ಸುದ್ದಿಂದು ಬ್ಯೂರೋ ವರದಿ/ ಹೊನ್ನಾವರ: ಕಳೆದ ಕೆಲವು ದಿನಗಳ ಹಿಂದೆ ಹೊನ್ನಾವರ ತಾಲೂಕಿನ ಕಾಸರಕೋಡಿನಲ್ಲಿ ಹರಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಸಂತೋಷ ಗೌಡ ಮತ್ತು ಪತ್ನಿ ಶೀತು ಗೌಡ ಅವರ ಕುಟುಂಬಕ್ಕೆ ಸರ್ಕಾರದಿಂದ ಹತ್ತು ಲಕ್ಷ ಹಾಗೂ ಸಚಿವ ಮಂಕಾಳ್‌ ವೈದ್ಯ ಅವರು ವೈಯಕ್ತಿಕವಾಗಿ ೫ ಲಕ್ಷ ಪರಿಹಾರ ಹಣ ನೀಡಿದ್ದಾರೆ.

ಮೃತ ಕುಟುಂಬಕ್ಕೆ ರಾಜ್ಯ ಸರ್ಕಾರದ ಪರವಾಗಿ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಮೃತರ ಮಕ್ಕಳಿಗೆ 10 ಲಕ್ಷ ರೂ. ಪರಿಹಾರ ಚೆಕ್‌ ಹಾಗೂ ವೈಯಕ್ತಿಕವಾಗಿ 5 ಲಕ್ಷ ರೂ. ನಗದು ಸಹಾಯ ಹಸ್ತ ನೀಡಿದ್ದಾರೆ. ಇನ್ನೂ ದುರ್ಘಟನೆಯಲ್ಲಿ ತಂದೆ ಹಾಗೂ ತಾಯಿ ಕಳೆದುಕೊಂಡ ಮಕ್ಕಳ ಭವಿಷ್ಯ ಸುರಕ್ಷಿತವಾಗಿರಲು ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜೊತೆಗೆ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಉದ್ಯೋಗ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಇನ್ನಷ್ಟು ಮಹತ್ವದ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