ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ :ರಾಜ್ಯ ಸಾರಿಗೆ ಇಲಾಖೆ ವ್ಯಾಪ್ತಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು (NWKRTC) ಶಿರಸಿ ವಿಭಾಗದ ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ ಮತ್ತು ಯಲ್ಲಾಪುರ ಘಟಕಗಳಿಗಾಗಿ ಹೊರಗುತ್ತಿಗೆ ಆಧಾರದ ಮೇಲೆ ಚಾಲಕರ ನೇಮಕಾತಿಗೆ ಅರ್ಜಿ ಆಹ್ವಾನ.
ಚಾಲಕರ ನೇಮಕಾತಿಗ ಬೇಕಾಗಿರುವ ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್, ಕನಿಷ್ಠ 2 ವರ್ಷಗಳಿಂದ ಮಾನ್ಯವಾದ ಭಾರೀ ವಾಹನ ಚಾಲನಾ ಪರವಾನಗಿ ಮತ್ತು ಬ್ಯಾಡ್ಜ್
ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರ (ಎತ್ತರ ಕನಿಷ್ಠ 163 ಸೆಂ.ಮೀ), ಪೊಲೀಸ್ ಪರಿಶೀಲನಾ ಪ್ರಮಾಣಪತ್ರ
ಮೂರು ಪಾಸ್‌ಪೋರ್ಟ್ ಗಾತ್ರದ ಫೋಟೋ,
ಶೈಕ್ಷ ಣಿಕ ಅರ್ಹತೆಗಾಗಿ 7ನೇ ತರಗತಿ ಅಥವಾ ಮೇಲ್ಪಟ್ಟ ತರಗತಿಯ ಅಂಕಪಟ್ಟಿ ಅಥವಾ TC, ಬ್ಯಾಂಕ್ ಖಾತೆಯ ವಿವರಗಳು, ವೇತನದ ವಿವರಗಳು: ಮೂಲ ವೇತನ ಟಿಎ-ಡಿಎ ಸೇರಿ: 23,000 ಸಾವಿರ, ಬೆಟ್ಟದ ಭತ್ಯೆ: 2,000, ಎಲ್ಲಾ ಸೇರಿ 25,000 ಸಾವಿರ ವೇತನ ನೀಡಲಾಗುವುದು..