ಬೆಂಗಳೂರು: ಇಂದು ಅಕ್ಷಯ ತೃತೀಯ ದಿನವಾಗಿದೆ.ಈ ದಿನ ಸ್ವಲ್ಪವಾದರೂ ಬಂಗಾರ ಖರೀದಿ ಮಾಡಿದ್ದರೆ ಜೀವನದಲ್ಲಿ ಒಳ್ಳೆಯದಾಗತ್ತೆ ಎನ್ನುವ ನಂಬಿಕೆ ಇದೆ. ಹೀಗಾಗಿ ಇಂದು ಹೆಚ್ಚಿನ ಜನ ಚಿನ್ನ ಖರೀದಿಗೆ ಮುಂದಾಗಿದ್ದಾರೆ. ಹಾಗಾದ್ದರೆ ಅಕ್ಷಯ ತೃತ್ತೀಯ ದಿನವಾದ ಇಂದು ಬಂಗಾರದ ಬೆಲೆ ಹೇಗಿದೆ ಎನ್ನುವುದನ್ನ ತಿಳಿದುಕೊಳ್ಳಿ,ಸಂಪೂರ್ಣ ಮಾಹಿತಿ ಇಲ್ಲಿದೆ.

ಚಿನ್ನದ ಬೆಲೆ ಎಷ್ಟಿದೆ?
ದೇಶೀಯ
ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಂದು 5 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ, 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹8,975 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ₹6 ಇಳಿಕೆಯಿಂದ ₹9,791 ಆಗಿದೆ.

10ಗ್ರಾಂ ಚಿನ್ನದ ದರ ಎಷ್ಟು?
ಇಂದು 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ₹50 ಇಳಿಕೆಯಾಗಿದೆ. ಇಂದಿನ ಬೆಲೆ ₹89,750. 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ₹60 ಇಳಿಕೆಯಿಂದ ₹97,910 ಆಗಿದೆ.

ಬೆಂಗಳೂರು ನಗರದಲ್ಲಿ ಚಿನ್ನದ ಬೆಲೆ
ಬೆಂಗಳೂರುನಲ್ಲಿ 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹8,975 ಆಗಿದೆ. ಬೆಳ್ಳಿಯ ಬೆಲೆಯೂ 50 ಪೈಸೆ ಇಳಿಕೆಯಿಂದ ₹1,00,000 ಆಗಿದೆ.

ಹೆಚ್ಚಿದ ಬೇಡಿಕೆ, ಹೆಚ್ಚಿದ ಬೆಲೆ!
ಇಂದು ಅಕ್ಷಯ ತೃತೀಯ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರವೇ ಜುವೆಲ್ಲರ್‌ಗಳು ಮತ್ತು ಸ್ಟಾಕ್‌ಹೋಲ್ಡರ್‌ಗಳಿಂದ ಖರೀದಿ ಜೋರಾಗಿತ್ತು. ಈ ಕಾರಣದಿಂದಾಗಿ ಮಂಗಳವಾರ 10 ಗ್ರಾಂ ಚಿನ್ನದಾಭರಣದ ಬೆಲೆ ₹1,100 ಹೆಚ್ಚಾಗಿ ₹99,000 ಎಂದು ಆಲ್ ಇಂಡಿಯಾ ಸರಾಫ್ ಸಂಘ ಮಾಹಿತಿ ನೀಡಿದೆ. ಈ ವರ್ಷದ ಆರಂಭದಿಂದ ಈಗಾಗಲೇ 10 ಗ್ರಾಂ ಚಿನ್ನದ ಬೆಲೆ ₹20,500 ಏರಿಕೆಯಾಗಿದೆ. ಕಳೆದ ವರ್ಷ ಡಿಸೆಂಬರ್ 31 ರಂದು ಇದೇ ತೂಕದ ಚಿನ್ನ ₹78,950 ಕ್ಕು ಲಭ್ಯವಿತ್ತು. ಈ ವರ್ಷ ಇದುವರೆಗೆ 26% ಏರಿಕೆಯಾಗಿದೆ.

ಬೆಳ್ಳಿ ಬೆಲೆ 3,500ರೂ ಏರಿಕೆ
ಮಂಗಳವಾರ 1 ಕೆ.ಜಿ ಬೆಳ್ಳಿಯ ಬೆಲೆ ₹3,500 ಏರಿಕೆಯಿಂದ ₹1,02,000 ರನ್ನ ತಲುಪಿತು. ಮಾರ್ಚ್ 19ರಂದು ಬೆಳ್ಳಿ ₹1,000 ಏರಿಕೆಯಾಗಿ ₹1,03,500 ಆಗಿತ್ತು. ಅದು ಇಂದಿಗೂ ದಾಖಲೆ ಸ್ಥಿತಿಯಲ್ಲಿದೆ.

ಇದನ್ನೂ ಓದಿ