ಸುದ್ದಿಬಿಂದು ಬ್ಯೂರೋ‌ ವರದಿ
ಕಾರವಾರ: ಡಿಸೆಂಬರ್ 22 ರಿಂದ 28 ರ ವರೆಗೆ ಕಾರವಾರದ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ “ಕರಾವಳಿ ಉತ್ಸವ-2025” ನ್ನು ಆಚರಿಸುವ ಪ್ರಯುಕ್ತ ಉತ್ತರ ಕನ್ನಡ ಜಿಲ್ಲೆಯ ಪುರಾತನ ಐತಿಹಾಸಿಕ ಸ್ಥಳಗಳ ಹಳೆಯ ಛಾಯಾಚಿತ್ರಗಳು ಹಾಗೂ ಜಿಲ್ಲೆಯಲ್ಲಿ ಯಾವುದೇ ಪ್ರವಾಸಿ ಅಥವಾ ಐತಿಹಾಸಿಕ ಪ್ರಸಿದ್ದ ಸ್ಥಳಗಳಿಗೆ ಗಣ್ಯರು ಭೇಟಿ ನೀಡಿದ್ದ ಹಳೆಯ ಛಾಯಾಚಿತ್ರಗಳು ಲಭ್ಯವಿದ್ದಲ್ಲಿ ಅಂತಹ ಛಾಯಾಚಿತ್ರಗಳನ್ನು ಪ್ರವಾಸೋದ್ಯಮ ಇಲಾಖೆ, ಕಾರವಾರ ಕಛೇರಿಯಲ್ಲಿ ಒದಗಿಸಿದ್ದಲ್ಲಿ, ಆಕರ್ಷಕವುಳ್ಳ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗುವುದು.

ಛಾಯಾಚಿತ್ರ ಸಲ್ಲಿಸಲು ಡಿ.19 ಕೊನೆಯ ದಿನವಾಗಿದೆ. ಛಾಯಾಚಿತ್ರ ಅಳತೆ 2×2.5 ಅಡಿ (with frame) ನಲ್ಲಿರಬೇಕು.

ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಕಾರವಾರ, ಆರ್.ಟಿ.ಓ.ಆಫೀಸ್ ಹತ್ತಿ e-mail-ddtourismkarwar@gmail.com ದೂರವಾಣಿ: 08382-221172, ಮೊಬೈಲ್ ನಂ. 8618404610 / 9036074715 ಕ್ಕೆ ಸಂಪರ್ಕಿಸುವoತೆ ಉಪ ನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅವರ ಪ್ರಕಟಣೆ ಮೂಲಕ ತಿಳಿಸಲಾಗಿದೆ.

ಇದನ್ನೂ ಓದಿ/ಆಕಾಶದಲ್ಲೇ ಮಾನವೀಯತೆ: ವಿಮಾನದಲ್ಲಿ ಅಸ್ವಸ್ಥ ಮಹಿಳೆಯ ಪ್ರಾಣ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್