ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 12ರ ಫಿನಾಲೆ ವೇದಿಕೆಯಲ್ಲಿ ಭಾರೀ ಸಂಭ್ರಮ ಜೋರಾಯಿತು. ಕಠಿಣ ಪೈಪೋಟಿ, ಉತ್ಕಂಠೆಭರಿತ ಕ್ಷಣಗಳು ಮತ್ತು ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯ ನಡುವೆ ಕೊನೆಗೂ ಗಿಲ್ಲಿ ಬಿಗ್ ಬಾಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಅಂತಿಮ ಹಂತದಲ್ಲಿ ಸ್ಪರ್ಧಿಗಳು ನೀಡಿದ ಶ್ರಮ, ತಾಳ್ಮೆ ಹಾಗೂ ಆಟದ ತಂತ್ರಗಳು ಪ್ರೇಕ್ಷಕರ ಮನಗೆದ್ದಿದ್ದವು. ಆದರೆ ಮತದಾರರ ಅಪಾರ ಬೆಂಬಲ ಮತ್ತು ನಿರಂತರ ಸಾಧನೆಯಿಂದ ಗೆಲ್ಲಿ ಇತರರನ್ನು ಹಿಂದಿಕ್ಕಿ ವಿಜಯದ ಶಿಖರ ಏರಿದರು. ಟ್ರೋಫಿ ಕೈಗೆತ್ತಿಕೊಂಡ ಕ್ಷಣವೇ ವೇದಿಕೆಯ ಮೇಲೆ ಸಂಭ್ರಮದ ವಾತಾವರಣ ನಿರ್ಮಾಣವಾಯಿತು.

ಕಾರ್ಯಕ್ರಮದ ನಿರೂಪಕರು ವಿಜೇತನ ಹೆಸರನ್ನು ಘೋಷಿಸಿದ ತಕ್ಷಣ ಅಭಿಮಾನಿಗಳ ಕೇಕೆ, ಕೈತಟ್ಟಿ ಹರ್ಷೋದ್ಗಾರ ಮೊಳಗಿತು. ಗೆಲ್ಲಿ ತಮ್ಮ ಜಯವನ್ನು ಅಭಿಮಾನಿಗಳಿಗೆ ಅರ್ಪಿಸಿ, “ನನ್ನ ಮೇಲೆ ನಂಬಿಕೆ ಇಟ್ಟು ಬೆಂಬಲಿಸಿದ ಎಲ್ಲರಿಗೂ ಈ ಟ್ರೋಫಿ” ಎಂದು ಭಾವುಕವಾಗಿ ಹೇಳಿದರು.

ಈ ಮೂಲಕ ಬಿಗ್ ಬಾಸ್ ಇತಿಹಾಸದಲ್ಲಿ ಗೆಲ್ಲಿ ತಮ್ಮ ಹೆಸರನ್ನು ಚಿನ್ನದ ಅಕ್ಷರಗಳಲ್ಲಿ ಬರೆಯಿಸಿಕೊಂಡಿದ್ದು, ಅಭಿಮಾನಿಗಳ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ/Bigg Boss Bigg season 12/ ಬಿಗ್ ಬಾಸ್ ಕನ್ನಡ ಸೀಸನ್ 12:  ಗಿಲ್ಲಿ ಗೆಲುವು ಸುಲಭವಲ್ಲ?