ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಗೋಕರ್ಣದಿಂದ ಮಂಗಳೂರಿಗೆ ಹೊರಟ್ಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಅಂಗಡಿಗೆ ನುಗ್ಗಿ ಮಹಿಳೆ ಗಾಯಗೊಂಡ ಘಟನೆ ಕೋಡ್ಕಣಿ ಕ್ರಾಸ್ ಸಮೀಪ ಇರುವ ಮಾರುತಿ ನಾಯ್ಕ ಎಂಬುವರಿಗೆ ಸೇರಿದ್ದ ಅಂಗಡಿಯಲ್ಲಿ ಈ ಘಟನೆ ನಡೆದಿದೆ.
ಘಟನೆಯಲ್ಲಿ ಅಂಗಡಿಯಲ್ಲಿ ಇದ್ದ ನಿರ್ಮಲಾ ಎಂಬುವವರ ತಲೆಗೆ ಗಾಯವಾಗಿದ್ದು, ಅವರನ್ನ ತಕ್ಷಣ 108 ವಾಹನ ಮೂಲಕ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೆ ಒಳಾಗಿದ್ದ ಕಾರು ಮಂಗಳೂರು ಮೂಲದವರು ಎಂಬುದಾಗಿ ತಿಳಿದು ಬಂದಿದೆ.ಕಾರನಲ್ಲಿ ಇದ್ದವರು ಗೋಕರ್ಣದ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ವಾಪಸ್ ಮಂಗಳೂರು ಕಡೆ ಹೋಗುತ್ತಿದ್ದರು. ಈ ವೇಳೆ ಮಾರುತಿ ನಾಯ್ಕ ಅವರ ಅಂಗಡಿ ಬಳಿ ಬರುತ್ತಿದ್ದಂತೆ ಕಾರು ಪಲ್ಟಿಯಾಗಿದೆ. ಹೆದ್ದಾರಿಯಲ್ಲಿ ಪಲ್ಟಿಯಾದ ಕಾರು ಅಲ್ಲೆ ಪಕ್ಕದಲ್ಲಿದ್ದ ಮಾರುತಿ ನಾಯ್ಕ ಅವರ ಅಂಗಡಿಯೊಳಗೆ ನುಗ್ಗಿದೆ.
https://whatsapp.com/channel/0029VaAvVKA47Xe7I9bdgG31
ಈ ವೇಳೆ ಅಲ್ಲೆ ನಿಲ್ಲಿಸಲಾಗಿದ್ದ ಒಂದೇರಡು ಬೈಕ್ ಕೂಡ ಪಲ್ಟಿಯಾದ ಕಾರ ಅಡಿಯಲ್ಲಿ ಸಿಲುಕಿ ಜಖಂಗೊಂಡಿದೆ. ಕಾರು ಅಂಗಡಿಯೊಳಗೆ ನುಗ್ಗಿರುವ ಕಾರಣ ಎದುರಿಗೆ ಹಾಕಲಾಗಿದ್ದ ಮೇಲ್ಛಾವಣಿ ಹಾರಿಹೋಗಿದೆ.ಇನ್ನೂ ಕಾರಲ್ಲಿದ್ದವರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.
ಇದನ್ನೂ ಓದಿ