ಹೊನ್ನಾವರ : ತುಂಬಾ ಅಪರೂಪದ ಹಾಗೂ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹೊನ್ನಾವರ ತಾಲೂಕಿನ ಹಾಡಗೇರಿ ಗ್ರಾಮದ ಎರಡು ವರ್ಷದ ಛಾಯಾ ಬಾಬು ನಾಯ್ಕ ಇವಳ ಚಿಕಿತ್ಸೆಗೆ ಆರ್ಥಿಕ ನೆರವು ಅಗತ್ಯವಾಗಿದ್ದು, ಮಗುವಿನ ಆರೋಗ್ಯ ಚಿಕಿತ್ಸೆಗೆ  ಕೈ ಚಾಚುವಂತೆ ಬಡ ಕುಟುಂಬ ಮನವಿ ಮಾಡಿದೆ.

ಕೇವಲ 2ವರ್ಷ ವಯಸ್ಸಿನ ಛಾಯಾ ಕ್ಯಾನ್ಸರ್‌ಗೆ ಸಮಾನವಾದ ಅಪರೂಪದ ರೋಗವೊಂದು ಪತ್ತೆಯಾಗಿದ್ದು, ಸದ್ಯ ಮಗು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ.ವೈದ್ಯರ ಸಲಹೆ ಮೇರೆಗೆ ಮಗುವಿಗೆ ನಿರಂತರ ಹಾಗೂ ದುಬಾರಿ ಚಿಕಿತ್ಸೆ ಅಗತ್ಯವಿದ್ದು, ಇದಕ್ಕೆ ಸುಮಾರು 16ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಬಡ ಕುಟುಂಬ ಹಿನ್ನೆಲೆಯ ಕಾರಣದಿಂದಾಗಿ ಈ ಭಾರೀ ಮೊತ್ತವನ್ನು ಭರಿಸುವುದು ಪಾಲಕರಿಗೆ ಅಸಾಧ್ಯವಾಗುತ್ತಿದೆ. ಮಗುವಿನ ತಂದೆ ಆಟೋ ಓಡಿಸಿಕೊಂಡು ಜೀವನ ನಡೆಸಿಕೊಂಡು ಬಂದಿದ್ದು, ಇದರಿಂದ ಬರುವ ಆದಾಯದಿಂದಲೇ ಕುಟುಂಬವನ್ನು ನಡೆಸಿಕೊಂಡು ಹೋಗಬೇಕಿದೆ.

ಈ ಪುಟ್ಟ ಮಗುವಿನ ಪ್ರಾಣ ಈಗ ನಿಮ್ಮೇಲ್ಲರ ಕೈಯಲ್ಲಿದೆ. ಹೀಗಾಗಿ ಮಾನವೀಯ ಹೃದಯ ಹೊಂದಿರುವ ದಾನಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಮುಂದೆ ಬಂದು ನೆರವು ನೀಡುವಂತೆ ಕುಟುಂಬಸ್ಥರು ಕಣ್ಣೀರಿನಿಂದ ಮನವಿ ಮಾಡಿಕೊಂಡಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಜೀವ ಮತ್ತು ಮರಣದ ನಡುವೆ ಹೋರಾಡುತ್ತಿರುವ ಪುಟ್ಟ ಮಗುವಿನ ಬದುಕಿಗೆ ಕುಟುಂಬಸ್ಥರು ಕೈ ಚಾಚಿದರೆ, ಆಕೆಯ ಭವಿಷ್ಯ ಬೆಳಗಿಸಬಹುದಾಗಿದೆ. ತಮ್ಮ ಕೈಲಾದಷ್ಟು ಸಹಾಯ ಮಾಡುವ ಮೂಲಕ ಮಗುವಿಗೆ ನೆರವಾಗುವಂತೆ ಪಾಲಕರು ಕಣ್ಣೀರಿನ ಮೂಲಕ ಕೈ ಮುಗಿದು ವಿನಂತಿಸಿಕೊಂಡಿದ್ದಾರೆ.

ನೆರವಿಗಾಗಿ ಸಂಪರ್ಕ ಹಾಗೂ ಬ್ಯಾಂಕ್ ವಿವರಗಳು:
📞 ಮೊಬೈಲ್: 6361434523
💳 UPI ID: bnaik9253@okaxis
🏦 ಬ್ಯಾಂಕ್: Union Bank
👤 ಖಾತೆದಾರ: Babu Narayana Naik
🔢 ಖಾತೆ ಸಂಖ್ಯೆ: 520101199358571
🔑 IFSC: UBIN0903469