ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ : ಇಲ್ಲಿನ ಮೀನು ಮಾರುಕಟ್ಟೆ ಸ್ಥಳಾಂತರ ಮಾಡಲಾಗುತ್ತದೆ ಎನ್ನುವ ಬಗ್ಗೆ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದು, ಇಂದು ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಸಚಿವ ಮಂಕಾಳ್ ವೈದ್ಯ ಅವರು ಈ ಎಲ್ಲಾ ಸುಳ್ಳ ಸುದ್ದಿಗಳಿಗೆ ತೆರೆಯೆಳೆದಿದ್ದು, ಹಳೆ ಮೀನುಮಾರುಕಟ್ಟೆ ಸ್ಥಳಾಂತ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಇಂದು ಖುದ್ದು ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರು ಕೆಲ‌ ಸಮಯ ಅಲ್ಲಿಮ ಮೀನು ವ್ಯಾಪಾರಸ್ಥ ಮಹಿಳೆಯರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿದರು. ಈಗಿರುವ ಮೀನು ಮಾರುಕಟ್ಟೆಯನ್ನ ಸ್ಥಳಾಂತರ ಮಾಡುವ ಪ್ರಶ್ನೆಯೇ ಇಲ್ಲ.ಈ ಬಗ್ಗೆ ಯಾರೂ ಏನೆ ಹೇಳಿಕೊಂಡರು ಯಾರೂ ಕೂಡ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ನಾನು ನಿಮ್ಮ ಜೊತೆಗೆ ಇದ್ದೆನೆ.ಜನ ಸಂಖ್ಯೆ ಹೆಚ್ಚುತ್ತಿರುವ ಮತ್ತು ಬದಲಾಗುತ್ತಿರುವ ಪಟ್ಟಣದ ಪರಿಸ್ಥಿತಿಗೆ ತಕ್ಕಂತೆ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇನ್ನೊಂದು ಮೀನು ಮಾರುಕಟ್ಟೆ ಪ್ರಾರಂಭಿಸುತ್ತೇವೆ ವಿನಃ ಹಳೆ ಮೀನು‌ ಮಾರುಕಟ್ಟೆ ತೆರವು ಮಾಡುವುದಿಲ್ಲ. ನಿಮ್ಮಗೆ ಎಲ್ಲಿ ಅನುಕೂಲವಾಗುತ್ತದೆ ಅಲ್ಲಿ ಕುಳಿತು. ವ್ಯಾಪರ ಮಾಡಬಹುದು ಎಂದರು.

ಮೀನುಗಾರರ ಕಷ್ಟ ಏನುವುದು ನನ್ನಗೆ ಚೆನ್ನಾಗಿದೆ ಗೊತ್ತು. ಮೀನುಗಾರರಿಗೆ ತೊಂದರೆಯಾಗುವಂತಹ ಯಾವ ಕೆಲಸಕ್ಕೂ ನಾನು ಬೆಂಬಲ‌ ನೀಡಲ್ಲ. ಮೀನುಗಾರರ ಜೊತೆ ಸದಾ ಇರುವುದು ಭರವಸೆ ನೀಡಿದ್ದರು.

ಇದನ್ನೂ ಓದಿ: ಸ್ಮರಣೀಯ ಸೇವೆಯೊಂದಿಗೆ ವಿಶ್ರಾಂತ ಜೀವನಕ್ಕೆ ಅಡಿಯಿಡುತ್ತಿರುವ ಶಿಸ್ತಿನ ಶಿಕ್ಷಕ ಉಮೇಶ ನಾಯ್ಕ