ಸುದ್ದಿಬಿಂದು ಬ್ಯೂರೋ ವರದಿ
ಮುಂಡಗೋಡ: ಕಾತೂರು ಅರಣ್ಯ ವ್ಯಾಪ್ತಿಯಲ್ಲಿ  ಅರಣ್ಯ ಅಧಿಕಾರಿಗಳು ನಡೆಸಿದ ಭರ್ಜರಿ ದಾಳಿಯಲ್ಲಿ
ಚಿಂಕೆ ಚರ್ಮ ಹಾಗೂ ಕಾದು ಹಂದಿ ಮಾಂಸ ಸಾಗಾಟ ಮಾಡುತ್ತಿದ್ದ ಐವರು ಆರೋಪಿಗಳನ್ನ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ

ಬಾಳೆಕೊಪ್ಪ (ಕರ್ಕಲ ಜಡ್ಡಿ) ಹತ್ತಿರ ಎರಡು ಬೈಕ್‌ಗಳಲ್ಲಿ ಐವರು ಆರೋಪಿಗಳು ಜಿಂಕೆ ಚರ್ಮ ಹಾಗೂ ಕಾಡುಹಂದಿಯ ಮಾಂಸ ಸಾಗಾಟ ಮಾಡುತ್ತಿದ್ದು, ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಬಂಧಿತ ಆರೋಪಿಗಳು:
• ಕನಕಪ್ಪ ದುರ್ಗಪ್ಪ ಮಾದರ್ (ಬಾಳೆಕೊಪ್ಪ)
• ಪರಶುರಾಮ್ ಕನಕಪ್ಪ ಮಾದರ್ (ಬಾಳೆಕೊಪ್ಪ)
• ಸುರೇಶ್ ಬಿನ್ ದೇವಪ್ಪ (ಕೋಡಿಕೊಪ್ಪ, ಸೋರಬ)
• ಉಮೇಶ್ ಬಿನ್ ಗುಡ್ಡಪ್ಪ (ಕೋಡಿಕೊಪ್ಪ, ಸೋರಬ)
• ಶಿವಪುತ್ರಪ್ಪ ಬಿನ್ ಹನುಮಂತಪ್ಪ (ಕೋಡಿಕೊಪ್ಪ, ಸೋರಬ)

ಕಾರ್ಯಾಚರಣೆಯಲ್ಲಿ ಎರಡು ಬೈಕ್‌ಗಳು, ಒಂದು ಜಿಂಕೆ ಚರ್ಮ ಹಾಗೂ 3.9 ಕೆಜಿ ಕಾಡುಹಂದಿಯ ಮಾಂಸವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.‌ ಘಟನೆಯ ಕುರಿತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿರುವ ಅರಣ್ಯ ಇಲಾಖೆ, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ..

ಇದನ್ನೂ ಓದಿ/ಕರಾವಳಿ ಉತ್ಸವ:ಕಲಾವಿದರಿಂದ ಅರ್ಜಿ ಆಹ್ವಾನ