ಬರ್ಗಿ ಪಂಚಾಯತ್ ವ್ಯಾಪ್ತಿಯ ಬರ್ಗಿ, ಬೆಟ್ಕುಳಿ, ಕಿಮಾನಿ ಕೂಟದವರು ನಡೆಸಿಕೊಟ್ಟ ಚಾತುರ್ಮಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಂದರ ಕ್ಷಣ.
ಕುಮಟಾ ತಾಲ್ಲೂಕಿನ ವನದುರ್ಗಾ ದೇವಸ್ಥಾನದ ಕೋನಳ್ಳಿ ಎಂಬ ಸುಂದರ ಸುಸಜ್ಜಿತವಾದ ಹಳ್ಳಿಯಲ್ಲಿ ಅತ್ಯಂತ ವೈಭವೋಪೇತವಾಗಿ ಅಷ್ಟೇ ಅಚ್ಚುಕಟ್ಟಾಗಿ ಸುಂದರ ಸುಲಲಿತವಾಗಿ ಚಾತುರ್ಮಾಸ ಕಾರ್ಯಕ್ರಮ ನೋಡಿದ ಮನ ಸ್ಪೂರ್ತಿದಾಯಕವಾಗಿಹುದು.
ಶ್ರೀರಾಮ ಕ್ಷೇತ್ರ ಮಹಾಸಂಸ್ಥಾಪನಮ್ ಜಗದ್ಗುರು ಪೀಠದ ಪೀಠಾಧೀಶರಾದ ಪರಮಪೂಜ್ಯ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿಜೀ ಚರಣ ಕಮಲಗಳಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸುತ್ತಾ ಸ್ವಾಮೀಜಿಯವರ ಆಶೀರ್ವಚನ, ಸನ್ಮಾರ್ಗದಲ್ಲಿ ನಡೆಯಬೇಕಾದ ಪ್ರವಚನದಿಂದ ಎಲ್ಲರ ಮನವು ಮುದದಿಂದ ಪುಳಕಿತವಾಗಿಹುದು.
ಅಲ್ಲಿ ನಡೆದ ಪ್ರತಿಯೊಂದು ವ್ಯವಸ್ಥೆಯೂ ಸುಂದರ ಸ್ವಚ್ಛಂದವಾಗಿಹುದು. ಮೊದಲನೆಯದಾಗಿ ಸಮಾಜದ ಒಕ್ಕೂಟಕ್ಕೆ ಹಾಗೂ ಅಲ್ಲಿನ ವ್ಯವಸ್ಥಾಪಕರಿಗೆ ತುಂಬು
ಹೃದಯದ ಧನ್ಯವಾದಗಳು.
‘ಅನ್ನದಾನಂ ಶ್ರೇಷ್ಠದಾನಂ’ ಎನ್ನುವಂತೆ ಸುವ್ಯವಸ್ಥಿತವಾಗಿ ನಡೆಯುವ ಊಟೋಪಚಾರ ಕೂಡ ಸಿಸ್ತುಬದ್ದವಾಗಿದ್ದವು. ಹಾಗೆ ಮುಸ್ಸಂಜೆಯೆ ರಂಗ ಸಜ್ಜಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ಆಹ್ಲಾದಕರ ಭಾವನೆಗಳನ್ನು ಮೂಡಿಸುವಂತಿತ್ತು.
ಬೆಟ್ಕುಳಿ ಕಲಿಕಾ ಕೇಂದ್ರ ಮಕ್ಕಳ “ಮಹಿಂದ_ದಿವಿಜ” ಯಕ್ಷಗಾನ ಪ್ರದರ್ಶನ ಕೂಡ ಜನ ಮೆಚ್ಚುವಂತದ್ದಾಗಿದ್ದು, ಕೆಲವೇ ಕೆಲವು ದಿನಗಳಲ್ಲಿ ಅಷ್ಟೊಂದು ಮುತುವರ್ಜಿ ವಹಿಸಿ ಪುಟ್ಟ ಮಕ್ಕಳನ್ನ ಗಂಡುಗಲಿ ಯಕ್ಷಗಾನ ಕಲೆಗೆ ತಯಾರಿ ಮಾಡುವುದೆಂದರೆ ಸಾಮಾನ್ಯವಾದುದಲ್ಲ.
