ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಕ್ಷುಲ್ಲಕ ಕಾರಣ ಒಂದಕ್ಕೆ ಹೆಣ್ಣುಕೊಟ್ಟ ಅತ್ತೆಗೆ ಅಳಿಯ ಮಹಾಸಯ ಚಾಕು ಇರಿದು ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಒಕ್ಕಲಕೊಪ್ಪ ದೊಳ್ಳಿಯಲ್ಲಿ ಎಂಬಲ್ಲಿ ನಡೆದಿದೆ.
ಕಮಲಾ ನಾರಾಯಣ ನಾಯ್ಕ( 70) ಕೊಲೆಯಾದ ವೃದ್ದ ಮಹಿಳೆಯಾಗಿದ್ದಾಳೆ. ಬಸವರಾಜ್ ಪುಟ್ಟಪ್ಪ ನಾಯ್ಕ ಎಂಬಾತ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.. ಸಣ್ಣಪುಟ್ಟ ವಿಚಾರಕ್ಕೂ ಅತ್ತೆ ಹಾಗೂ ಅಳಿಯನ ನಡುವೆ ಜಗಳ ನಡೆಯುತ್ತಲೆ ಇತ್ತು ಎಂದು ಕೊಲೆ ಆರೋಪಿಯ ಪತ್ನಿ ಗೀತಾ ಬಸವರಾಜ್ ನಾಯ್ಕ ಪೊಲೀಸ್ ಠಾಣೆಯಲ್ಲಿ ನೀಡಿರುವ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ.
ಯಾವುದೋ ಒಂದು ಸಿಟ್ಟನ್ನ ಮನಸ್ಸಿನಲ್ಲಿ ಇಟ್ಟುಕೊಂಡ ಬಸವರಾಜ್ ನಾಯ್ಕ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಹರಿತವಾದ ಆಯುಧದಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈಟನೆಯ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯಕ್ಕೆ ಅದ್ಧೂರಿ ಚಾಲನೆ