
ಸುದ್ದಿಬಿಂದು ಬ್ಯೂರೋ ವರದಿ
ಚಿತ್ರದುರ್ಗ: ಬೆಂಗಳೂರುದಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಕಂಟೈನರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ, ಬಸ್.ಗೆ ಬೆಂಕಿ ತಗುಲಿ ಗೋಕರ್ಣ, ಕುಮಟಾಕ್ಕೆ ಬರುತ್ತಿದ್ದ ಪ್ರಯಾಣಿಕರು ಸೇರಿ 12ಮಂದಿ ಸಜೀವ ದಹನವಾಗಿದ್ದಾರೆ.
ಅಪಘಾತದಲ್ಲಿ ವಿಜಯ ಭಂಡಾರಿ (ಕುಮಟಾ), ಮೇಘರಾಜ್, ಅಭೀಷೆಕ್, ಸೂರಜ್, ಮಹಮ್ಮದ್ ರಫೀಕ್ (ಚಾಲಕ), ಮಹಮ್ಮದ್ ಸಾಧಿಕ್(ಕಂಡಕ್ಟರ್), ಶಂಶಾಕ, ಆದಿತ್ಯ ಎನ, ಮಿಲನ್, ಕವಿತಾ, ಸಂದ್ಯಾ, ಅಪಘಾತದಲ್ಲಿ ಗಾಯಗೊಂಡವರು ಎನ್ನಲಾಗಿದೆ. ಅಪಘಾತದ ವೇಳೆ ಬಸ್ನಲ್ಲಿ ಡ್ರೈವರ್–ಕಂಡಕ್ಟರ್ ಸೇರಿ ಒಟ್ಟು 32 ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಈ ಬಸ್ನನಲ್ಲಿ 25ಪ್ರಯಾಣಿಕರು ಗೋಕರ್ಣಕ್ಕೆ, ಇಬ್ಬರೂ ಕುಮಟಾಕ್ಕೆ, ಬರುತ್ತಿದ್ದರು ಎನ್ನಲಾಗಿದೆ. ಅಪಘಾತದಲ್ಲಿ ಗಾಯಗೊಂಡವರಲ್ಲಿ 22 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಹಿರಿಯೂರು ಸರ್ಕಾರಿ ಆಸ್ಪತ್ರೆಗೆ 12 ಮಂದಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿರಾ ಆಸ್ಪತ್ರೆಯಲ್ಲಿ 9 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮೃತರು ಹಾಗೂ ಗಾಯಾಳುಗಳಲ್ಲಿ ಕುಮಟಾಕ್ಕೆ ತೆರಳುತ್ತಿದ್ದ 2 ಮಂದಿ ಮತ್ತು ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದ 2 ಮಂದಿ ಸೇರಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸ್ ಹಾಗೂ ತುರ್ತು ಸೇವಾ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ/ಕರಾವಳಿ ಉತ್ಸವದಲ್ಲಿ ಕನ್ನಡಾಭಿಮಾನ ವ್ಯಕ್ತಪಡಿಸಿದ ಸೋನು ನಿಗಮ್


