ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಕುಮಟಾ–ಶಿರಸಿ ರಾಷ್ಟ್ರೀಯ ಹೆದ್ದಾರಿ 766(ಇ) ಕಾಮಗಾರಿ ವಿಳಂಬ ಹಾಗೂ ಹೆದ್ದಾರಿಯಲ್ಲಿ ಖಾಸಗಿ ಬಸ್ ಓಡಾಟಕ್ಕೆ ಅವಕಾಶ ನೀಡಿ, ಸರಕಾರಿ ಬಸ್ ಸಂಚಾರ ನಿರ್ಬಂಧ ಮಾಡಿರುವುದನ್ನ ವಿರೋಧಿಸಿ ಇಂದು ಕರಾವಳಿ ಕನ್ನಡ ಸಂಘದ ಅಧ್ಯಕ್ಷ‌ ಭಾಸ್ಕರ ಪಟಗಾರ ನೇತೃತ್ವದಲ್ಲಿ, ವಿಶ್ವ ಮಾನವಹಕ್ಕು ಆಯೋಗ ಕುಮಟಾ ಘಟಕ‌ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಯಿತು.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕುಮಟಾ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಭಾರೀ ವಾಹನ ಸಂಚಾರಕ್ಕೆ ನಿರ್ಭಂದ ಹೇರಲಾಗಿತ್ತು, ಬರೋಬ್ಬರಿ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಕೊಡುತ್ತೇವೆ ಎಂದು ಗುತ್ತಿಗೆ ಪಡೆದ RNS ಕಂಪನಿಯವರು ಹೇಳಿದ್ದರು..ಜಿಲ್ಲಾಡಳಿತದಿಂದ ಅನುನತಿ‌ ಕೂಡಾ ಪಡೆದಿದ್ದರು ಆದರೆ ಈಗ ಒಂದು ವರ್ಷ ಕಳೀತಾ ಬಂದರು ಇನ್ನು ವಾಹನ ಸಂಚಾರಕ್ಕೆ ಅಧಿಕೃತವಾಗಿ ಅವಕಾಶ ಕೊಟ್ಟಿಲ್ಲ, ಆದ್ರೆ ಇಲ್ಲಿ ಖಾಸಗಿ ಬಸ್ ಸಂಚಾರ ನಡೆಯುತ್ತಿರೋದು ಕಂಡು ಬಂದಿದ್ದು ಈ‌ಹಿನ್ನಲೆಯಲ್ಲಿ ಸರ್ಕಾರಿ ಸಾರಿಗೆ ಬಸ್ ಸಂಚಾರಕ್ಕೂ ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿ ಕುಮಟಾ ಬಾಗದ ಕೆಲವು ಸಂಘಟನೆಯವರು ಜಂಟಿಯಾಗಿ ನಿಧಾನಗತಿಯ ಕಾಮಗಾರಿ ವಿರುದ್ಧ ಹೋರಾಟ ನಡೆಸಿದ್ದಾರೆ.

ವರ್ಷ ಕಳೆದರು ಕಾಮಗಾರಿ ಪೂರ್ಣಗೊಳ್ಳದೆ,ಸಾರಿಗೆ ಬಸ್ ಸಂಚಾರ ನಿಷೇಧಿಸಿ ವರ್ಷ ಕಳೆದರು ನಿರ್ಲಕ್ಷ್ಯ ತೋರುತ್ತಿರುವ NHAI ಮತ್ತು RNS ಕಂಪನಿ ವಿರುದ್ಧ ಆಕ್ರೋಶ ಹೊರ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಶಿರಸಿ ಯಿಂದ ಕುಮಟಾ ಮಾರ್ಗವಾಗಿ ಸಾಕಷ್ಟು ಸಾರಿಗೆ ಬಸ್ ಮಂಗಳೂರು ಭಾಗಕ್ಕೆ ಓಡಾಟ ನಡೆಸುತ್ತಿದ್ದವು, ಈಗ ಕಳೆದ ಒಂದು ವರ್ಷದಿಂದ ಸಾರಿಗೆ ಬಸ್ ಸಂಚಾರ ನಿಷೇಧದಿಂದ ಪರ್ಯಾಯ ಮಾರ್ಗದಲ್ಲೂ ರಸ್ತೆ ದುರ್ಗಮ ವಾಗಿದ್ರಿಂದ ಜನರು ಬಸ್ ಇಲ್ಲದೆ ಪರದಾಡುತ್ತಿದ್ದಾರೆ. ಖಾಸಗಿ ಬಸ್ ಓಡಾಟ ನಡೆಯುತ್ತಿರೋದು ಕಣ್ಣಿಗೆ ಕಂಡರು ಯಾರು ಕೂಡಾ ಕ್ರಮಕ್ಕೆ ಮುಂದಾಗಿಲ್ಲ ಆದರೆ ಸಾರಿಗೆ ಬಸ್ ಸಂಚಾರಕ್ಕೆ ಮಾತ್ರ ನಿರ್ಭಂದ ಹೇರಿರುವುದು ಆಕ್ರೋಶಕ್ಕೆ ಕಾರಣವಾಗಿದೆ..

