ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ನಾಮಧಾರಿ ವಿದ್ಯಾವರ್ಧಕ ಸಂಘ(ರಿ) ಬರ್ಗಿ ಪಂಚಾಯತ ವಲಯದ ಆಶ್ರಯದಲ್ಲಿ ಇಂದು ಬೆಟ್ಕುಳಿಯ ನಾಮಧಾರಿ ಸಮುದಾಯ ಭವನದಲ್ಲಿ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಉದಯ ಆರ್ ನಾಯ್ಕ  ಅವರು ಕಾರ್ಯಕ್ರಮ ಉದ್ಘಾಟಿಸಿ ಬಳಿಕ  ಸನ್ಮಾನಿತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಉದಯ ಆರ್ ನಾಯ್ಕ  ಅವರು, “ಪ್ರತಿಯೊಬ್ಬ ವಿದ್ಯಾರ್ಥಿಯೂ ಶ್ರಮಿಸಿದರೆ ಗುರಿ ಮುಟ್ಟಲು ಸಾಧ್ಯ. ನಿಮ್ಮ ಪರಿಶ್ರಮಕ್ಕೆ ಸದಾ ಪ್ರೋತ್ಸಾಹ ನಮ್ಮಿಂದ ಸಿಗುತ್ತದೆ. ಹೆಚ್ಚು ಶ್ರಮಿಸಿದರೆ ಭವಿಷ್ಯ ಸುಖಕರ. ಪಾಲಕರನ್ನು ಗೌರವಿಸುವುದು ಮಕ್ಕಳ ಮೊದಲ ಪಾಠವಾಗಬೇಕು. ಶಿಕ್ಷಣದ ನಿಜವಾದ ಮೌಲ್ಯವನ್ನು ಅರ್ಥಮಾಡಿಕೊಳ್ಳಬೇಕು; ಅಂಕಗಳಿಗಿಂತ ಕೌಶಲ್ಯವೂ ಮುಖ್ಯ,” ಪಾಲಕರೂ ತಮ್ಮ ಮಕ್ಕಳನ್ನು ಇತರರ ಜೊತೆ ಹೋಲಿಸಿ ಶಿಕ್ಷಣದ ಒತ್ತಡದ‌ ಹೇರುವಂತಾಗಬಾರದು. ಶಿಕ್ಷಣದ ಜೊತೆ ಸಂಸ್ಕಾರ ಮುಖ್ಯ ಎಂದರು

ಮುಖ್ಯ ಅತಿಥಿಗಳಾಗಿ ಬಾಗವಹಿಸಿದ  ನಿವೃತ್ತ ಉಪನಿರ್ದೇಶಕರಾದ ಸಿ ಎಸ್ ನಾಯ್ಕ ಅವರು ಮಾತನಾಡಿ, “ಬರ್ಗಿ ಪಂಚಾಯತ್ ವಲಯದಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಪ್ರಗತಿಗೆ ಪಾಲಕರ ಸಹಕಾರ ಅತ್ಯಂತ ಮುಖ್ಯ. ಶಿಕ್ಷಣಕ್ಕಾಗಿ ನಮ್ಮಿಂದ ಯಾವಾಗಲೂ ಸಂಪೂರ್ಣ ಬೆಂಬಲ ಇದೆ ಎಂದರು

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ರತ್ನಾಕರ ಎಮ್ ನಾಯ್ಕ ಪ್ರತಿಭಾಪುರಸ್ಕಾರ ಅಷ್ಟೆ ಆದರೆ ಸಾಲದು  ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಾಗಾರಗಳನ್ನ ಆಯೋಜಿಸಲು ಸಂಘ ಮುಂದಾಗಬೇಕು ಎಂದು ಸಲಹೆ ನೀಡಿದರು..

