ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಪಟ್ಟಣದ ನಿರ್ಮಲಾ ಕಾನ್ವೆಂಟ್ನ ವಿದ್ಯಾರ್ಥಿನಿ ಹರ್ಷಿತಾ ಅರವಿಂದ ನಾಯ್ಕ ಇವಳು 2025ರ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 616 ಅಂಕ ಪಡೆಯುವ ಮೂಲಕ ಶೇಕಡಾ 98.56ರಷ್ಟು ಫಲಿತಾಂಶದೊಂದಿಗೆ ರಾಜ್ಯಕ್ಕೆ 10ನೇ ರ್ಯಾಂಕ್ ಮತ್ತು ಶಾಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾಳೆ.
ಪಟ್ಟಣದ ಆಶಿಕಾ ಸೈಬರ್ ಮಾಲೀಕ ಹಾಗೂ ಪಟ್ಟಣದ ಹಳೇ ಮೀನುಪೇಟೆ ನಿವಾಸಿ ಅರವಿಂದ ರಾಮ ನಾಯ್ಕ ಮತ್ತು ಸುಜಾತ ಅರವಿಂದ ನಾಯ್ಕ ಅವರ ಪುತ್ರಿಯಾದ ಇವಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಪಡೆದಿದ್ದಾಳೆ. ಇವಳು ಚಿಕ್ಕಂದಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಪಠ್ಯದ ಜೊತೆಗೆ ಪತ್ಯೇತರ ಚಟುವಟಿಕೆಯಲ್ಲೂ ಭಾಗವಹಿಸುವ ಮೂಲಕ ನಿರ್ಮಲಾ ಕಾನ್ವೆಂಟ್ ಹೈಸ್ಕೂಲಿನ ಹೆಸರು ಹಾಗೂ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ್ದಾಳೆ.
ಹರ್ಷಿತಾ ನಾಯ್ಕ ಯಾವುದೇ ಟ್ಯೂಶನ್ ಪಡೆಯದೇ ಶಾಲಾ ಮುಖ್ಯಾಧ್ಯಾಪಕ ಮತ್ತು ಶಿಕ್ಷಕರ ಮಾರ್ಗದರ್ಶನ ಹಾಗೂ ಪಾಲಕರ ಪ್ರೋತ್ಸಾಹದಿಂದಲೇ ಈ ಅಮೋಘ ಸಾಧನೆ ಮಾಡಿದ್ದಾಳೆ. ಇವಳ ಸಾಧನೆಗೆ ಶಾಲಾ ಶಿಕ್ಷಕ ವೃಂದ, ಕುಟುಂಬಸ್ಥರು ಹಾಗೂ ಹಿತೈಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ
- ಕಲ್ಲೇಶ್ವರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಸಂಭ್ರಮ
- Dharamsthala/ಧರ್ಮಸ್ಥಳಕ್ಕೆ ಬಂದ ಬುರುಡೆ ದಾಸನ ರಹಸ್ಯ..!!
- PSI/ಪಿಎಸ್ಐ ಪತ್ನಿ ಆತ್ಮಹತ್ಯೆ
- ಯಲ್ಲಾಪುರ ಬಳಿ ಭೀಕರ ರಸ್ತೆ ದುರಂತ: ಬಸ್–ಲಾರಿ ಡಿಕ್ಕಿ, ಮೂವರು ಸಾವು – ಏಳು ಮಂದಿ ಗಂಭೀರ”
.