ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಭಕ್ತಿಯ ಮೂಲಕವೇ ಭಗವಂತನಿರುವ ಬಗ್ಗೆ ಅನುಭೂತಿ ನಮಗಾಗುತ್ತದೆ.ಚಾತುರ್ಮಾಸ್ಯದಲ್ಲಿ ಸಲ್ಲಿಕೆಯಾಗುವ ಸೇವೆ ಹರಿಹರನಿಗೆ ಸಮರ್ಪಿತವಾಗುತ್ತದೆ ಎಂದು ಮಹಾಮಂಡಲೇಶ್ವರ ೧೦೦೮ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ನುಡಿದರು.
ತಾಲೂಕಿನ ಕೋನಳ್ಳಿಯ ಶ್ರೀವನದುರ್ಗಾ ದೇವಾಲಯದಲ್ಲಿ ನಡೆಯುತ್ತಿರುವ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆಯ ೮ನೇ ದಿನದ ಕಾರ್ಯಕ್ರಮದಲ್ಲಿ ಮಹಾಮಂಡಲೇಶ್ವರ ಸದ್ಗುರು ಶ್ರೀಬ್ರಹ್ಮಾನಂದ ಸರಸ್ವತಿ ಮಹಾರಾಜ್ ಆಶೀರ್ವಚನ ನೀಡಿದರು.ಕಷ್ಟ ಬಂದಾಗ ಮಾತ್ರ ದೇವರ ನೆನಪಾಗತ್ತದೆ. ಸುಖವಿದ್ದಾಗ ದೇವರ ನೆನಪೇ ನಮಗಾಗಲ್ಲ.ಬದುಕಿನಲ್ಲಿ ಸಂಕಷ್ಟಗಳು ಎದುರಾಗುತ್ತಲೇ ಇರಬೇಕು.ಆಗ ಮಾತ್ರ ಭಗವಂತನ ಶಕ್ತಿ ಅರಿವಾಗತ್ತದೆ.ಜೀವನದಲ್ಲಿ ಎದುರಾಗುವ ಎಲ್ಲ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಿದಾಗ ಮಾತ್ರ ಮುಂದಿನ ಜೀವನ ನೆಮ್ಮದಿಯಿಂದ ಕೂಡಿರತ್ತದೆ. ಕುಟುಂಬದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ ಇದ್ದಾಗ ಅಲ್ಲಿ ಸಂಶಯಕ್ಕೆ ಅವಕಾಶವಿರುವುದಿಲ್ಲ. ಸಂಸಾರ ಸುಖಮಯವಾಗಿರುತ್ತದೆ. ಅಂತೆಯೇ ಭಗವಂತನದಲ್ಲಿ ಭಕ್ತಿ ಇಲ್ಲದಿದ್ದರೆ ಏನು ಅರ್ಥವಾಗಲ್ಲ. ಭಕ್ತಿಯ ಮೂಲಕವೇ ಭಗವಂತನಿರುವ ಬಗ್ಗೆ ಅನುಭೂತಿ ನಮಗಾಗುತ್ತದೆ. ಚಾತುರ್ಮಾಸ್ಯದಲ್ಲಿ ಸಲ್ಲಿಕೆಯಾಗುವ ಸೇವೆ ಹರಿಹರನಿಗೆ ಸಮರ್ಪಿತವಾಗುತ್ತದೆ. ಈ ಪುಣ್ಯದ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಂಡು ಧನ್ಯತೆ ಪಡೆಯುವಂತೆ ಹಲವು ದೃಷ್ಟಾಂತಗಳ ಮೂಲಕ ಶ್ರೀಗಳು ಭಕ್ತಿಯ ಬಗ್ಗೆ ಮನೋಜ್ಞವಾಗಿ ವಿವರಿಸಿದರು.
