ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ :ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಮುಗ್ದಂ ಕಾಲೋನಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ರಾಶಿ ರಾಶಿ ಗೋವುಗಳ ಮೂಳೆ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ನಗರ ಠಾಣೆಯ ಪೊಲೀಸರು ಇಬ್ಬರೂ ಆರೋಪಿಗಳನ್ನ ಬಂಧನ ಮಾಡಿದ್ದಾರೆ.

ಬಂಧಿತ ಆರೋಪಿಗಳು ಸಫಾ ಸ್ಟ್ರೀಟ್, ಮುಗ್ದಂ ಕಾಲೋನಿಯ ಮೊಹಮ್ಮದ್ ಸಮಾನ್ ಭಟ್ಕಳ,‌ ಬಟ್ಟೆ ಅಂಗಡಿಯಲ್ಲಿ ಕೆಲಸ ಹಾಗೂ ಚೌಥನಿ ಮೇನ್ ರೋಡ್, ಭಟ್ಕಳದ ಬಟ್ಟೆ ವ್ಯಾಪಾರಿ ಮೊಹಮ್ಮದ್ ರಾಹೀನ್ ಬಂಧಿತ ಆರೋಪಿಗಳು.

ಭಟ್ಕಳ ಶಹರ ಪೋಲಿಸ್ ಠಾಣೆಯ ಇನ್ಸಪೆಕ್ಟರ್ ದಿವಾಕರ ಪಿ.ಎಂ. ನೇತೃತ್ವದಲ್ಲಿ, ಪಿ.ಎಸ್.ಐ ನವೀನ್ ನಾಯ್ಕ, ಪಿ.ಎಸ್.ಐ ತಿಮ್ಮಪ್ಪ ಎಸ್ ಸೇರಿದಂತೆ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ದಿನೇಶ್ ನಾಯ್ಕ, ದೇವು ನಾಯ್ಕ, ದೀಪಕ್ ನಾಯ್ಕ, ವಿನಾಯಕ ಪಾಟೀಲ್ ಮತ್ತು ಕಾನ್ಸ್‌ಟೇಬಲ್ ಕಾಶಿನಾಥ ಕೊಟಗೊಣಸಿ, ಸುರೇಶ್ ಮರಾಠಿ, ಕಿರಣ ಪಾಟೀಲ್, ರೇವಣಸಿದ್ದಪ್ಪ ಮಾಗಿ ಸೇರಿದಂತೆ ಹಲವು ಸಿಬ್ಬಂದಿ ಪಾಲ್ಗೊಂಡಿದ್ದರು

ಈ ಇಬ್ಬರು ಆರೋಪಿಗಳು ಗೋವುಗಳನ್ನು ಕಳ್ಳತನ ಮಾಡಿ ಭಟ್ಕಳಕ್ಕೆ ತಂದು ಮಾಂಸವನ್ನು ಬೇರ್ಪಡಿಸುತ್ತಿದ್ದರು.ಬಳಿಕ ಮೂಳೆಗಳನ್ನು ಮುಗ್ದಂ ಕಾಲೋನಿ ಸಮೀಪದ ಅರಣ್ಯ ಪ್ರದೇಶದಲ್ಲಿ ಮೂಳೆಗಳನ್ನ‌ ಎಸೆಯುತ್ತಿದ್ದರು ಎನ್ನಲಾಗಿದೆ. ಇದಲ್ಲದೇ, ಇನ್ನೂ ಕೆಲವರು ಗೋಮಾಂಸ ಸೇವನೆ ಮಾಡಿ ಮೂಳೆಗಳನ್ನು ಇದೇ ಅರಣ್ಯದಲ್ಲಿ ಎಸೆದು ಹೋಗುತ್ತಿರುವುದಾಗಿ ತಿಳಿದುಬಂದಿದೆ.

ಇತ್ತೀಚೆಗೆ ಬೆಳ್ನೆ ಗ್ರಾಮದ ಸರ್ವೆ ನಂ. 74ರ ಅರಣ್ಯ ಪ್ರದೇಶದಲ್ಲಿ ದೊಡ್ಡ ಮಟ್ಟದ ಗೋವುಗಳ ಮೂಳೆಗಳ ರಾಶಿ ಪತ್ತೆಯಾಗಿತ್ತು. ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿ ದೂರು ನೀಡಿದ ಹಿನ್ನಲೆಯಲ್ಲಿ, ಭಟ್ಕಳ ನಗರ ಠಾಣೆಯಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿ ತನಿಖೆ ಕೈಗೊಳ್ಳಲಾಯಿತು.

ಸಿಪಿಐ ದಿವಾಕರ್ ಅವರ ನೇತೃತ್ವದಲ್ಲಿ ಪಿ.ಎಸ್.ಐ ನವೀನ್ ಹಾಗೂ ಅವರ ತಂಡ ಕಾರ್ಯಾಚರಣೆ ನಡೆಸಿ ಮೊದಲ ಹಂತದಲ್ಲಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಬಂಗ್ಲೆಗುಡ್ಡೆಯಲ್ಲಿ ಮತಷ್ಟು ಮೂಳೆಗಳು ಪತ್ತೆ : ಧರ್ಮಸ್ಥಳ‌ ಕೇಸ್‌ಗೆ ಬಿಗ್ ಟ್ವಿಸ್ಟ್..!