ಸುದ್ದಿಬಿಂದು ನ್ಯೂರೋ ವರದಿ
ಕುಮಟಾ: ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ಚಾತುರ್ಮಾಸ್ಯ ವ್ರತಾಚರಣೆಯ ೩೨ನೇ ದಿನದ ಕಾರ್ಯಕ್ರಮದಲ್ಲಿ ಕುಮಟಾ ಪಟ್ಟಣದ ಹೆರವಟ್ಟಾ, ದೇವರಹಕ್ಕಲ, ಚಿತ್ರಗಿ, ಮಾಸೂರು ಕ್ರಾಸ್ ಸೇರಿದಂತೆ ನಗರ ಪ್ರದೇಶ, ಭಟ್ಕಳ ಹಾಗೂ ಸಾಗರದ ನಾಮಧಾರಿ ಕೂಟದಿಂದ ಗುರು ಸೇವಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ನಿರತರಾದ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ೩೨ನೇ ದಿನದ ಕಾರ್ಯಕ್ರಮದಲ್ಲಿ ಕುಮಟಾ ಪಟ್ಟಣದ ಸಮಸ್ತ ನಾಮಧಾರಿ ಸಮಾಜ ಬಾಂಧವರು ಮೆರವಣಿಗೆಯ ಮೂಲಕ ಹೊರಕಾಣಿಕೆಯನ್ನು ಹೊತ್ತುಕೊಂಡು ಹೋಗಿ ಗುರುಗಳಿಗೆ ಸಮರ್ಪಿಸಿದರು, ಬಳಿಕ ಸೇವಾ ಕಾರ್ಯಕರ್ತರು ಕಾರ್ಯಕ್ರಮದ ವಿವಿಧೆಡೆ ನಿಯೋಜನೆಗೊಂಡು ಭಕ್ತರಿಗೆ ಸಕಲ ವ್ಯವಸ್ಥೆ ಒದಗಿಸಿಕೊಟ್ಟರು.
ಹೆರವಟ್ಟಾದ ಪುರಸಭೆ ಸದಸ್ಯರಾದ ಶುಶೀಲಾ ಗೋವಿಂದ ನಾಯ್ಕ, ಪ್ರಮುಖರಾದ ಪ್ರೊ ಎಂ ಜಿ ನಾಯ್ಕ, ಗೋವಿಂದ ನಾಯ್ಕ, ಸದಾ ನಾಯ್ಕ ಮಾದೇವ ನಾಯ್ಕ ದಾಮೋದರ ನಾಯ್ಕ ಕೆಳಗನಮನೆ ನೇತೃತ್ವದಲ್ಲಿ ಚರಣರಾಜ್ ನಾಯ್ಕರು ದಂಪತಿ ಸಮೇತರಾಗಿ ಗುರು ಪಾದುಕೆ ಪೂಜೆ ನೆರವೇರಿಸಿದರು. ಬಳಿಕ ಶ್ರೀಗಳಿಂದ ಫಲಮಂತ್ರಾಕ್ಷತೆ, ಪಡೆದು ಪುನೀತರಾದರು.
ಕುಮಟಾ ನಗರ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವರಹಕ್ಕಲ್ಲ, ವಕ್ಕನಹಳ್ಳಿ ಮಾಸೂರ ಕ್ರಾಸ್, ಚಿತ್ರಗಿ, ಬಸ್ತಿಪೇಟೆ, ಹೆರವಟ್ಟ ಗ್ರಾಮದ ಸಮಸ್ತ ನಾಮಧಾರಿ ಸಮಾಜ ಬಾಂಧವರು ಗುರು ಪಾದುಕಾ ಪೂಜೆ ಸಲ್ಲಿಸಿ, ಶ್ರೀಗಳಿಂದ ಫಲಮಂತ್ರಾಕ್ಷತೆ ಪಡೆದರು.
ಶಿರಸಿಯ ಸ್ಕೋಡವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕರು ವೈಯಕ್ತಿವಾಗಿ ಗುರು ಪಾದುಕೆ ಪೂಜೆ ನೆರವೇರಿಸಿ, ಗುರುಗಳಿಂದ ಫಲಮಂತ್ರಾಕ್ಷತೆ ಪಡೆದರು. ಅಲ್ಲದೇ ಸ್ಕೋಡವೆಸ್ ಸಂಸ್ಥೆಯಿAದ ಭಕ್ತಾಧಿಗಳಿಗೆ ಹಣ್ಣಿನ ಜ್ಯೂಸ್ ಪ್ಯಾಕ್ ವಿತರಿಸುವ ಮೂಲಕ ಗುರುಗಳ ಪ್ರೀತಿ ವಿಶ್ವಾಸಕ್ಕೂ ಪಾತ್ರರಾದರು.
ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಅವರು ತಮ್ಮ ಕುಟುಂಬ ಸಮೇತರಾಗಿ ಆಗಮಿಸಿ, ವೈಯಕ್ತಿಕವಾಗಿ ವಿಶೇಷ ಗುರು ಸೇವಾ ಪಾದುಕಾ ಪೂಜೆಯನ್ನು ನೆರವೇರಿಸಿದರು. ಶ್ರೀಗಳು ಸೋನಿ ಕುಟುಂಬಕ್ಕೆ ಫಲಮಂತ್ರಾಕ್ಷತೆ ವಿತರಿಸಿ, ಹರಸಿದರು. ಈ ಸಂದರ್ಭದಲ್ಲಿ ಹಿರಿಯರಾದ ಎಸ್ ಜೆ ನಾಯ್ಕ, ಇಂಜಿನೀಯರ್ ಶ್ರೀನಿವಾಸ ನಾಯ್ಕ, ಉದ್ಯಮಿ ಸುನೀಲ ಸೋನಿ ಇತರರು ಇದ್ದರು.
ಭಟ್ಕಳದ ಮಾಜಿ ಶಾಸಕ ಸುನೀಲ ನಾಯ್ಕರ ನೇತೃತ್ವದಲ್ಲಿ ನಾಮಧಾರಿ ಸಮಾಜ ಬಾಂಧವರು ಆಗಮಿಸಿ, ಗುರು ಸೇವೆ ಸಲ್ಲಿಸಿದರು. ಗುರುಗಳಿಂದ ಫಲಮಂತ್ರಾಕ್ಷತೆ ಪಡೆದು ಧನ್ಯತೆ ಮೆರೆದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್ ವೈದ್ಯ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ ಭಾಗ್ವತ್, ಕಾಂಗ್ರೆಸ್ ಮುಖಂಡರಾದ ರತ್ನಾಕರ ನಾಯ್ಕ, ಹೊನ್ನಪ್ಪ ನಾಯಕ ಸೇರಿದಂತೆ ಇತರರೆ ಕಾಂಗ್ರೆಸ್ ಮುಖಂಡರು, ಪ್ರಮುಖರು ಸಚಿವ ಜೊತೆಗೆ ತೆರಳಿ, ಗುರುಗಳಿಂದ ಫಲಮಂತ್ರಾಕ್ಷತೆಯ ಆಶೀರ್ವಾದ ಪಡೆದರು.
ಕುಮಟಾ ಎನ್ ಡಬ್ಲುಕೆಆರ್‌ಟಿಸಿ ನೌಕರರು ಮತ್ತು ನಿವೃತ್ತ ನೌಕರರು ಶ್ರೀಗಳ ಪಾದ ಪೂಜೆ ನೆರವೇರಿಸಿ, ಶ್ರೀಗಳಿಂದ ಫಲಮಂತ್ರಾಕ್ಷತೆ ಪಡೆದರು, ಸೀತಾರಾಮ ನಾಯ್ಕ ಚಂದಾವರ ಸೇರಿದಂತೆ ಅನೇಕರಿದ್ದರು.
ಈ ಸಂದರ್ಭದಲ್ಲಿ ಸೂರಜ್ ಸೋನಿ ಅವರು ಲಿಫರ್ಟ್ ಕಲಾಕಾರ ಪ್ರಥ್ವಿರಾಜ್ ಅವರು ಆಲದ ಎಲೆಯ ಮೇಲೆ ಚಿತ್ರಿಸಿದ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ಚಿತ್ರವನ್ನು ಶ್ರೀಗಳಿಗೆ ಅರ್ಪಿಸಿ, ಅವರಿಗೆ ಫಲಮಂತ್ರಾಕ್ಷತೆಯ ಗೌರವ ಪಡೆದರು. ಅಲ್ಲದೇ ಬಡತನದಲ್ಲಿ ಓದಿ ಸಿಎ ಪರೀಕ್ಷೆಯನ್ನು ಫ್‌ಸ್ಟ್ ಅಟೆಂಮ್ಟ್ನಲ್ಲಿ ಪಾಸ ಮಾಡಿದ ಪ್ರತಿಭಾವಂತ ಶಿರಸಿಯ ಕುಳವೆಯ ಹಳ್ಳಿಕಾನಿನ ರಮೇಶ ನಾಯ್ಕರನ್ನು ಪ್ರೊ ಎಂ ಜಿ ನಾಯ್ಕರು ಗುರಗಳಿಗೆ ಪರಿಚಯಿಸಿದರು.ಶ್ರೀಗಳು ರಮೇಶ ಅವರಿಗೆ ಫಲಮಂತ್ರಾಕ್ಷತೆ ಆಶೀರ್ವಾದ ನೀಡಿ ಹರಸಿದರು.