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಾಮಧಾರಿ ವಿಧ್ಯಾವರ್ಧಕ ಬರ್ಗಿ ಪಂಚಾಯತ ವಲಯದ ಅಧ್ಯಕ್ಷರಾದ ಹನುಮಂತ ನಾಯ್ಕ ಸಂಘಟನೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಹೀಗಾಗಿ‌ ಎಲ್ಲರ ಸಹಕಾರದಿಂದಾಗಿ ಈ ಸಂಘಟನೆ ಕಳೆದ ಇಪ್ಪತ್ತು ವರ್ಷಗಳಿಂದ ಸುದೀರ್ಘವಾಗಿ ಮುನ್ನೆಡೆದುಕೊಂಡು ಹೋಗುತ್ತಿದೆ.‌ ಮುಂದಿನ ದಿನದಲ್ಲಿಯೂ ಎಲ್ಲರ ಸಹಕಾರ ಇದೇ ರೀತಿ ಇರಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಅಂಕೋಲಾ‌ ತಾಲೂಕಾ ನಾಮಧಾರಿ ಆರ್ಯ ಈಡಿಗ ಅಭಿವೃದ್ಧಿ ಒಕ್ಕೂಟದ ಅಧ್ಯಕ್ಷರಾಗಿರುವ ನಾಗೇಶ ನಾಯ್ಕ,ಜಾನಕಿರಾಮ ವೃದ್ಧಾಶ್ರಮ, ಅನಾಥಾಶ್ರಯ ಕುಮಟಾದ ಸಂಸ್ಥಾಪಕರಾದ ಆಶಾ ವಸಂತ ನಾಯ್ಕ , ಶಿಕ್ಷಕ ಗಣಪತಿ ನಾಯ್ಕ ಗೋಕರ್ಣ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ  ಬರ್ಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ನಾಗರಾಜ ಕೆ ನಾಯ್ಕ, ಶಾಮಿಯಾನ ಮತ್ತು ಧ್ವನಿ ಬೆಳಕು ಸಂಘ ಉತ್ತರ ಕನ್ನಡ ಇದರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಕಾಶಿನಾಥ ನಾಯ್ಕ, ನಾಮಧಾರಿ ಬೆಟ್ಕುಳಿ ಕೂಟದ ಯಜಮಾನರಾದ ರಾಮನಾಥ ನಾಯ್ಕ, ಬರ್ಗಿ ನಾಮಧಾರಿ ಒಕ್ಕೂಟದ ಯಜಮಾನರಾದ ಮಂಜುನಾಥ ನಾಯ್ಕ, ಕಿಮಾನಿ ನಾಮಧಾರಿ ಒಕ್ಕೂಟ ಯಜಮಾನರಾದ ಕಮಲಾಕರ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಐದನೆ ತರಗತಿಯಿಂದ ಪಿಯುಸಿ ದ್ವೀತಿಯ ತರಗತಿಯಲ್ಲಿ ಓದುತ್ತಿರುವ ಸಮಾಜದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.ಯೋಗಾಸನ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಪಾವನಿ ನಾಯ್ಕ ಹಾಗೂ ಭಾರತ ಸರ್ಕಾರ ನಡೆಸಿದ ರೆಡ್ ರಿಬ್ಬನ್ ನ್ಯಾಕೊ ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಸ್ನೇಹಾ ಉದಯ ನಾಯ್ಕ ಈ ವಿದ್ಯಾರ್ಥಿಗಳನ್ನು  ಗೌರವಿಸಲಾಯಿತು.
ನಿವೃತ್ತ ಶಿಕ್ಷಕರಾಗಿರುವ ಉಮೇಶ ಡಿ ನಾಯ್ಕ ಬರ್ಗಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮೋಹನ ಕೆ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ವರದಿಗಾರ ಉದಯ್ ಬರ್ಗಿ ವಂದಿಸಿದರು..

Namadhari Vidyavardhaka Sangha Felicitates Meritorious Students: Recognition Ceremony Held in Betkuli
Kumta: Under the auspices of the Namadhari Vidyavardhaka Sangha (R), Bargi Panchayat Zone, a meritorious students felicitation programme was held today at the Namadhari Community Hall in Betkuli.

The event was inaugurated by Kumta Block Education Officer Uday R. Naik, who congratulated the honored students. Addressing the gathering, he said, “Every student can achieve their goals with consistent hard work. We are always here to encourage your efforts. With dedication, the future becomes brighter. Respecting parents should be the first lesson for children. One must understand the real value of education; along with marks, skills are equally important. Parents should avoid comparing their children with others or creating undue academic pressure. Culture and values should go hand in hand with education.”

Chief guest C. S. Naik, retired Deputy Director of the Education Department, said, “The Bargi Panchayat zone has many talented students. Parental support plays a crucial role in a child’s progress. We will always extend full support for education.”

Another chief guest, former President of the Education and Health Standing Committee Ratnakar M. Naik, remarked, “Felicitating students alone is not enough. The organisation should also take up initiatives to create awareness about higher education through training and guidance workshops for students.”

Presiding over the programme, Hanumantha Naik, President of Namadhari Vidyavardhaka Sangha, Bargi Panchayat Zone, said, “The cooperation of every member is essential for the growth of this organisation. With everyone’s support, the Sangha has been progressing successfully for the past twenty years. We hope this support continues in the future as well.”

Among the dignitaries who extended their best wishes were Nagesh Naik, President of Ankola Taluk Namadhari Arya Ediga Development Union; Asha Vasanth Naik, founder of Janakiram Old Age Home and Orphanage, Kumta; and teacher Ganapathi Naik, Gokarna.

Also present on the dais were Nagaraj K. Naik, Director of Bargi Agricultural Service Cooperative Society; Dinkar Kashinath Naik, District General Secretary of Shamiyana and Sound-Light Association, Uttara Kannada; Ramanath Naik, host of Namadhari Betkuli Koota; Manjunath Naik, host of Bargi Namadhari Union; and Kamalakar Naik, host of Kimani Namadhari Union.

Students from 5th Standard to PUC II year were felicitated during the event.
Special honors were given to Pavani Naik, selected for the state-level yoga competition, and Sneha Uday Naik, who won second place in the Red Ribbon NACCO national-level quiz competition organized by the Government of India.

Retired teacher Umesh D. Naik, Bargi, delivered the introductory remarks. Teacher Mohan K. Naik conducted the programme, and reporter Uday Bargi proposed the vote of thanks.

ಇದನ್ನೂ ಓದಿ / ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ತುಕಾರಾಮ  ನಾಯ್ಕ ವಿಧಿವಶ