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಟಾ ತಹಶಿಲ್ದಾರ ಅವರು ಕೂಡಲೆ ಕ್ರಮಕ್ಕೆ ಮುಂದಾಗಲಾಗುವುದು ಮತ್ತು ಕಾಮಗಾರಿ ಚುರುಕು ಪಡೆಯಲು ಗುತ್ತಿಗೆ ಕಂಪನಿಗೆ ಆದೇಶಿಸುತ್ತೆವೆ ಜೊತೆಗೆ ಕುಮಟಾ ಶಿರಸಿ ಸಂಚಾರ ತುಂಬಾ ಅತ್ಯವಶ್ಯಕ ವಾಗಿದ್ದು ಆದಷ್ಟು ಬೇಗ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಅಂತಾ ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ವಿಶ್ವ ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷರಾದ ಮಹೇಂದ್ರ ನಾಯಕ್, ಯುವ ನ್ಯಾಯವಾದಿ ವಿಕ್ರಂ ನಾಯ್ಕ್, ಪ್ರದೀಪ್ ನಾಯಕ್ ದೇವರಬಾವಿ ಮಂಜುನಾಥ್ ಎಲ್ ನಾಯ್ಕ, ಕನ್ನಡಪರ ಹೋರಾಟಗಾರ ರಾಜು ಮಾಸ್ತಿ ಹಳ್ಳ .ದೀಪಕ್ ನಾಯ್ಕ್ ಕತ್ಗಾಲ್. ಶಿವರಾಮ ಹರಿಕಾಂತ್ ಕಿಮಾನಿ. ಬಾಲಕೃಷ್ಣ ನಾಯ್ಕ್ ಮೂರೂರು ಎಮ್ ಜಿ ಭಟ್ ಕುಮಟಾ ಕೃಷ್ಣಗೌಡ ಶಿಳ್ಳೆ ಗಜು ನಾಯಕ್ ಅಳ್ವೆಕೋಡಿ.ಜಿ ಜಿ ಹೆಗಡೆ. ಜಿ ಎನ್ ಗೌಡ ಹೊನ್ನಾವರ ಮೊಹಮ್ಮದ್ ಹನೀಫ್ ಎಸ್ ಟಿ ಪಿ ಐ ಅಧ್ಯಕ್ಷರು ಕುಮಟಾ. ಇರ್ಷಾದ್ ಮೇರಿ ಜಾನ್. ಪಾಂಡು ಪಟಗಾರ ಮಿರ್ಜಾನ್. ರಾಘು ಅಂಬಿಗ. ಬಲಿಂದ್ರ ಗೌಡ ಗೋಕರ್ಣ. ಅನಂತ ಗೌಡ ಗೋಕರ್ಣ. ಕಲೀಲ್ ಮಿರ್ಜಾನ್. ತಿಮ್ಮಪ್ಪ ಮುಕ್ರಿ ಧಾರೇಶ್ವರ ಸವಿತಾ ಶಿರಸಿ ಪುಷ್ಪ ನಾಯಕ್ ದಿವಗಿ. ಸುನಿಲಾ ನಾಯಕ್. ರಾಜೇಶ್ ಪಟಗಾರ. ದತ್ತು ಬಂಡಾರಿ ದಿನೇಶ್ ಶಾನಭಾಗ್ ಬಲಿಂದ್ರ ಗೌಡ ಕುಮಟಾ ಜಗದೀಶ್ ನಾಯಕ್ ಹೆಬ್ಬಯಿಲ್. ಇನ್ನಿತರ ಮುಖಂಡರು ನೂರಾರು ಸ್ಥಳೀಯರು ಸಾರ್ವಜನಿಕರು ಹಾಜರಿದ್ದರು.