ಸುದ್ದಿಬಿಂದು ಬ್ಯೂರೋ ವರದಿ
ಜೊಯೀಡಾ : ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯೀಡಾ ತಾಲೂಕಿನ ಅನಮೋಡ ಬಳಿ ನಡೆದಿದೆ.
ಅಪಘಾತದಲ್ಲಿ ಮೃತ ಪಟ್ಟಿರುವ ಬೈಕ್ ಸವಾರ ಮಿರಾಶಿ ವಾಡಾದ ಯುವಕ ನಾಗೇಂದ್ರ ಎಂದು ಗುರುತಿಸಲಾಗಿದೆ…ಈತ ರಾಮನಗರ ಕಡೆಯಿಂದ ಗೋವಾ ಕಡೆ ಚಲಿಸುತ್ತ ಎನ್ನಲಾಗಿದ್ದು, ಈ ವೇಳೆ ಅನಮೋಡ ಬಳಿ ಹೋಗುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಜೊಯೀಡಾ, ರಾಮನಗರ ಸೇರಿದಂತೆ ಆ ಭಾಗದ ಅನೇಕರು ಉದ್ಯೋಗಕ್ಕಾಗಿ ಗೋವಾಕ್ಕೆ ಹೋಗುವುದು ಸಾಮಾನ್ಯವಾಗಿದ್ದು, ಅದೆ ರೀತಿ ಬೈಕ್ ಅಪಘಾತದಲ್ಲಿ ಮೃತಪಟ್ಟಿರುವ ವ್ಯಕ್ತಿ ಉದ್ಯೋಗಕ್ಕಾಗಿ ಬೈಕ್‌ನಲ್ಲಿ ಗೋವಾಕ್ಕೆ ಹೋಗುತ್ತಿರಬಹುದು ಎಂದು ಉಹಿಸಲಾಗಿದೆ.
ಅಪಘಾತ ಸ್ಥಳಕ್ಕೆ ರಾಮನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಮೃತ ಬೈಕ್ ಸವಾರನ ಶವವನ್ನ ರಾಮನಗರ ಸರಕಾರಿ ಆಸ್ಪತ್ರೆಯ ಶವವಾಗಾರದಲ್ಲಿ ಇಡಲಾಗಿದೆ.
ಇದನ್ನೂ ಓದಿ