ಚಾತುರ್ಮಾಸ್ಯದ ೮ನೇ ದಿನದ ಕಾರ್ಯಕ್ರಮದಲ್ಲಿ ಮೂರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂರೂರು, ಕರ್ಕಿಮಕ್ಕಿ, ತಾರಿಮಕ್ಕಿ ಮತ್ತು ಅಳವಳ್ಳಿ ಹಾಗೂ ಕಲ್ಲಬ್ಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಗ್ರಿಬೈಲ್ ಗ್ರಾಮದ ಸಮಸ್ತ ಊರ ನಾಗರಿಕರು ಗುರು ಪಾದುಕಾ ಪೂಜೆ ಸಲ್ಲಿಸಿದರು. ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಮತ್ತು ಸುನೀಲ್ ನಾಯ್ಕ ಸೋನಿ ಕುಟುಂಬದವರು ಶ್ರೀಗಳಿಗೆ ವಿಶೇಷ ಪೂಜಾ ಸೇವೆ ಸಲ್ಲಿಸಿದರು. ಗುರುಗಳು ಫಲಮಂತ್ರಾಕ್ಷತೆ ನೀಡಿ, ಗೌರವಿಸಿದರು. ಕುಮಟಾದ ಎವಿಪಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾದ ವಿನಾಯಕ.ಎಸ್.ನಾಯ್ಕ್ ಸಂಗಡಿಗರು ಅಳವಳ್ಳಿಯಿಂದ ಗುರುಗಳ ಪಾದ ಪೂಜೆ ಸಲ್ಲಿಸಿದರು. ಗುತ್ತಿಗೆದಾರ ಗೋಪಾಲ ಗೋವಿಂದ ನಾಯ್ಕ್ ದಂಪತಿಗಳು ಬೊಗ್ರಿಬೈಲ್ ಅವರು ವೈಯಕ್ತಿಕವಾಗಿ ಗುರುಗಳ ಪಾದ ಪೂಜೆ ನೆರವೇರಿಸಿ, ಶ್ರೀಗಳಿಂದ ಫಲಮಂತ್ರಾಕ್ಷತೆ ಪಡೆದರು. ಡಾ. ಜಿ. ಜಿ.ಹೆಗಡೆ, ಎಲ್. ಪಿ. ನಾಯ್ಕ್ ಕಾರವಾರ, ಸತ್ಯನಾರಾಯಣ ಮಡಿವಾಳ ಮೂರೂರು, ಚಂದ್ರಶೇಖರ ದೇಶ ಭಂಡಾರಿ ಚಿಪ್ಪಿಹಕ್ಕಲ, ಕೆ. ಜಿ. ಗೌಡ-ಗೌಡ ಸಮಾಜದ ಮುಖ್ಯಸ್ಥರು ಆಗಮಿಸಿದ್ದರು. ಗಜಾನನ ಗೋವಿಂದ ನಾಯ್ಕ್ ಅಳವಳ್ಳಿ, ಜಯಂತ್ ಜಟ್ಟಿ ನಾಯ್ಕ್,,ಸೋಮೇಶ್ವರ್ ನಾಗಪ್ಪ ನಾಯ್ಕ್, ಗಣೇಶ್ ಜಟ್ಟಪ್ಪ ನಾಯ್ಕ್ ಕುಮಟಾ ಇವರು ಗುರು ಸೇವೆಯನ್ನು ಸಲ್ಲಿಸಿದರು. ಮೂರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ ಉದಯ್ ನಾಯ್ಕ್ ಅವರು ಭಕ್ತರಿಗೆ ಸಿಹಿ ವಿತರಿಸಿ, ಗುರು ಸೇವೆ ಸಲ್ಲಿಸಿದರು. ಮಧ್ಯಾಹ್ನ ಪ್ರಸಾದ ಭೋಜನದಲ್ಲಿ ಸುಮಾರು ೨ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ಪುನೀತರಾದರು.
ಇದನ್ನೂ ಓದಿ:ಸರಕಾರಿ ಆಸ್ಪತ್ರೆ ವೈದ್ಯರು ಸತ್ತಿದ್ದೆಂದು ಘೋಷಿಸಿದ ಮಗು, ಖಾಸಗಿ ಆಸ್ಪತ್ರೆಯಲ್ಲಿ ಜೀವಂತ ಜನನ..!