ಕಾರವಾರ : ಮಾಜಿ ಕೇಂದ್ರ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲೆ ಅತಿ ಹೆಚ್ಚು ಬಾರಿ ಸಂಸದರಾಗಿ ಕಾರ್ಯ ನಿರ್ವಹಿಸಿದ್ದ ಅನಂತಕುಮಾರ್ ಹೆಗಡೆ ಯವರ ರಾಜಕೀಯ ಸನ್ಯಾಸ ಅವರ ಅಪಾರ ಅಭಿಮಾನಿಗಳಿಗೆ ಹಾಗೂ ಪರಮಾಪ್ತ ಕಾರ್ಯಕರ್ತರಿಗೆ ಒಂದಡೆ ಪಕ್ಷದ ಬಾಗಿಲು ಮುಚ್ಚಿ ಇನ್ನೊಂದಡೆ ಅನಂತಣ್ಣನ ಅಭಿಮಾನಿಗಳು ಎಂದು ಹೇಳಿಕೊಂಡು ಗುರುತಿಸಲಾಗದೆ ಇರುವ ಸಂದಿಘ್ನ ಪರಿಸ್ಥಿತಿ ನಿರ್ಮಾಣವಾದಂತೆ ತೋರುತ್ತಿದೆ,
ನಾನು ರಾಜಕಾರಣಿ ಯಾಗಿ ಹುಟ್ಟಿಲ್ಲ ಹಾಗೆ ರಾಜಕಾರಣಿ ಯಾಗಿಯೇ ಸಾಯುವುದಿಲ್ಲ” ಎನ್ನುವ ಅವರ ಮಾತಿಗೆ ಬದ್ದವಾಗಿರುವಂತೆ ಮೇಲ್ನೋಟಕ್ಕೆ ಅವರ “ಕದಂಬ” ಸಂಸ್ಥೆ ಯನ್ನ ದೇಶ ವಿದೇಶಗಳಲ್ಲಿ ಮುನ್ನಡೆಸುತ್ತಿರುವ ರೀತಿಯಿಂದಾನೆ ಅರ್ಥವಾಗುತ್ತಿದೆ ಮುಂದೊಂದು ದಿನ ಕದಂಬ ಸಂಸ್ಥೆ ಹೆಮ್ಮರವಾಗಿ ಬೆಳೆಯುವ ಸಾಧ್ಯತೆ ದಟ್ಟವಾಗಿದೆ,
ಅನಂತಕುಮಾರ್ ಹೆಗಡೆ ಯವರನ್ನ ಬೆಂಬಲಿಸುತ್ತಿದ್ದ ಕಾರ್ಯಕರ್ತರನ್ನು ಬಿಜೆಪಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಮುಖರು ಪರಿಗಣಿಸುತ್ತಾರಾ ಇಲ್ಲ ಕಡೆಗಣಿಸುತ್ತಾರಾ ಎಂದು ಮುಂಬರುವ ದಿನಗಳಲ್ಲಿ ಕಾದು ನೋಡಬೇಕಿದೆ.
ಇದನ್ನೂ ಓದಿ : ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ಡಾ, ಸಲೀಮ್ ಸೊನ್ನೆಖಾನ್ : ಕಾಂಗ್ರೇಸ್ ಟಿಕೇಟಗಾಗಿ ಅರ್ಜಿ ಸಲ್ಲಿಕೆ