ಚಿನ್ನ ಖರೀದಿ ಮಾಡಲು ಸಿದ್ಧರಿರುವವರಿಗೆ ಸಂತೋಷದ ಸುದ್ದಿ ಇದೆ. ಚಿನ್ನದ ಬೆಲೆಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಅಂತರರಾಷ್ಟ್ರೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಗಳು ಇನ್ನಷ್ಟು ಇಳಿಯುವ ಸಾಧ್ಯತೆವಿದೆ ಎಂಬುದಾಗಿ ತಜ್ಞರು ಅಂದಾಜಿಸಿದ್ದಾರೆ.

ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಚರ್ಚೆಗಳೇ ಚಿನ್ನದ ಬೆಲೆ ಇಳಿಕೆಯ ಪ್ರಮುಖ ಕಾರಣವಾಗಿವೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಇತ್ತೀಚಿನ ಅಮೆರಿಕಾ-ಚೀನಾ ವ್ಯಾಪಾರ ಯುದ್ಧವು ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿತ್ತು. ಪರಿಣಾಮವಾಗಿ, ಹೂಡಿಕೆಯು ಸುರಕ್ಷಿತವಾಗಿರುವ ಚಿನ್ನದತ್ತ ಹೂಡಿದವರ ಗಮನ ಹರಿದು, ಚಿನ್ನದ ಬೆಲೆ ಏರಿಕೆಯಾಗಿತ್ತು.

ಆದರೆ, ಇತ್ತೀಚೆಗೆ ಈ ಎರಡು ರಾಷ್ಟ್ರಗಳ ನಡುವಿನ ವ್ಯಾಪಾರ ಉದ್ವೇಗಗಳು ಕಡಿಮೆಯಾಗುತ್ತಿರುವುದು ಮತ್ತು ರಷ್ಯಾ-ಉಕ್ರೇನ್ ನಡುವಿನ ಉದ್ವೇಗಗಳು ಹತೋಟಿಗೆ ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇಳಿಯಬಹುದೆಂದು ತಜ್ಞರು ಅಂದಾಜಿಸಿದ್ದಾರೆ.

ಸೋಮವಾರ ಬೆಳಿಗ್ಗೆ ದಾಖಲಾಗಿರುವ ಮಾಹಿತಿಯ ಪ್ರಕಾರ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದ್ದು, 31.10 ಗ್ರಾಂ ತೂಕದ ಒಂದೌನ್ಸ್ ಚಿನ್ನದ ಬೆಲೆ $49 ಕಡಿಮೆಯಾಗಿದ್ದು, ಈಗ $3,277 ಆಗಿದೆ. ಭಾರತದಲ್ಲಿಯೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. 24 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ ರೂ.1,800 ಇಳಿಕೆಯಾಗಿದ್ದು, 22 ಕ್ಯಾರಟ್ ಚಿನ್ನದ ಬೆಲೆ ರೂ.1,650 ಇಳಿಕೆಯಾಗಿದೆ. ಇತ್ತ ಬೆಳ್ಳಿ ಬೆಲೆಯಲ್ಲಿಯೂ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ ರೂ.2,000 ಕಡಿಮೆಯಾಗಿದೆ.

ಬೆಂಗಳೂರಲ್ಲಿ 24 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ ರೂ.96,880 ಆಗಿದ್ದು, ರೂ.1,800 ಇಳಿಕೆಯಾಗಿದೆ. ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ರೂ.9,688 ಆಗಿದ್ದು, ರೂ.180 ಇಳಿಕೆಯಾಗಿದೆ. 22 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ರೂ.8,880 ಆಗಿದ್ದು, ಇದೂ ರೂ.165 ಇಳಿಕೆಯಾಗಿದೆ.

ಇದನ್ನ ಓದಿ