ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕಾರವಾರ ಕಾಂಗ್ರೇಸ್ ಶಾಸಕ ಸತೀಶ್ ಸೈಲ್ ಅವರ ಮನೆ ಮೇಲೆ ಜಾರಿ ಆದಾಯ ನಿರ್ದೇಶನಾಲಯ (Enforcement Directorate – ED) ಅಧಿಕಾರಿಗಳು ಆಗಸ್ಟ್ 13 ಮತ್ತು 14ರಂದು ನಿರಂತರವಾಗಿ ಎರಡು ದಿನ ನಡೆದ ದಾಳಿಯಲ್ಲಿ ಭಾರೀ ಪ್ರಮಾಣದ ನಗದು, ಚಿನ್ನ ಮತ್ತು ಬ್ಯಾಂಕ್ ಖಾತೆಯನ್ನ ಪತ್ತೆ ಹಚ್ಚಿದ ಇಡಿ ಅಧಿಕಾರಿಗಳು ಇದೀಗ Xಖಾತೆಯಲ್ಲಿ ಎಲ್ಲವನ್ನು ಬಿಚ್ಚಿಟ್ಟಿದ್ದಾರೆ.
ಕಾರವಾರದ ಸದಾಶಿವಘಡದಲ್ಲಿರುವ ಶಾಸಕರ ಮನೆಯಲ್ಲಿ ನಡೆದ ತಪಾಸಣೆಯಲ್ಲಿ 1.68 ಕೋಟಿ ನಗದು, 6.75 ಕೆ.ಜಿ. ಚಿನ್ನಾಭರಣ ಪತ್ತೆಯಾಗಿದ್ದು, ಜೊತೆಗೆ ಶಾಸಕರ ಹಾಗೂ ಸಂಬಂಧಿತ ಖಾತೆಗಳಲ್ಲಿ ಇರುವ ಸುಮಾರು 14 ಕೋಟಿ ಬ್ಯಾಂಕ್ ಮೊತ್ತವನ್ನು ಸೀಜ್ ಮಾಡಲಾಗಿದೆ.
ಇದನ್ನೂ ಓದಿ:ಬಿಜೆಪಿಗೆ ಶಾಸಕರ ಕೊರತೆ ಇಡಿ ದಾಳಿಯಿಂದ ಸೆಳೆಯುವ ಯತ್ನ : ಸಚಿವ ಮಂಕಾಳ್ ವೈದ್ಯ ವ್ಯಂಗ್ಯ