ಇನ್ನು ಶ್ರೀ ಕ್ಷೇತ್ರ ಹಳೆಕೋಟೆ ಹನುಮಂತ ದೇವ, ನಾಮಧಾರಿ ಅಭಿವೃದ್ಧಿ ಸಂಘ ಮಾವಳ್ಳಿ, ಮಾವಳ್ಳಿ-ಹೋಬಳಿ, ಶಾರದ ಹೊಳೆ, ಶಿರಾಲಿ ಭಟ್ಕಳ. ಕೆ ಎಸ್ ಆರ್ ಟಿ ಸಿ ನಾಮಧಾರಿ ಹಾಲಿ ಮತ್ತು ನಿವೃತ್ತ ಅಧಿಕಾರಿಗಳು ಮತ್ತು ನೌಕರರು ಉತ್ತರಕನ್ನಡ ವಿಭಾಗ, ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಸಾಗರ,ಸಮಸ್ತ ಉಪ್ಪಾರ್ ಸಹೋದರ ಸಮಾಜ ಬಾಂಧವರು ಕುಮಟಾ ಇವರು ಗುರುಪಾದುಕಾ ಪೂಜೆ ಸಲ್ಲಿಸಿದರು. ಉದ್ಯಮಿ ನಾಗರಾಜ್ ಸಾರಿಂಗ್ ನಾಯ್ಕ್ ಬಸ್ತಿಪೇಟೆ ಕುಮಟಾ, ಈಶ್ವರ ನಾಯ್ಕ್ ಗುತ್ತಿಗೆದಾರರು ಮುರುಡೇಶ್ವರ ಇವರು ವಿಶೇಷ ಸೇವೆ ಸಲ್ಲಿಸಿದರು.ಗಣಪತಿ ವೆಂಕ್ಟ ನಾಯ್ಕ್ ಸಿಣ್ಣಪ್ಪಜ್ಜನ ಮನೆ ಕೋನಳ್ಳಿ ಮತ್ತು ಕುಟುಂಬದವರು, ಮಂಜುನಾಥ ತಿಮ್ಮಪ್ಪ ನಾಯ್ಕ್ ಕೆಳಗಿನಮನೆ ಕೋನಳ್ಳಿ ಮತ್ತು ಕುಟುಂಬದವರು, ಕೃಷ್ಣ ನಾಯ್ಕ್ ಪೃಥ್ವಿ ಎಂಟರ್ಪ್ರೈಸಸ್ ಶಾರದ ಹೊಳೆ, ದುರ್ಗಾಪರಮೇಶ್ವರಿ ದೇವಸ್ಥಾನ ಅಳವೆಕೋಡಿ ಭಟ್ಕಳ ಇವರು ವೈಯಕ್ತಿಕ ಗುರುಪಾದುಕ ಪೂಜೆ ಸಲ್ಲಿಸಿದರು.
ಎ.ಡಿ.ಎಲ್.ಆರ್ ಹೊನ್ನಾವರ ಹಾಗೂ ಉದಯ್ ನಾಯ್ಕ್, ತ್ರಿವಿಕ್ರಮ್ ಬಾಬಾ ಪೈ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಟ್ರಸ್ಟಿಗಳು ಹಾಗೂ ಅನೇಕ ಗಣ್ಯರು ಆಗಮಿಸಿದ್ದರು. ಹೆರವಟ್ಟ, ಕಾಗಲ್, ಚಿತ್ರಗಿ ನೆಲ್ಲಿಕೇರಿ,ವನ್ನಳ್ಳಿ, ಭಟ್ಕಳ,ವಕ್ಕನಹಳ್ಳಿ ಗ್ರಾಮದ ಸಮಾಜ ಬಾಂಧವರು ಗುರು ಸೇವೆ ಸಲ್ಲಿಸಿದರು. ಪ್ರಣವ್ ಅಣ್ಣಪ್ಪ ನಾಯ್ಕ್ ವಕ್ಕನಳ್ಳಿ ಮತ್ತು ಸಮಸ್ತ ನಾಮಧಾರಿ ಸಮಾಜ ಬಾಂಧವರು ಕುಮಟಾ ನಗರ, ಚಂದ್ರಹಾಸ್ ನಾಯ್ಕ್ ಚಿತ್ರಗಿ ಇವರು ಸಿಹಿ ವಿತರಿಸಿದರು.
ಮಧ್ಯಾಹ್ನ ನಡೆದ ಪ್ರಸಾದ ಭೋಜನದಲ್ಲಿ ಮೂರು ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಧನ್ಯತೆ ಮೆರೆದರು.