ಸುದ್ದಿಬಿಂದು ಬ್ಯೂರೋ ವರದಿ
ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ತನಿಖೆಯಲ್ಲಿರುವ ಅನಾಮಿಕ ದೂರುದಾರನು ಎಸ್‌ಐಟಿ ಅಧಿಕಾರಿಗಳ ಮುಂದೆ ನೀಡಿದ ಹೇಳಿಕೆ ಹೊಸ ಕುತೂಹಲ ಹುಟ್ಟಿಸಿದೆ.
ತನಿಖಾ ತಂಡ ಕೇಳಿದ್ದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅನಾಮಿಕ “2014ರ ನಂತರ ನಾನು ತಮಿಳುನಾಡಿನಲ್ಲಿ ವಾಸವಾಗಿದ್ದೆ. 2023ರಲ್ಲಿ ಒಂದು ಅಪರಿಚಿತ ಗುಂಪು ನನ್ನನ್ನು ಸಂಪರ್ಕಿಸಿತು. ಧರ್ಮಸ್ಥಳದಲ್ಲಿ ಹೆಣ ಹೂತಿರುವ ಬಗ್ಗೆ ಸುಳ್ಳು ಹೇಳಿಕೆ ನೀಡುವಂತೆ ಒತ್ತಾಯ ಮಾಡಿತು.ಆದರೆ ನಾನು ಕಾನೂನು ಪ್ರಕಾರವೇ ಕೆಲಸ ಮಾಡಿದ್ದೆ ಎಂದು ಸ್ಪಷ್ಟಪಡಿಸಿದ್ದೆ. ಆದರೂ ಆ ಗುಂಪು ನನ್ನ ಮೇಲೆ ಒತ್ತಡ ಹೇರಿತು” ಎಂದು ಹೇಳಿದ್ದಾನೆಂದು ಮೂಲಗಳು ತಿಳಿಸಿವೆ.
ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುವಾಗ ನನಗೆ ಭಾರೀ ಭಯವಾಗಿತ್ತು. ಬುರುಡೆ ಹಿಡಿದು ಸುಳ್ಳು ಹೇಳುವಂತೆ ಆ ಗುಂಪು ಒತ್ತಾಯಿಸಿತ್ತು. ಈ ಎಲ್ಲ ಚಟುವಟಿಕೆಗಳು ಒಂದು ವರ್ಷದ ಹಿಂದೆ ನಡೆದವು” ಎಂದು ತನಿಖಾಧಿಕಾರಿಗಳ ಎದುರು ಅನಾಮಿಕ ಎಲ್ಲವನ್ನು ವಿವರಿಸಿದ್ದಾನೆ. ಈತ ಮಹೇಶ ತಿಮರೋಡಿ ಮನೆಯಲ್ಲೆ ಉಳಿದುಕೊಳ್ಳುತ್ತಿದ್ದನಂತೆ. ಅಲ್ಲದೆ. ಮೊದಲ ದಿನವೇ ನಾಳೆ ಎಸ್ಐಟಿ ಎದುರು ಯಾವ ರೀತಿ ಹೇಳಬೇಕು ಎಂದು ಸ್ಕ್ರೀಪ್ಟ್ ಸಿದ್ದಪಡಿಸಿ ಕೊಡುತ್ತಿದ್ದರಂತೆ.
ಅತನ ಹೇಳಿಕೆ ಬೆಳಕಿಗೆ ಬರುತ್ತಿದ್ದಂತೆ ಪ್ರಕರಣದ ಗಂಭೀರತೆ ಇನ್ನಷ್ಟು ಹೆಚ್ಚಾಗಿದೆ. ‘ಅನಾಮಿಕ ದೂರುದಾರನು ನಿಜವನ್ನೇ ಹೇಳುತ್ತಿದ್ದಾನೆಯೋ ಅಥವಾ ಮತ್ತೊಮ್ಮೆ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾನೆಯೋ?’ ಎಂಬ ಅನುಮಾನಗಳು ಸಮಾಜದಲ್ಲಿ ಮೂಡಿವೆ. ಈ ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಸ್ಪಷ್ಟನೆ ನೀಡಬೇಕಿದೆ.
ಇದನ್ನೂ ಓದಿ:ಶಿರಸಿಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರು ಮುಂಬೈ ರೈಲ್ವೇ ನಿಲ್ದಾಣದಲ್ಲಿ ಪತ್ತೆ