ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆಗೆ ಸಂಬಂಧಿಸಿದ ಚರ್ಚೆಗಳು ಮತ್ತೆ ಜೋರಾಗಿ ನಡೆಯುತ್ತಿವೆ. ವಿಶೇಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಿಎಂ ಆಗುವ ಮಾತುಕತೆಗಳು ಪಕ್ಷದೊಳಗೆ ಆಂತರಿಕ ಕುಸ್ತಿಗೆ ಕಾರಣವಾಗಿವೆ. ಆದರೆ ಡಿಕೆಶಿ ಅವರು ಹಿಂದೆ ಸರಿಯುವ ಸಾಧ್ಯತೆಗಳು ಹೆಚ್ಚಾಗುತ್ತಿವೆ ಎಂಬ ಮಾಹಿತಿ ಇದ್ದು. “ಡಿಕೆಶಿ ವಿರುದ್ಧ ಏಳು ಅಡ್ಡಿ ಎದುರಾಗಿದ್ದು : ಸಿಎಂ ಸ್ಥಾನ ಇನ್ನೂ ದೂರದ ಕನಸು.?” ಎನ್ನಲಾಗತ್ತಿದೆ.
ಸಿದ್ದು ಷರತ್ತು–ಅಧ್ಯಕ್ಷ ಸ್ಥಾನ ಬಿಟ್ಟು ಮಾತ್ರ ಸಿಎಂ ಆಗಿ: ಸಿದ್ದರಾಮಯ್ಯರು ತಮ್ಮ ಉತ್ತರಾಧಿಕಾರಿಯಾಗಿ ಯಾರನ್ನೂ ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂಬ ಮಾತು ಪಕ್ಷದೊಳಗೆ ಕೇಳಿ ಬರುತ್ತಿದೆ. ಡಿಕೆಶಿ ಸಿಎಂ ಆಗಬೇಕೆಂದರೆ, ಮೊದಲು ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಸಿಎಂ ಸಿದ್ದರಾಮಯ್ಯ ಷರತ್ತು ಹಾಕಿದ್ದಾರೆನ್ನಲಾಗಿದೆ..
ಇನ್ನೂ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದ ಪ್ರಕರಣವನ್ನ ಡಿಕೆಶಿ ಹೆಗಲಿಗೆ ಹಾಕಲಾಗಿದ್ದು,: ಬೆಂಗಳೂರು ನಗರದಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತ ಪ್ರಕರಣಗಳು ಡಿಕೆಶಿಗೆ ನುಸುಳಿದ ದಾಳಿ ಎಂಬಂತೆ ಆಗಿವೆ. ಈ ಪ್ರಕರಣಗಳಲ್ಲಿ ಅವರ ನೇರ ಸಂಬಂಧವಿಲ್ಲದಿದ್ದರೂ, ರಾಜಕೀಯವಾಗಿ ವ್ಯಾಪಕ ಚರ್ಚೆಯಾಗುತ್ತಿದೆ..
ಈ ಹಂತದಲ್ಲಿ ಸಿಎಂ ಬದಲಾವಣೆಯಾಗುವದರಿಂದ ಬಿಹಾರ ಸೇರಿದಂತೆ ಇತರ ರಾಜ್ಯಗಳ ಚುನಾವಣಾ ನಿರ್ವಹಣೆಗೆ ಹೊಡೆತ ಆಗಬಹುದು ಎಂಬ ಆಂತರಿಕ ಆತಂಕ ಕಾಂಗ್ರೆಸ್ ಹೈಕಮಾಂಡ್‌ನಲ್ಲಿದೆ.
ಇಡಿ ತನಿಖೆಗಳ ತೂಕ: ಡಿಕೆಶಿಯವರ ಮೇಲೆ Enforcement Directorate (ED) ಮತ್ತು ಇತರ ತನಿಖಾ ಸಂಸ್ಥೆಗಳ ದೃಷ್ಟಿ ಇತ್ತೀಚೆಗೆ ಮತ್ತಷ್ಟು ಚುರುಕಾಗಿದೆ. ಈ ಹಿನ್ನೆಲೆ ಅವರನ್ನು ಸಿಎಂ ಸ್ಥಾನ ನೀಡಿದರೆ ಪಕ್ಷಕ್ಕೆ ತೊಂದರೆಯಾಗಬಹುದು ಎಂಬ ಲೆಕ್ಕಾಚಾರ ಇದೆ.
ದಲಿತ ಸಿಎಂ ಕೂಗು ಗಟ್ಟಿಯಾಗುತ್ತದೆ: ಡಿಕೆಶಿ ಸಿಎಂ ಆದರೆ, ದಲಿತ ಸಮುದಾಯದಿಂದ “ನಮಗೂ ಮೊದಲ ಬಾರಿಗೆ ಸಿಎಂ ಸ್ಥಾನ ಕೊಡಿ” ಎಂಬ ಒತ್ತಡ ಹೆಚ್ಚಾಗುತ್ತದೆ. ಈಗಾಗಲೇ ಈ ಕೂಗು ಪಕ್ಷದೊಳಗೆ ಬಲವಾಗಿ ಕೇಳಿಬರುತ್ತಿದೆ.
ದೊಡ್ಡದಾಗಿರುವ ಆಕಾಂಕ್ಷಿಗಳ ಪಟ್ಟಿ: ಕಾಂಗ್ರೆಸ್‌ನಲ್ಲಿ ಸಿಎಂ ಆಸೆಪಟ್ಟುಕೊಳ್ಳುವವರ ಪಟ್ಟಿ ದೊಡ್ಡದಾಗಿದ್ದು,. ಡಾ.ಪರಮೇಶ್ವರ, ಖರ್ಗೆ ಬಣದವರು, ಕೆಲವು ಹಿರಿಯ ಮುಖಂಡರು ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ..
ಸಿದ್ದರಾಮಯ್ಯಗೆ ‘ಅರಸು ದಾಖಲೆ’ ಮುರಿಯುವ ಕನಸು: ಸಿದ್ದರಾಮಯ್ಯ ಅವರು ಎರಡು ಬಾರಿ ಪೂರ್ಣಾವಧಿ ಮುಖ್ಯಮಂತ್ರಿ ಆಗುವ ಕನಸನ್ನು ಸಾಕಾರಗೊಳಿಸಲು ಮುಂದಾಗಿದ್ದಾರೆ. ಅವರು ‘ಅರಸು ದಾಖಲೆ’ ಮುರಿಯುವ ಆಶಯ ಹೊಂದಿರುವುದು ಕೂಡ ಡಿಕೆಶಿಯ ಭವಿಷ್ಯಕ್ಕೆ ಅಡೆತಡೆಯಾಗಿದೆ.
ಇಂತಹ ರಾಜಕೀಯ ಸಮೀಕರಣದ ನಡುವೆ, ಡಿಕೆಶಿ ಸಿಎಂ ಆಕಾಂಕ್ಷೆಗೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾವ ತೀರ್ಮಾನಕ್ಕೆ ಬಿದರ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಇದನ್ನೂ ಓದಿ :-ಕದ್ರಾ-ಕೊಡಸಳ್ಳಿ ಮಾರ್ಗದಲ್ಲಿ ಗುಡ್ಡಕುಸಿತ : ರಸ್ತೆ ಸಂಚಾರ ಸ್ಥಗಿತ