ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ: ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ಬಿದಿ ನಾಯಿಗಳ ಆತಂಕಕಾರಿ ಹಾವಳಿ ಮುಂದುವರಿದಿದ್ದು, ಕಳೆದ ನಾಲ್ಕು ದಿನಗಳಲ್ಲಿ 10 ಕ್ಕೂ ಹೆಚ್ಚು ಜನರು ನಾಯಿ ದಾಳಿಗೆ ಗುರಿಯಾಗಿರುವ ಘಟನೆಗಳು ಸ್ಥಳೀಯರಲ್ಲಿ ಭೀತಿಯ ವಾತಾವರಣ ಉಂಟುಮಾಡಿವೆ.
ನಗರದ ಹಲವು ಪ್ರದೇಶಗಳಲ್ಲಿ ನಾಯಿ ದಾಳಿಯ ಪ್ರಕರಣಗಳು ದಾಖಲೆಯಾಗಿದ್ದು, ನಿನ್ನೆ ಒಂದೇ ದಿನ ಐದಕ್ಕೂ ಹೆಚ್ಚು ಜನರು ನಾಯಿ ದಾಳಿಗೆ ಒಳಗಾಗಿದ್ದಾರೆ. ದಾಳಿಗೊಳಗಾದವರಲ್ಲಿ ಮಕ್ಕಳು ಮತ್ತು ವಯೋವೃದ್ಧರು ಕೂಡ ಸೇರಿದ್ದಾರೆ. ವೈಷ್ಣವಿ (14), ಹಜರತ್ (8), ನಾಗಮ್ಮ (5) ಸೇರಿದಂತೆ ರೋಜಿ (70), ಪೆಟ್ರಿನಾ (60) ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕಿತ್ಸೆ ನೀಡಿ ಮನೆಗೆ ಹಿಂತಿರುಗುತ್ತಿದ್ದ ದಾಂಡೇಲಿ ಟಿಎಚ್ಒ ಅನೀಲ ಅವರ ಮೇಲೂ ನಾಯಿ ದಾಳಿ ನಡೆದಿದ್ದು, ಅವರು ಕಳೆದ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವುದು ತಿಳಿದು ಬಂದಿದೆ.
ನಗರದಲ್ಲಿ ಸುಮಾರು ಎರಡೂ ಸಾವಿರಕ್ಕೂ ಹೆಚ್ಚು ಬಿದಿ ನಾಯಿಗಳು ಸಂಚರಿಸುತ್ತಿರುವುದರಿಂದ ದಾಂಡೇಲಿ ನಿವಾಸಿಗಳು ಭಯಭೀತರಾಗಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ನಾಲ್ಕು ದಿನಗಳಿಂದ ಕ್ರಮ ಕೈಗೊಳ್ಳದ ನಗರಸಭೆ ಆಡಳಿತದ ವಿರುದ್ಧ ಸಾರ್ವಜನಿಕರ ಅಸಮಾಧಾನ ಹಾಗೂ ಆಕ್ರೋಶ ಹೆಚ್ಚುತ್ತಿದೆ.
ಬಿದಿ ನಾಯಿಗಳ ಹಾವಳಿಯನ್ನು ತಡೆಯಲು ತುರ್ತು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ನಗರಸಭೆ ಅಧಿಕಾರಿಗಳ ಬಳಿ ಆಗ್ರಹಿಸಿದ್ದಾರೆ..
Stray Dog Menace in Dandeli: Over 10 People Attacked in Four Days
Dandeli: The alarming menace of stray dogs continues in Dandeli of Uttara Kannada district, where more than 10 people have been attacked in the last four days, creating an atmosphere of fear among local residents.
Several incidents of dog attacks have been reported from different parts of the city. Yesterday alone, over five people were attacked. Among the victims are children as well as elderly citizens. Vaishnavi (14), Hazrath (8), Nagamma (5), Rozy (70), and Petrina (60) are undergoing treatment at a local hospital after suffering injuries.
Dandeli THO Anil, who was returning home after providing medical treatment, was also attacked by stray dogs. He has been under treatment for the last two days, according to reports.
With nearly two thousand stray dogs roaming across Dandeli, residents are living in constant fear. Public anger and dissatisfaction are growing against the city municipality for failing to take action over the past four days.
Locals have urged municipal authorities to take immediate steps to curb the stray dog menace and restore safety in the city.
ಇದನ್ನೂ ಓದಿ/ಅರಬೈಲ್ ಘಟ್ಟದಲ್ಲಿ ಎಥಿನಾಲ್ ಲಾರಿ ದುರಂತ: ಬೆಂಕಿಗಾಹುತಿಯಾಗಿ ಲಾರಿ ಭಸ್ಮ, ಚಾಲಕ ಪಾರು


