ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿನಿಯರು ಸುರಕ್ಷಿತವಾಗಿ ಮುಂಬೈ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.
ಶಿರಸಿ ಕಸ್ತೂರಬಾ ನಗರದ ಎಂಟನೇ ತರಗತಿ ಹಾಗೂ ಆರನೇ ತರಗತಿಯ ಇಬ್ಬರೂ ವಿದ್ಯಾರ್ಥಿನಿಯರು ಅಗಷ್ಡ 16ರಂದು ಚಿತ್ರಕಲೆ ಕ್ಲಾಸ್‌ಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋದವರು ಮರಳಿ ಮನೆಗೆ ವಾಪಸ್ಸಾಗಿರಲಿಲ್ಲ. ಪ್ರಾಥಮಿಕ ತನಿಖೆಯಲ್ಲಿ ವಿದ್ಯಾರ್ಥಿನಿಯರು ಶಿರಸಿ ಬಸ್ ನಿಲ್ದಾಣದಿಂದ ಹುಬ್ಬಳ್ಳಿ ಬಸ್ ಹತ್ತಿ, ಅಲ್ಲಿಂದ ರೈಲ್ವೆ ಮೂಲಕ ಮುಂಬೈಗೆ ತೆರಳಿರುವುದು ದೃಢಪಟ್ಟಿತ್ತು.
ವಿದ್ಯಾರ್ಥಿನಿಯರು ಶಿರಡಿಯಲ್ಲಿ ಸಾಯಿ ಬಾಬರನ್ನು ನೋಡುವ ಉದ್ದೇಶದಿಂದ ತೆರಳಿದ್ದರೆಂಬ ಮಾಹಿತಿ ದೊರೆತಿದೆ. ತನಿಖೆ ಕೈಗೊಂಡ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯ ಸಿಬ್ಬಂದಿ ಹುಬ್ಬಳ್ಳಿ ಹಾಗೂ ಮುಂಬೈಗೆ ತೆರಳಿ ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ, ಸಿಸಿಟಿವಿ ವಿದ್ಯಾರ್ಥಿಗಳ ದೃಶ್ಯಾವಳಿ ಸೆರೆಯಾಗಿತ್ತು. ಅದರ ಆಧಾರದ ಮೇಲೆ ಇಬ್ಬರೂ ವಿದ್ಯಾರ್ಥಿನಿಯರನ್ನ ಪತ್ತೆ ಹಚ್ಚಿದ್ದಾರೆ.
ಮುಂಬೈ ರೈಲ್ವೇ ನಿಲ್ದಾಣದಲ್ಲಿ ಪೊಲೀಸರು ವಿದ್ಯಾರ್ಥಿನಿಯರನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ಶಿರಸಿಗೆ ಕರೆತಂದಿದ್ದಾರೆ..ವಿದ್ಯಾರ್ಥಿನಿಯರ ನಾಪತ್ತೆಯಿಂದಾಗಿ ಆತಂಕಕ್ಕೊಳಗಾಗಿದ್ದ ಪಾಲಕರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ..
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲಾ ದ್ವಿಚಕ್ರವಾಹನ ದುರಸ್ತಿಗಾರರ ಸಂಘ ಉದ್ಘಾಟನೆ