ಬೆಂಗಳೂರು: ಚಿನ್ನ ಖರೀದಿಸುವವರಿಗೆ ಇಂದು ಶುಭ ಸುದ್ದಿಯಾಗಿದೆ. ಕಳೆದ ವಾರದ ಪ್ರಾರಂಭದಲ್ಲಿ ಏರಿಕೆ ಕಂಡ ಚಿನ್ನದ ಬೆಲೆ ಈ ವಾರದ ಮೊದಲ ದಿನ ಸ್ವಲ್ಪ ಕುಸಿದಿದೆ. 10ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಇಳಿಕೆಯಾಗಿದ್ದು, ಅಪರಂಜಿ ಚಿನ್ನದ ಬೆಲೆಯಲ್ಲಿ 160 ರೂಪಾಯಿ ಇಳಿಕೆಯಾಗಿಸಿದೆ.

ಕಳೆದ ವಾರ ಸೋಮವಾರದಿಂದ ಗುರುವಾರದವರೆಗೆ ಚಿನ್ನದ ಬೆಲೆ ಏರಿಕೆ ಕಂಡು, ವಾರಾಂತ್ಯದಲ್ಲಿ ಕಡಿಮೆಯಾಗಿತ್ತು. ಭಾನುವಾರ ನಿಷ್ಕ್ರಿಯವಾಗಿದ್ದ ದರ, ಸೋಮವಾರ (ಮಾರ್ಚ್ 24) ಕುಸಿತ ಕಂಡಿದೆ.

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ಎಷ್ಟು?
ಮಾರ್ಚ್ 24ರಂದು ಬೆಂಗಳೂರಿನಲ್ಲಿ 24 ಕ್ಯಾರಟ್ ಶುದ್ಧ ಚಿನ್ನದ ದರ 10 ಗ್ರಾಂಗೆ ₹89,620 ಆಗಿದ್ದರೆ, 22 ಕ್ಯಾರಟ್ ಆಭರಣ ಚಿನ್ನದ ದರ ₹82,150 ಆಗಿದೆ.18 ಕ್ಯಾರಟ್ ಚಿನ್ನದ ಬೆಲೆ ₹67,220 ಆಗಿದೆ.

ಬೆಳ್ಳಿಯ ದರ ಎಷ್ಟು?
ಭಾನುವಾರದೊಂದಿಗೆ ಹೋಲಿಸಿದರೆ ಬೆಳ್ಳಿಯ ದರ ನಿಷ್ಕ್ರಿಯವಾಗಿದೆ. ಬೆಂಗಳೂರಿನಲ್ಲಿ 1ಕೆಜಿ ಬೆಳ್ಳಿಯ ದರ ₹1,01,000 ತಲುಪಿದೆ.ಆರ್ಥಿಕ ಅನಿಶ್ಚಿತತೆ ಮತ್ತು ಜಾಗತಿಕ ಸಂಕಟದಿಂದ ಅಮೇರಿಕನ್ ಡಾಲರ್‌ನ ಮೌಲ್ಯ ಐದು ತಿಂಗಳ ಕಡಿಮೆ ಮಟ್ಟಕ್ಕೆ ಕುಸಿದಿದೆ. ಟ್ರಂಪ್ ಅವರ ತೆರಿಗೆ ಯುದ್ಧದಿಂದ ಡಾಲರ್‌ನ ಮೌಲ್ಯ ಅಸ್ಥಿರವಾಗಿದ್ದು, ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