ಸುದ್ದಿಬಿಂದು ಬ್ಯೂರೋ ವರದಿ
ಜೋಯಿಡಾ : ತಾಲೂಕಿನ ಸಿಂಗರ್ಗಾವ್ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಟ್ರಕ್ ಚಾಲಕ ಗಂಟೆಗಟ್ಟಲೇ ವಾಹನದಲ್ಲೇ ಸಿಲುಕಿಕೊಂಡ ಘಟನೆ ಜೋಯಿಡಾ–ಜಗಲಬೇಟ್ನಿಂದ ದಾಂಡೇಲಿಗೆ ಸಂಪರ್ಕಿಸುವ ಸಿಂಗರ್ಗಾವ್ ರಸ್ತೆ ಮಾರ್ಗದಲ್ಲಿ ನಡೆದಿದೆ.
ಅಪಘಾತಕ್ಕೆ ಒಳಗಾದ ಟ್ರಕ್ ಗೋವಾದಿಂದ ದಾಂಡೇಲಿಗೆ ಬರುತಿದ್ದ ವೇಳೆ ಎದುರಿನಿಂದ ಬಂದ ವಾಹನವನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಅಪಘಾತದಲ್ಲಿ ಚಾಲಕ ಶಾಹಿದ್ ನಾಯಕವಾಡಿ (24) ಗಂಭೀರವಾಗಿ ಗಾಯಗೊಂಡಿದ್ದು, ಟ್ರಕ್ ಒಳಗೆ ಸಿಲುಕಿಕೊಂಡಿದ್ದ,ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಗಂಟೆಗಳ ಕಾಲ ಶ್ರಮಿಸಿ ಟ್ರಕ್ ಒಳಗಡೆ ಸಿಲುಕಿಕೊಂಡ ಚಾಲಕನಿಗೆ ಹೊರಗೆ ತೆಗೆದಿದ್ದಾರೆ. ಗಾಯಾಳುವನ್ನು ತಕ್ಷಣ 108 ಆಂಬ್ಯುಲೆನ್ಸ್ ಮೂಲಕ ರಾಮನಗರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


