ಸುದ್ದಿಬಿಂದು ಬ್ಯೂರೋ ವರದಿ
ಮಂಗಳೂರು: ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ‌‌(ಮಾಜಿ‌ ನೈರ್ಮಲ್ಯ ಕಾರ್ಮಿಕ). ಖಾಸಗಿ ಮಾಧ್ಯಮದ ಎದುರು ಮೊದಲ ಬಾರಿಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. “ದೇವಸ್ತಾನದ ಆದೇಶದ ಮೇರೆಗೆ ನಾನು ಅನೇಕ ಶವಗಳನ್ನು ಕಾಡು ಮತ್ತು ನದಿ ದಂಡೆಗಳಲ್ಲಿ ಹೂತ್ತಿರುವುದಾಗಿ” ಮಾಧ್ಯಮದ ಮುಂದೆ ಬಹಿರಂಗಪಡಿಸಿದ್ದಾನೆ‌.

20 ವರ್ಷಗಳ ‘ರಹಸ್ಯ ಕಾರ್ಯಾಚರಣೆ’
ಸಾಕ್ಷಿದಾರದ ಪ್ರಕಾರ, ಇಡೀ ಎರಡು ದಶಕಗಳ ಕಾಲ ಗುರುತಿಸಲಾಗದ ಅನೇಕ ಶವಗಳನ್ನು ಅರಣ್ಯ ಪ್ರದೇಶಗಳು ಹಾಗೂ ನದಿ ತೀರಗಳಲ್ಲಿ ಸಮಾಧಿ ಮಾಡಲಾಗುತ್ತಿತ್ತು. ಸಾಮಾನ್ಯ ಸ್ಮಶಾನಗಳನ್ನು ಬಳಸದೇ, ವಿಶೇಷವಾಗಿ ಕಾಡು, ಹಳೆಯ ರಸ್ತೆ ಬದಿಗಳು ಮತ್ತು ನದಿ ದಂಡೆಗಳಲ್ಲಿ‌ ಶವ ಹೂಳಿರುವುದಾಗಿ ಹೇಳಿದ್ದಾನೆ.

ನೇತ್ರಾವತಿ ಸ್ನಾನಘಟ್ಟದಲ್ಲಿ 70ಕ್ಕೂ ಹೆಚ್ಚು ಶವಗಳು!
ನೇತ್ರಾವತಿ ಸ್ನಾನಘಟ್ಟದ ಸಮೀಪದಲ್ಲಿ ಸುಮಾರು 70ಕ್ಕೂ ಹೆಚ್ಚು ಶವಗಳನ್ನು ಹೂಳಲಾಗಿತ್ತು. Spot-13 ಎಂದು ಗುರುತಿಸಲ್ಪಟ್ಟ ಸ್ಥಳದಲ್ಲಿ 70–80 ಶವಗಳ ಸಮಾಧಿ ನಡೆದಿದೆ. ಬಾಹುಬಲಿ ಬೆಟ್ಟಗಳಲ್ಲಿಯೂ ಮಹಿಳೆಯ ಶವವನ್ನು ಹೂಳಲಾಗಿದೆ ಎಂಬ ಅಚ್ಚರಿಯ ಸಂಗತಿಯನ್ನೂ ಆತ ಬಿಚ್ಚಿಟ್ಟಿದ್ದಾರೆ.

ಸ್ಥಳೀಯರು ನೋಡಿದರೂ ಮೌನ
ಈ ಘಟನೆಗಳು ಸಂಪೂರ್ಣವಾಗಿ ಗುಪ್ತವಾಗಿರಲಿಲ್ಲ, ಹಲವಾರು ಬಾರಿ ಸ್ಥಳೀಯರು ಶವ ಹೂಳುವ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಶವ ಹೂಳುವಾಹ ಯಾರು ಕೂಡ ಯಾವುದೇ ತಡೆ ಮಾಡಿಲ್ಲ. “ಜನರಿಗೆ ತೊಂದರೆಯಾಗುತ್ತಿರಲಿಲ್ಲ, ಅದಕ್ಕಾಗಿ ಅವರು ಮೌನವಾಗಿದ್ದರು” ಎಂದಿದ್ದಾನೆ

ಹಿಂಸೆ ಮತ್ತು ದೌರ್ಜನ್ಯದ ಗುರುತುಗಳು
ಸಮಾಧಿ ಮಾಡಿದ ಅನೇಕ ಶವಗಳಲ್ಲಿ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯದ ಅನುಮಾನಾಸ್ಪದ ಲಕ್ಷಣಗಳು ಕಂಡುಬಂದಿದ್ದವು. “ಕೆಲವು ಶವಗಳು ಹಲ್ಲೆಯ ಗುರುತುಗಳು ಕಾಣುತ್ತಿತ್ತು ಎಂದಿದ್ದಾನೆ.

ಪತ್ತೆಯಾಗದ ಹಳೆಯ ಸಮಾಧಿಗಳು
ಮಳೆ, ಮಣ್ಣು, ಅರಣ್ಯದ ವೃದ್ಧಿ ಹಾಗೂ ನಿರ್ಮಾಣ ಕಾಮಗಾರಿಗಳ ಪರಿಣಾಮವಾಗಿ ಹಳೆಯ ಸಮಾಧಿಗಳು ಇದೀಗ ಪತ್ತೆಯಾಗುವುದು ಕಷ್ಟವಾಗಿದೆ. “ಒಮ್ಮೆ ಗುರುತಿಸಲು ಸುಲಭವಾಗಿದ್ದ ಸ್ಥಳಗಳು ಈಗ ದಟ್ಟ ಕಾಡಿನಿಂದ ಆವರಿಸಲ್ಪಟ್ಟಿವೆ” ಎಂಬುದಾಗಿ ಹೇಳಿದ್ದಾನೆ.

ತನಿಖೆ ಮುಂದುವರಿದಿದೆ
ಈವರೆಗೆ ಎಸ್‌ಐಟಿ ತಂಡವು 13 ಸ್ಥಳಗಳಿಂದ ಅಸ್ಥಿಪಂಜರದ ಅವಶೇಷಗಳನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಒಂದನ್ನು ಮಾತ್ರ ಪುರುಷನ ಅಸ್ಥಿಪಂಜರವೆಂದು ಗುರುತಿಸಲಾಗಿದೆ. ಆದರೆ ಅನಾಮಿಕ ಪತ್ತೆಯಾದ ಶವಗಳ ಸಂಖ್ಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ತನಿಖೆಯ ದಿಕ್ಕು ಇನ್ನಷ್ಟು ಗಂಭೀರ ತಿರುವು ಪಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ : ಕಲ್ಲೇಶ್ವರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಸಂಭ್ರಮ