ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ : ಪಟ್ಟಣದ ಕಾಳಮ್ಮನಗರದಲ್ಲಿ ನಡೆದಿದ್ದ ಹಿಂದೂ ಮಹಿಳೆ ರಂಜಿತಾ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ,ಮಹಿಳೆಯ ಮೃತಳ ದೇಹವನ್ನು ಇಂದು ಸ್ವಗ್ರಾಮ ಯಲ್ಲಾಪುರದ ಕಾಳಮ್ಮನಗರದಲ್ಲಿರುವ ಅವರ ಮನೆಗೆ ತರಲಾಯಿತು.

ಮೃತ ದೇಹ ಮನೆಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಹೃದಯವಿದ್ರಾವಕ ವಾತಾವರಣ ನಿರ್ಮಾಣವಾಯಿತು.ಈ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಮೃತ ರಂಜಿತಾ ಅವರ ದೇಹಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ದುಃಖತಪ್ತ ಕುಟುಂಬಸ್ಥರನ್ನು ಸಂತೈಸಿ, ಸರ್ಕಾರದ ಪರವಾಗಿ 5 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.ಕುಟುಂಬಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಮೃತ ರಂಜಿತಾ ಅವರ ಅಗಲಿಕೆಯಿಂದ ಕುಟುಂಬ ಸಂಪೂರ್ಣವಾಗಿ ಕಂಗೆಟ್ಟಿದ್ದು, ಸ್ಥಳೀಯರು ಹಾಗೂ ಬಂಧುಗಳು ಕಣ್ಣೀರಿನೊಂದಿಗೆ ಅಂತಿಮ ನಮನ ಸಲ್ಲಿಸಿದರು.