ಸುದ್ದಿಬಿಂದು ಬ್ಯೂರೋ ವರದಿ
ಬೆಳಗಾವಿ: ಖಾನಾಪುರ ತಾಲೂಕಿನ ಲೋಂಡಾ ಅರಣ್ಯ ವಲಯದಲ್ಲಿ ಕಡವೆ ಬೇಟೆ ಆಡಿದ ತಂಡದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 9 ಜನರನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಖಾನಾಪುರ ಎಸಿಎಫ್ ಸುನೀತಾ ನಿಂಬರಗಿ ನೇತೃತ್ವದಲ್ಲಿ ಅರಣ್ಯ ಇಲಾಖೆ ದಾಳಿ ನಡೆಸಿದ್ದು, ನೇರಸೆ ಗ್ರಾಮದ ರಂಜಿತ್ ದೇಸಾಯಿ, ಬಲವಂತ ದೇಸಾಯಿ, ಆತ್ಮರಾಮ್ ದೇವಳಿ, ಪ್ರಮೋದ್ ದೇಸಾಯಿ, ದತ್ತರಾಜ್ ಹವಾಲ್ದಾರ್, ಜ್ಞಾನೇಶ ಗಾವಡೆ, ಗೋವಿಂದ ದೇಸಾಯಿ, ಅಪ್ಪಿ ಹಣಬರ ಹಾಗೂ ಬರಮಪ್ಪ ಹಣಬರ ಎಂಬುವವರನ್ನ ಬಂಧಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಂಧಿತರಿಂದ ಎರಡು ಬಂದೂಕುಗಳು, ಒಂದು ಕುಡಗೋಲು ಹಾಗೂ ಕಡವೆ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಭಾರತ ಸರ್ಕಾರದ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ..

ಇದನ್ನ ಓದಿ : “ಗುಂಡು ಹುಡುಗಿಯ ನಶೆಯ ಕಾರುಚಾಲನೆ: ಮಹಿಳೆಯ, ವಿಡಿಯೋ ವೈರಲ್!”