ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : “ವೃಕ್ಷಮಾತೆ” ಎಂದೇ ಪ್ರಸಿದ್ಧರಾಗಿದ್ದ, ಶತಾಯುಷಿ ಪರಿಸರ ಹೋರಾಟಗಾರ್ತಿ ಸಾಲುಮರ ತಿಮ್ಮಕ್ಕ (ಕೆ.ತಿಮ್ಮಕ್ಕ) ಅವರು ಇಂದು ವಿಧಿವಶರಾದರು. ಇದರ ಬೆನ್ನಲ್ಲೆ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದಿನ ಅಧೀನ ಕಾರ್ಯದರ್ಶಿ ಅವರ ಸಹಿ ಇರುವ ಪತ್ರವೊಂದು ಹರಿದಾಡುತ್ತಿದೆ. ಕೇವಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಇರುತ್ತದೆ. ಆದೇಶದ ಕೆಳಗೆ ಸಹಿ ಮಾಡಿದ ಅಧಿಕಾರಿಯು ಪ್ರಸ್ತುತ ಆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಆದರೆ ಈಗ ಅಧೀನ ಕಾರ್ಯದರ್ಶಿ ಬದಲಾವಣೆಯಾಗಿದ್ದು ಇದು ಸುಳ್ಳು ಸುದ್ದಿಯಾಗಿದೆ..
ಅವರ ನಿಧನದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ನಾಳೆ, ನವೆಂಬರ್ 15 ರಂದು ಶಾಲಾ ಮತ್ತು ಕಾಲೇಜುಗಳಿಗೆ ರಜೆ ಎಂದು ಸುಳ್ಳು ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಿದ್ದು—
“ತಿಮ್ಮಕ್ಕ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇವೆ. ಆದರೆ ಶಾಲೆ-ಕಾಲೇಜುಗಳಿಗೆ ಯಾವುದೇ ರಜೆ ಘೋಷಿಸಿಲ್ಲ. ವೈರಲ್ ಆಗುತ್ತಿರುವ ಮಾಹಿತಿ ಸಂಪೂರ್ಣ ಸುಳ್ಳಾಗಿದೆ.
Karwar: Centenarian environmental activist Salumarada Thimmakka (K. Thimmakka), widely known as the “Tree Mother,” passed away today. Following her demise, a letter bearing the signature of a former Under Secretary has been circulated on social media claiming that tomorrow has been declared a holiday for schools and colleges. However, the Under Secretary has since been changed, and the circulating letter is completely fake.
After her demise, rumours spread across social media claiming that November 15 has been declared a holiday for schools and colleges. Senior officials from the Education Department have clarified:
“We pay our respects to Thimmakka. But no holiday has been declared for schools or colleges. The information going viral is entirely false.”




