ಸುದ್ದಿಬಿಂದು ಬ್ಯೂರೋ ವರದಿ
ಬನವಾಸಿ (ಉತ್ತರ ಕನ್ನಡ): ಅನೈತಿಕ ಸಂಬಂಧ ಆರೋಪದ ಹಿನ್ನೆಲೆ ವಿವಾಹಿತ ಮಹಿಳೆಯ ಸಂಬಂಧಿಕರು ಯುವಕನನ್ನು ಕಾಡಿಗೆ ಕರೆದುಕೊಂಡು ಹೋಗಿ ದೊಣ್ಣೆಗಳಿಂದ ಮನಸೋ ಇಚ್ಛೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಸಮೀಪದ ಅರೆಕೊಪ್ಪದಲ್ಲಿ ನಡೆದಿದೆ.

ಜನವರಿ 2ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೆ ಒಳಗಾದ ಯುವಕ ತನ್ವೀರ್ ಎಂದು ಗುರುತಿಸಲಾಗಿದ್ದು, ಮಹಮ್ಮದ್ ಕುದ್ದೂಸ್ ಹಾಗೂ ಆತನ ತಂಡದಿಂದ ತನ್ವೀರ್‌ಗೆ ತೀವ್ರವಾಗಿ ಥಳಿಸಲಾಗಿದೆ ಎನ್ನಲಾಗಿದೆ. ದೊಣ್ಣೆಗಳಿಂದ ತನ್ವೀರ್‌ಗೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತನ್ವೀರ್ ಮಹಮ್ಮದ್ ಕುದ್ದೂಸ್ ಅವರ ಅಕ್ಕನ ಮಗಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಹೇಳಲಾಗಿದೆ. ಪದೆಪದೆ ಆಕೆಯನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದ ತನ್ವೀರ್‌ನ ವಿಚಾರ ತಿಳಿದ ಮಹಮ್ಮದ್ ಕುದ್ದೂಸ್ ಹಾಗೂ ಆತನ ತಂಡದ ಸದಸ್ಯರು ತನ್ವೀರ್‌ಗೆ ಕಾಡಿಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಘಟನೆ ಸಂಬಂಧ ತನ್ವೀರ್ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ/ಮೃತ ರಾಮಚಂದ್ರ ಗೌಡ ಮನೆಗೆ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಭೇಟಿ: ಸಾಂತ್ವನ ಹೇಳಿ ಧನಸಹಾಯ