ಕಾರಣ ಈಗಿನ ಮಕ್ಕಳಿಗೆ ಡಿಸ್ಕೋ ಡಾನ್ಸ್ ಕುಣಿದು ಕುಪ್ಪಳಿಸುವುದು ಬಿಟ್ರೆ ಇಂತಹ ವೇಷಭೂಷಣಕ್ಕೆ ತಲೆ ಬಾಗುವುದು ತುಂಬಾ ವಿರಳ ಬಟ್ ವಿರಳಾನೇ ಸರಳ ಎಂಬಂತೆ ಮಾಡಿದ್ದಾರೆ ಬೆಟ್ಕುಳಿಯ ಚಂದ್ರಶೇಖರ_ನಾಯ್ಕ ಶಿಕ್ಷಕರು ಯಕ್ಷಗಾನ ಕಲೆಯನ್ನು ಎತ್ತಿ ಹಿಡಿಯೋದ್ರಲ್ಲಿ ಮೇಲುಗೈ ಸಾಧಿಸಿದ್ದಾರೆ. ಅದೇ ರೀತಿ ಯಕ್ಷಗಾನ ಗುರುಗಳಾದ @ಜಿ_ಕೆ_ಹೆಗಡೆ ಯವರ ಪ್ರಯತ್ನ. ಮಕ್ಕಳು ಉತ್ಸಾಹ ಹುಮ್ಮಸ್ಸಿನಿಂದ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ಚಂದಾ ಕುಣಿಯಲು ಅವರ ಬೆವರು ಪ್ರತಿಯೊಂದು ಹೆಜ್ಜೆಗಳಲ್ಲಿಯೂ ಎದ್ದು ಕಾಣುವಂತಿದೆ.ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿಜೀ ಗುರೂಜಿಯವರ ಆಶೀರ್ವಾದದಿಂದ ಕಿಕ್ಕಿರಿದ ಜನ ಸಂದಿಣಿಯಲ್ಲಿಯೂ ಪುಟ್ಟ ಪುಟ್ಟ ಹೆಜ್ಜೆಗೆ ಗೆಜ್ಜೆಯ ನಿನಾದ ಆಲಿಸುವಂತೆ ಮಾಡಿದ ಸರ್ವ ಪುಟಾಣಿಗಳಿಗೂ ಶುಭವಾಗಲಿ.
ಹಾಗೆಯೇ ಪರಿಸರ ಸ್ನೇಹಿ ಮಣ್ಣಿನ ಮೂರ್ತಿ ಕಲಾವಿದ ಬೆಟ್ಕುಳಿಯ ಜೈವಂತ_ನಾಯ್ಕ ಇವರು ಪರಮಪೂಜ್ಯ ಶ್ರೀ ಶ್ರೀ ಶ್ರೀ ಆತ್ಮಾನಂದ ಗುರೂಜಿಯವರ ಸುಂದರ ಮಣ್ಣಿನ ಮೂರ್ತಿಯನ್ನ ಅರ್ಪಿಸಿ ತಮ್ಮ ಕಲಾ ಸೇವೆಯಲ್ಲಿ ಮೆರೆದಿರುವರು. ಪ್ರತ್ಯಕ್ಷವಾಗಿ ಪರೋಕ್ಷವಾಗಿ ಎಲ್ಲಾ ವಿಧದಲ್ಲಿಯೂ ಸಹಾಯ ಸಹಕಾರ ನೀಡುತ್ತಿರುವ ಸಮಾಜ ಹಾಗೂ ರಾಜ್ಯದ ಏಳಿಗೆಯನ್ನು ಬಯಸುತ್ತಾ ಒಕ್ಕೂಟದಿಂದ
ನಡೆಯುವ ಕಾರ್ಯಕ್ರಮಗಳು ಕಣ್ಣಿಗೆ ಕಟ್ಟುವಂತೆ
ಅತ್ಯಂತ ಸುಮಧುರ ಸುಂದರವಾಗಿ
ಮೂಡಿಬಂದಿಹುದು.
ಅಗಷ್ಟ 24ರ ತನಕ ನಡೆಯುವ ಚಾತುರ್ಮಾಸದ ವಿವಿಧ ಕಾರ್ಯಕ್ರಮ ರಾಜ್ಯ ವ್ಯಾಪಿ ಪಸರಿಸಲಿ…😊🙏
ಕು. ಜಿ… ✍️