ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಡೊಮಗೇರಿ ಗ್ರಾಮದ ಕಿರವತ್ತಿ ಬಳಿ ನಡೆದ ಭೀಕರ ದುರಂತದಲ್ಲಿ ಗರ್ಭಿಣಿ ಮಹಿಳೆ ದುರ್ಮರಣ ಹೊಂದಿದ್ದು, ಮೂವರು ಮಕ್ಕಳಿಗೆ ಗಂಭೀರವಾಗಿ ಗಾಯವಾಗಿದ್ದು,ಗಾಯಗೊಂಡವರನ್ನ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯಲ್ಲಿ ಐದು ತಿಂಗಳ ಗರ್ಭಿಣಿ ಸಾವಿತ್ರಿ ಬಾಬು ಖಾರಾತ್ (28) ಮೃತ ಪಟ್ಟ ಮಹಿಳೆಯಾಗಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ವಾತಿ ಬಾಬು ಖಾರಾತ್ (17) ,ಘಾಟು ಲಕ್ಕು ಕೊಕರೆ (5 ವರ್ಷ 3 ತಿಂಗಳು), ಶ್ರಾವಣಿ ಬಾಬು ಖಾರಾತ್ (2 ವರ್ಷ 1 ತಿಂಗಳು) ಶಾಂಭವಿ ಬಾಬು ಖಾರಾತ್ ಗಾಯಗೊಂಡವರಾಗಿದ್ದಾರೆ. ಮಕ್ಕಳು ಅಂಗನವಾಡಿ ಮುಗಿಸಿ ಮನೆಗೆ ವಾಪಸ್ಸಾಗುತ್ತಿರುವಾಗ ಅಕಸ್ಮಾತ್ ಬೃಹತ್ ಮರ ಬಿದ್ದು ಈ ದುರಂತ ಸಂಭವಿಸಿದೆ. ಘಟನೆಯ ತೀವ್ರತೆಗೆ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಸಕ ಶಿವರಾಮ ಹೆಬ್ಬಾರ್ ಸಂತಾಪ.
ಮರಬಿದ್ದು ಗರ್ಭಿಣಿ ಮಹಿಳೆ ಸಾವನ್ನಪ್ಪಿ, ಮೂವರು ಗಾಯಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರನ್ನ ಹುಬ್ಬಳ್ಳಿ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ. ಇನ್ನೂ ಘಟನೆಯಿಂದ ಮೃತ ಪಟ್ಟ ಗರ್ಭಿಣ ಮಹಿಳೆ ಸಾವಿಗೆ ಶಾಸಕರು ಸಂತಾಪ ಸಲ್ಲಿಸಿದ್ದಾರೆ.