ಕೆಲಸಕ್ಕೆ ನನಗೆ ಪ್ರೋತ್ಸಾಹಿಸಿದಾಗ ನಾನು ಆಗುವುದಿಲ್ಲ ಎಂದೆ. ಅವರು ಅದಕ್ಕೆ ನನಗೆ ನಾಲ್ಕೈದು ಬಾರಿ ಎಲ್ಲರ ಮುಂದೆ ಅವಾಚ್ಯ ಶಬ್ದಗಳಿಂದ ಬೈದು, ಕೀಳು ಜಾತಿಯವನಿಗೆ ಈ ಕೆಲಸ ಎಲ್ಲ ಬೇಕಾ? ಎಂದೆಲ್ಲಾ ಅವಾಚ್ಯವಾಗಿ ಬೈದರು. ನಿನ್ನ ತಂದೆಯ ಹಾಗೆಯೇ ನಿನಗೂ ಹಾಗೇ ಬುದ್ಧಿ ಬಂದಿರುತ್ತದೆ ಎಂದು ಮತ್ತೆ ಅವಾಚ್ಯ ಶಬ್ದಗಳಿಂದ ಎಲ್ಲ ಸಿಬ್ಬಂದಿಗಳ ಮಧ್ಯೆ ಬೈದು, ನಿನ್ನ ಬಳಿ ಆಗುವುದಿಲ್ಲ ಎಂದರು.
ನ್ಯಾಷನಲ್ ಹೈವೆ ಹತ್ತಿರ ಇರುವ ವಿನಾಯಕ ಹೋಟೆಲ್ ಎಂಬ ಅನಧಿಕೃತ ಕಟ್ಟಡವನ್ನು ಅಧಿಕೃತ ಎಂದು ತಿದ್ದಲು ಹೇಳಿ ನನಗೆ ಶಾಸಕರು ದಿನಕರ ಶೆಟ್ಟಿ ಅವರ ಪ್ರೆಷರ್ ಇದೆ ಮಾಡು ಎಂದಿದ್ದಾರೆ. ಅದರಿಂದ ನನ್ನ ಮುಖ್ಯಾಧಿಕಾರಿಗಳಿಗೂ ೪ಲಕ್ಷ ಗಟ್ಟಲೆ ಹಣ ಸಿಗುತ್ತದೆ ಎಂದು ಪದೇ ಪದೇ ಅವಾಚ್ಯ ಶಬ್ದಗಳಿಂದ ಬೈದು ನನ್ನನ್ನು ಕೆಲಸದಿಂದ ತೆಗೆದುಹಾಕುವೆ, ನೊಟೀಸ್ ನೀಡುವೆ ಎಂದು ಹೊಡೆಯಲು ಬಂದಿದ್ದರು. ಅವರು ಪೂರ್ಣ ಕುಡಿದ ಮತ್ತಿನಲ್ಲಿ ಪದೇ ಪದೇ ಅವಾಚ್ಯವಾಗಿ ಎಲ್ಲರ ಮುಂದೆ ಬೈದಿದ್ದು ನನಗೆ ತಾಳಲಾರದೆ ಮಾನಸಿಕ ದುಃಖ ತಂದಿರುತ್ತದೆ. ಇದಕ್ಕಾಗಿ ನಾನು ನಿಮ್ಮನ್ನು ಬಿಟ್ಟು ದೂರ ಹೋಗುತ್ತಿದ್ದೇನೆ.
ತಪ್ಪಾಯಿತು ಅಮ್ಮ. ತಮ್ಮನನ್ನು ಸರಿಯಾಗಿ ನೋಡಿಕೊ. ತಮ್ಮನಿಗೆ ಹೇಳು. ನಾನು ಮತ್ತು ಅಪ್ಪ ನಿಮ್ಮೊಂದಿಗೆ ಎಂದಿಗೂ ಇರುತ್ತೇವೆ. ಸ್ವಾರಿ ಅಮ್ಮ ಹಾಗು ನನ್ನ ಸಹೋದ್ಯೋಗಿಗಳನ್ನು ಬಿಟ್ಟು ಹೋಗುತ್ತಿರುವುದು ತುಂಬಾ ದುಃಖ ಆಗುತ್ತಿದೆ. ನೀವು ನನ್ನಂತೆ ಆಗಬಾರದು ಎಂದು ನಾನು ಈ ರೀತಿ ಮಾಡುತ್ತಿದ್ದೇನೆ. ಇಂತಿ ತಮ್ಮ ಪ್ರೀತಿಯ ವೆಂಕಟೇಶ ಆರ್.
ಇದನ್ನೂ ಓದಿ : ಶಾಸಕ ದಿನಕರ ಶೆಟ್ಟಿಗೆ ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬರಲಿ : ಭಾಸ್ಕರ್‌ಪಟಗಾರ