ಸುದ್ದಿಬಿಂದು ಬ್ಯೂರೋ‌ ವರದಿ
ಕಾರವಾರ : ಭಟ್ಕಳ ನಗರ ಸ್ಫೋಟಿಸುವುದಾಗಿ ಇ- ಮೇಲ್‌ ಮೂಲಕ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.

ಕಣ್ಣನ್ ಎಂಬ ತಮಿಳುನಾಡು ಮೂಲದ ವ್ಯಕ್ತಿಯ ಮೊಬೈಲ್ ನಿಂದ ಮತ್ತೊಬ್ಬ ಕೃತ್ಯ ಮೆಸೇಜ್ ಕಳುಹಿಸಿದ್ದ ಎನ್ನಲಾಗಿದೆ. ಕಣ್ಣನ್ ಎಂಬ ವ್ಯಕ್ತಿಯಿಂದ ಮೊಬೈಲ್ ಹೇಗೆ ತೆಗೆದುಕೊಂಡ ಎಂಬುವುದರ ಬಗ್ಗೆ ಸಹ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಈಗಾಗಲೇ ಕಣ್ಣನ್ ಗುರುಸ್ವಾಮಿ ಎಂಬ ವ್ಯಕ್ತಿಯನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ.

ಕಣ್ಣನ್ ಮತ್ತು ಮೋಸ್ಟ್ ವಾಂಟೆಡ್ ವ್ಯಕ್ತಿಯ ನಡುವಿನ ಭೇಟಿಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಮೋಸ್ಟ್ ವಾಂಟೆಡ್ ಅನಾಮಿಕ ವ್ಯಕ್ತಿ ಮೈಸೂರಿನಲ್ಲಿರುವುದು ಪೊಲೀಸರಿಗೆ ಕನ್ಫರ್ಮ್ ಆಗಿದೆ ಎನ್ನಲಾಗಿದೆ. ಈ ಮೋಸ್ಟ್ ವಾಂಟೆಡದ ವ್ಯಕ್ತಿ ಈ ಹಿಂದೆ ಮೈಸೂರು, ಬಳ್ಳಾರಿ, ಕೇರಳ ಸೇರಿದಂತೆ ಬೇರೆ ಕಡೆಗೂ ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಿದ್ದ ಎನ್ನುವ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ ಎನ್ನಲಾಗಿದೆ.ಕರ್ನಾಟಕ ಮತ್ತು ಕೇರಳ ಪೊಲೀಸರ ಕಾರ್ಯಾಚರಣೆಯಿಂದ ಆರೋಪಿಯ ಮಾಹಿತಿ ಪತ್ತೆಯಾಗಿದೆ.

ಉತ್ತರಕನ್ನಡ ಜಿಲ್ಲಾ ಎಸ್ಪಿ ನಾರಾಯಣ್ ನೇತೃತ್ವದಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪತ್ತೆಯಾಗಿದ್ದು, ಮೈಸೂರಿನಿಂದ ಕಾರವಾರಕ್ಕೆ ಕರೆ ತಂದು ವಿಚಾರಣೆ ಮಾಡುವ ಸಾಧ್ಯತೆ ಕೂಡ ಇದೆ.

ಇದನ್ನೂ ಓದಿ:-ಬದುಕಿನ ಪಯಣ ಮುಗಿಸಿದ ಕನ್ನಡದ ಹಿರಿಯ ನಟಿ