ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ಪುರಾಣ ಪ್ರಸಿದ್ಧವಾಗಿರುವ ಮುರುಡೇಶ್ವರ ದೇವಾಲಯಕ್ಕೆ (Murudeshwara Temple)ಬರುವ ಭಕ್ತರಿಗೆ ಇನ್ನುಮುಂದೆ ವಸ್ತ್ರ ಸಂಹಿತೆ (Dress code) ಜಾರಿ ಮಾಡಲು ಆಡಳಿತ ಮಂಡಳಿ ಮುಂದಾಗಿದೆ.
ಈ ಬಗ್ಗೆ ದೇವಾಲಯದ ಎದುರುಗಡೆ ಸೂಚನ ಫಲಕ ಹಾಕಲಾಗಿದ್ದು,ದೇವಾಲಯದ ಒಳ ಪ್ರವೇಶಕ್ಕೆ ಕಡ್ಡಾಯವಾಗಿ ವಸ್ತ್ರ ಸಂಹಿತೆ ಜಾರಿ ಮಾಡಲು ತೀರ್ಮಾನಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ದೇಗುಲಕ್ಕೆ ಬರುವ ಭಕ್ತರು ಬೇಕಾಬಿಟ್ಟಿ ಬಟ್ಟೆ ಧರಿಸಿ ದೇವಾಲಯ ಪ್ರವೇಶ ಮಾಡುತ್ತಿದ್ದರು ಎನ್ನುವ ಪ್ರಶ್ನೆ ಕೂಡ ಎದ್ದಿತ್ತು. ಇದಕ್ಕೆ ಹಿಂದೂ ಪರ ಸಂಘಟನೆಯವರು ವಸ್ತ್ರ ಸಂಹಿತೆ ಜಾರಿ ತರಲು ಮನವಿ ಮಾಡಿದ್ದರು.
ಇದೀಗ ಆಡಳಿತ ಮಂಡಳಿಯಿಂದ ವಸ್ತ್ರ ಸಂಹಿತೆ ಜಾರಿ ಮುಂದಾಗಿದ್ದು, ದೇವಸ್ಥಾನದ ಒಳಗೆ ಬರುವ ಪುರುಷರು ಧೋತಿ, ಶಲ್ಯ, ಅಥವಾ ಪಂಚೆ ಮತ್ತು ಶರ್ಟ್ ಧರಿಸಬೇಕು, ಮತ್ತು ಮಹಿಳೆಯರು ಸೀರೆ, ಚೂಡಿದಾರ್, ಅಥವಾ ಲಂಗಾ-ದಾವಣಿ ಧರಿಸಬೇಕು. ಚಿಕ್ಕ ಮತ್ತು ಅಸಭ್ಯ ಉಡುಪುಗಳನ್ನು ಧರಿಸಿ ದೇವಸ್ಥಾನಕ್ಕೆ ಪ್ರವೇಶಿಸುವಂತಿಲ್ಲ. ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವಾಗ ವಸ್ತ್ರ ಸಂಹಿತೆ ಪಾಲಿಸುವುದು ಕಡ್ಡಾಯವಾಗಿದೆ. ಈ ಬಗ್ಗೆ ದೇವಾಲಯ ಆಡಳಿತ ಮಂಡಳಿ ಸ್ಪಷ್ಟ ಸೂಚನೆಗಳನ್ನು ನೀಡಿದೆ. ದೇವಾಲಯದ ಪಾವಿತ್ರ್ಯತೆ ಮತ್ತು ಸಂಪ್ರದಾಯವನ್ನು ಕಾಪಾಡುವ ಸಲುವಾಗಿ ಈ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿದೆ.
ಈ ನಿಯಮಗಳನ್ನು ಉಲ್ಲಂಘಿಸಿದರೆ, ದೇವಾಲಯದ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದಿಲ್ಲ. ಆದ್ದರಿಂದ, ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡುವ ಮುನ್ನ ಈ ವಸ್ತ್ರ ಸಂಹಿತೆಯನ್ನು ಪಾಲಿಸಬೇಕು. ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವಾಗ ಪಾಲಿಸಬೇಕಾದ ವಸ್ತ್ರ ಸಂಹಿತೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ನೀವು ದೇವಸ್ಥಾನದ ಆಡಳಿತ ಮಂಡಳಿಯನ್ನು ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