ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ: ತಾಲೂಕಿನ ಮುಖ್ಯರಸ್ತೆಯ ಚೌಡಿಆಣೆ ಕ್ರಾಸ್ ಬಳಿ ಎರಡು ಬೈಕ್‌ನಡುವೆ ನಡೆದ ಭೀಕರ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ಇಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಘಟನೆಯಲ್ಲಿ ಕೊಡಿಗದ್ದೆಯ ಮೂಲದ ವಿನಾಯಕ ಗೌಡ ಮೃತವ್ಯಕ್ತಿ ಎನ್ನುವುದು ಗೊತ್ತಾಗಿದೆ. ಅಪಘಾತದ ಬಳಿಕ ಸ್ಥಳೀಯರು ತಕ್ಷಣವೇ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸಿದ್ದಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಅಪಾತದ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Siddapur: A tragic accident occurred near Choudiaane Cross on the main road of the taluk, where two motorcycles collided head-on. One rider died on the spot, and two others sustained serious injuries.
The deceased has been identified as Vinayak Gowda, a native of Kodigadde. After the accident, locals immediately shifted the injured to a nearby hospital.
Upon receiving the information, the Siddapur Police visited the spot and conducted an inspection. A case has been registered at the Siddapur Police Station regarding the incident


