ಸ್ನೇಹಿತರೇ ‘ಗುರು ಪೂರ್ಣಿಮಾ’ ನಿಮಿತ್ತ ನಮ್ಮೆಲ್ಲರಿಗೂ ಅಭ್ಯುದಯಕ್ಕೆ ಕಾರಣೀಕರ್ತರಾದ ಗುರುಗಳಿಗೆ ಭಕ್ತಿ ಪೂರ್ವಕ ನಮನಗಳನ್ನ ಸಲ್ಲಿಸೋಣ.
ಗುರುಭ್ಯೋ ನಮಃ…🌹🙏

‘ಒಂದು ಸುಂದರ ಚಿತ್ರಣ ನಮ್ಮಗಳ ಮನಸ್ಸಿನ ಕನ್ನಡಿ ಇದ್ದಂತೆ’.. ಎಂಬ ಮಾತು ಸತ್ಯವಾಗಿಹುದು..
ಎಲ್ರೂ ಹೇಳುವಂತೆ ಎಷ್ಟೋ ಸಾರಿ ಅಂದ್ಕೋಬಹುದು ಕಾಲೇಜ್ ಲೈಫ್ ಇಸ್ ಗೋಲ್ಡನ್ ಲೈಫ್ ಅಂತಾ
ಬಟ್ ನಂಗಸುತ್ತೆ ಹೈಸ್ಕೂಲ್ ಲೈಫ್ ನ ನಾವುಗಳು ಯಾವತ್ತೂ ಮರೆಯೋಕೆ ಅಸಾಧ್ಯ ಅಂತಾ
ಅಲ್ವೇನ್ರೀ ಮತ್ತೆ… 😊
ನಿಜ ಕಣ್ರೀ..
ಅದ್ಯಾಕೋ ಗೊತ್ತಿಲ್ಲ
ಮತ್ತೆ ಮತ್ತೆ ನೆನಪಾಗೋದು
ನಾ ಕಲಿತ ಶಾಲೆಯದು
ನೆನಪುಗಳ ನಂಟು ಗಂಟಾಗಿಹುದು..!
ಆಟ_ಪಾಠ
ನೆನಪುಗಳ ಸರಮಾಲೆಯಾಗಿಹುದು
ಮಾತು ನಗುವಿನ ಧ್ವನಿ
ಬೆಚ್ಚಗೆ ಅಚ್ಚಳಿಯದೆ ಉಳಿದಿಹುದು
ಹಾಗೆ_ಸುಮ್ಮನೆ ಮನಸ್ಸಿನೊಳಗೆ…

ಮೊದಲೇ ತಿಳಿಸಿರುವಂತೆ ನಮ್ಮಗಳ ಗುರು ವೃಂದದಲ್ಲಿರುವ ಇವರೇ ನಮ್ಮಕ್ಕೋರು ತಾರಾಕ್ಕೋರು.. @ತಾರಾ_ನಾಯ್ಕ ಅಂತ ಇವರ ನಾಮಧೇಯ.
ನಮ್ಮ ಸರಕಾರಿ ಪ್ರೌಢ ಶಾಲೆ ಬರ್ಗಿಯಲ್ಲಿ ಕ್ರಾಪ್ಟ್ ಶಿಕ್ಷರಾಗಿ ನಿರಂತರ 30ವರ್ಷ ಸೇವೆ ಸಲ್ಲಿಸಿರುವರು.
ಇವರು ಹೇಳಿಕೊಟ್ಟ ಪಾಠದ ಜೊತೆಗಿನ ಪಠ್ಯೇತರ ಚಟುವಟಿಕೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವಂತದ್ದು. ಇವರಿಗೆ 2020_21 ರಲ್ಲಿ ಜಿಲ್ಲೆಯ ಉತ್ತಮ ಶಿಕ್ಷಕರ ಪ್ರಶಸ್ತಿ ಸಂದಿಹುದು.
ಇವರದು ತುಂಬಾ ಅಚ್ಚುಕಟ್ಟಾದ ಜೀವನ ಶೈಲಿ
ಪುಸ್ತಕ ಪ್ರಿಯರಿವರು, ತಾವೇ ಕವನಗಳನ್ನು ಮಂಡಿಸಿ ತಮ್ಮದೇ ಶೈಲಿಯಲ್ಲಿ ಹಾಡುವುದರಲ್ಲಿ ಎತ್ತಿದ ಕೈ ಇವರದು.

ನೋಡಿ ಮಕ್ಕಳೇ ..
ಇಂದಿನ ಸ್ಪರ್ಧಾ ಜಗತ್ತಿಗೆ ಹೋಲಿಸಿದರೆ ಸ್ಪರ್ಧೆ ಎಲ್ಲಿಂದ ಶುರುವಾಗುತ್ತೆ ಅಂತಾನೇ ಗೊತ್ತಾಗ್ವಲ್ದು ಪ್ರತಿಯೊಬ್ಬರು ಪ್ರತಿ ಸ್ಪರ್ಧೆಯಲ್ಲಿಯೂ ಎಲ್ರೂ ಭಾಗವಹಿಸುವಂತೆ ಎಲ್ಲಾ ಮಕ್ಕಳನ್ನು ಹುರಿದುಂಬಿಸುವರು.

ಹಾಗೆಯೇ ಶಾಲಾ ಮಟ್ಟದಿಂದ ಪ್ರತಿಭಾ ಕಾರಂಜಿಯಲ್ಲಿ ಜನಪದ ಹಾಡು,ಭಾವಗೀತೆ, ಆಶುಭಾಷಣ, ರಂಗೋಲಿ ಸ್ಪರ್ಧೆ ಹಾಗೂ ಪಠ್ಯೇತರ ಇತರೆ ಚಟುವಟಿಕೆಯಲ್ಲಿ ಜಿಲ್ಲೆ ಹಾಗೂ ರಾಜ್ಯಮಟ್ಟದವರೆಗೂ ನಮ್ಮ ಶಾಲೆಯನ್ನು ಬೆಳಗಿಸಿದ ಕೀರ್ತಿ ನಮ್ಮ ಅಕ್ಕೋರಿಗಿದೆ.

ಇವರ ಸರಳ ಜೀವನದಲ್ಲಿ ಶಾಲಾ ಅವಧಿಯ ಎಲ್ಲಾ ಸ್ಟೂಡೆಂಟ್ ನ್ನು ನೆನಪಿಟ್ಟು ಪ್ರತಿಯೊಬ್ಬರನ್ನೂ ವಿಚಾರಿಸುವ ಗುಣ ತುಂಬಾ ಖುಷಿ ಕೊಡುತ್ತದೆ. ಈಗಾಗಲೇ ನಿವೃತ್ತಿ ಹೊಂದಿರುವ ನಮ್ಮಕ್ಕೋರ ಮುಂದಿನ ಜೀವನ ಶುಭಕರವಾಗಲಿ.. 😊🙏
ಕು. ಜೀ… ✍️

ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಬಸ್‌ನಲ್ಲಿ ರಂಪಾಟ : ಪ್ರಯಾಣಿಕರ ಆಕ್ರೋಶ