ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ:ದೇಶದಲ್ಲಿ ಯುದ್ಧದ ಸನ್ನಿವೇಶ ಇದ್ದರಿಂದ, ಯುದ್ಧ ನಡೆದರೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮದ ಹಿನ್ನೆಲೆಯಲ್ಲಿ ಆಪರೇಷನ್ ‘ಅಭ್ಯಾಸ’ ಅಣುಕು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಎಂ. ನಾರಾಯಣ ಅವರು ಹೇಳಿದರು.
ನಗರದ ಎಸ್ಪಿ ಕಚೇರಿಯಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು ಯುದ್ಧದ ವಾತಾವರಣ ಇದ್ದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ತೊಂದರೆಗೆ ಸಿಲುಕುವವರನ್ನು ಯಾವ ರೀತಿ ರಕ್ಷಣೆ ಮಾಡಬೇಕು ಎನ್ನುವುದರ ಬಗ್ಗೆ ಅಣಕು ಕಾರ್ಯಾಚರಣೆ ನಡೆಸಲು ಸರಕಾರದಿಂದ ಆದೇಶ ಬಂದಿದೆ. ಇಲ್ಲಿನ ಸೂಕ್ಷ್ಮ ಸ್ಥಳಗಳಾದ ಕೈಗಾ ಅಣು ವಿದ್ಯುತ್ ಹಾಗೂ ಐಎನ್ ಎಸ್ ಕದಂಬ ನೌಕಾನೆಲೆ ಪ್ರದೇಶದಲ್ಲಿ ಅಣುಕು ಕಾರ್ಯಾಚರಣೆ ನಡೆಸಲಾಗವುದು ಎಂದರು.
ಯುದ್ಧದ ಸನ್ನಿವೇಶ ಎದುರಿಸಲು ಸಾರ್ವಜನಿಕರನ್ನು ತೊಡಗಿಸಿಕೊಳ್ಳುವ ಉದ್ದೇಶದಿಂದ ಮಾಕ್ ಡ್ರಿಲ್ ಮಾಡಲಾಗುತ್ತಿದೆ. ಅಪರೇಷನ್ ಅಭ್ಯಾಸ್ ಹೆಸರಿನಲ್ಲಿ ಬುಧವಾರ ಅಣಕು ಕಾರ್ಯಾಚರಣೆ ನಡೆಯಲಿದೆ. ಗೃಹರಕ್ಷಕ ದಳ, ಎನ್.ಸಿ.ಸಿ, ಎನ್ ಎಸ್ ಎಸ್ ವಿದ್ಯಾರ್ಥಿಗಳು, ಪೊಲೀಸ್, ನೇವಿ ಸೇರಿದಂತೆ ಸಿವಿಲ್ ಸಿಬ್ಬಂದಿ ಭಾಗಿಯಾಗಲಿದ್ದಾರೆ ಎಂದರು. ಬೆಳಗ್ಗೆ ಅಣಕು ಕಾರ್ಯಾಚರಣೆ ಆರಂಭವಾಗಲಿದೆ. ಭಾರತೀಯ ನೌಕಾಪಡೆ, ಆರ್ಮಿ ಜೊತೆ ಸಂಪರ್ಕ ಸಾಧಿಸಲು ತರಬೇತಿ ನೀಡುವುದು, ಅಗ್ನಿ ಶಾಮಕ ಕಾರ್ಯಾಚರಣೆ, ಅಪಾಯದಿಂದ ರಕ್ಷಣೆ ಮಾಡುವುದು ಸೇರಿದಂತೆ ವಿವಿಧ ಬಗೆಯ ಕ್ರಮಗಳನ್ನು ಮಾಕ್ ಡ್ರಿಲ್ ನಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು..
ಇದನ್ನೂ ಓದಿ
- ಬ್ರೇಕ್ಫಾಸ್ಟ್ ಟೇಬಲ್ ಮೇಲೆ ಸಿಎಂ ನಿರ್ಧಾರ..? ಕುತೂಹಲ ಮೂಡಿಸಿರುವ ನಾಳೆಯ ಸಿದ್ಧು–ಡಿಕೆ ಮಾತುಕತೆ
- ಬಿಸಿಯೂಟ ಸೇವಿಸಿದ 22 ವಿದ್ಯಾರ್ಥಿಗಳು ಅಸ್ವಸ್ಥ
- ಮಠವು ಪರಂಪರೆ ಹಾಗೂ ಆಧುನಿಕತೆಯ ಜೊತೆ ಸೇತುವೆಯಾಗುವ ಪ್ರಮುಖ ಭೂಮಿಯಕೆಯಾಗಲಿ: ನರೇಂದ್ರ ಮೋದಿ
- ಕಾಲ ಬಳಿ ಹೆಡೆ ಎತ್ತಿದ ಕಿಂಗ್ ಕೋಬ್ರಾ! ಕ್ಷಣಾರ್ಧದಲ್ಲಿ ಬುದ್ಧಿವಂತಿಕೆಯಿಂದ ಪತ್ನಿಯನ್ನ ಉಳಿಸಿದ ಪತಿ : ಮಿರ್ಜಾನದಲ್ಲೊಂದು ಅಚ್ಚರಿಯ ಘಟನೆ


