ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಸರಕಾರಿ ಕಚೇರಿಯಲ್ಲೆ ಸಮವಸ್ತ್ರದಲ್ಲೇ ನಡೆಸಿದ ರಾಸಲೀಲೆ ವಿಡಿಯೋ ವೈರಲ್ ಆಗಿದ್ದು, ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತಾಗಿದೆ.

ಡಿಜಿಪಿ ಶ್ರೇಣಿಯ ಐಜಿಪಿ ರಾಮಚಂದ್ರ ರಾವ್ ಅವರ ಅನೇಕ ಯುವತಿಯರೊಂದಿಗೆ ಕಚೇರಿಯಲ್ಲೇ ಸಮವಸ್ತ್ರದಲ್ಲಿ ಇರುವಾಗಲೇ ನಡೆಸಿದ ರಾಸಲೀಲೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿವೆ.
ವೈರಲ್ ಆಗಿರುವ ದೃಶ್ಯಗಳಲ್ಲಿ, ಅಧಿಕಾರಿ ತಮ್ಮ ಕಚೇರಿಯಲ್ಲೇ ಸಮವಸ್ತ್ರ ಧರಿಸಿದ ಸ್ಥಿತಿಯಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡುಬರುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರಸಿದ್ಧ ಮಾಡೆಲ್ ಯುವತಿ ಒಬ್ಬರ ಜೊತೆ ಅನೌಚಿತ್ಯದ ವರ್ತನೆ ನಡೆಸಿರುವ ದೃಶ್ಯಗಳನ್ನು ಸ್ವತಃ ಚಿತ್ರೀಕರಿಸಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪಗಳು ಸಹ ಹರಿದಾಡುತ್ತಿವೆ.
ಕೆಲಸದ ನಿಮಿತ್ತ ಕಚೇರಿಗೆ ಬರುವ ಮಹಿಳೆಯರ ಜೊತೆಯೂ ಅಸಭ್ಯ ವರ್ತನೆ ನಡೆಸುತ್ತಿದ್ದರೆಂಬ ಮಾತುಗಳು ಆಕ್ರೋಶಕ್ಕೆ ಕಾರಣವಾಗಿವೆ. ಈ ಪ್ರಕರಣದ ಸಂಬಂಧ ಗ್ರಹಸಚಿವರು ತಕ್ಷಣ ಕ್ರಮ‌ ಜರುಗಿಸಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ. ಇಡೀ ಪ್ರಕರಣ ಇದೀಗ ರಾಜ್ಯ ರಾಜಕೀಯ ಹಾಗೂ ಪೊಲೀಸ್ ಇಲಾಖೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ/ಬಿಗ್ ಬಾಸ್ ಟ್ರೋಫಿ ಗೆದ್ದ ಗಿಲ್ಲಿ – ಗ್ರ್ಯಾಂಡ್ ಫಿನಾಲೆಯಲ್ಲಿ ಸಂಭ್ರಮದ ಕ್ಷಣ!